ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ಆರಂಭಗೊಂಡು 50ಕ್ಕೂ ಹೆಚ್ಚು ಪಂದ್ಯಗಳು ಮುಕ್ತಾಯಗೊಂಡರು ಇದುವರೆಗೂ ಯಾವ ತಂಡವು ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಇತ್ತ ಮೊದಲಾರ್ಧದಲ್ಲಿ ಸತತ ಸೋಲುಗಳ ಮೂಲಕ ಕಂಗೆಟ್ಟಿದ್ದ ಆರ್ಸಿಬಿ ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದು, ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಆರ್ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ವಿರುದ್ಧ ಆಡಲಿದೆ. ಈ ಮೂರು ಪಂದ್ಯಗಳಲ್ಲೂ ಆರ್ಸಿಬಿ ಭರ್ಜರಿ ಜಯ ಗಳಿಸಿದರೆ ಮಾತ್ರ ಉತ್ತಮ ರನ್ರೇಟ್ನೊಂದಿಗೆ ಸುಗಮವಾಗಿ ಪ್ಲೇಆಫ್ಗೇರಬಹುದಾಗಿದೆ. ಆದರೆ, ಆರ್ಸಿಬಿಯ ಪ್ಲೇಆಫ್ ಭವಿಷ್ಯ ಉಳಿದ ತಂಡಗಳ ಮೇಲೆ ಅವಲಂಬಿತವಾಗಿದೆ. ಆದರೆ, ಕ್ರೀಡಾ ತಜ್ಞರು ಹೇಳುವ ಪ್ರಕಾರ ಕೆಲವು ಕಂಡೀಷನ್ಗಳನ್ನು ಆರ್ಸಿಬಿ ಪಾಸ್ ಮಾಡುವಲ್ಲಿ ಯಶಸ್ವಿಯಾದರೆ ನಿರಾಯಸವಾಗಿ ಪ್ಲೇಆಫ್ ಪ್ರವೇಶಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಂಡೀಷನ್ ನಂ. 1: ಆರ್ಸಿಬಿ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಎದುರಾಳಿ ತಂಡದ ವಿರುದ್ಧ ಭರ್ಜರಿ ಜಯ ಗಳಿಸಬೇಕು. ಪ್ರಸ್ತುತ -00.49 ರನ್ ರೇಟ್ ಹೊಂದಿರುವ ಆರ್ಸಿಬಿ ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೆ 14 ಅಂಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಲೀಗ್ ಹಂತದ ಕೊನೆಯ ಪಂದ್ಯಗಳ ವೇಳೆ ಆರ್ಸಿಬಿ ಉತ್ತಮ ನೆಟ್ ರನ್ರೇಟ್ ಹೊಂದಿರುತ್ತದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಭಾರತ ಪಾಕಿಸ್ತಾನಕ್ಕೆ ಹೋಗಬಹುದು ಆದರೆ..; ಪಿಸಿಬಿಗೆ ಬಿಸಿಸಿಐ ವಿಧಿಸಿದ ಷರತ್ತು ಏನು ಗೊತ್ತಾ?
ಕಂಡೀಷನ್ ನಂ. 2: ಆರ್ಸಿಬಿ ಪ್ಲೇಆಫ್ ಹಾದಿ ಸುಗಮವಾಗಬೇಕಿದ್ದರೆ ಸನ್ರೈಸರ್ಸ್ ಹೈದರಾಬಾದ್ ಅಥವಾ ಲಖನೌ ಸೂಪರ್ಜೈಂಟ್ಸ್ ತಮ್ಮ ಉಳಿದ ಲೀಗ್ ಪಂದ್ಯದಲ್ಲಿ ಒಂದಕ್ಕಿಂತೆ ಹೆಚ್ಚು ಗೆಲುವು ಕಾಣಬಾರದು. ಪ್ರಸ್ತುತ ಈ ಎರಡು ತಂಡಗಳು ತಲಾ 12 ಅಂಕಗಳೊಂದಿಗೆ 4 ಹಾಗೂ 5ನೇ ಸ್ಥಾನದಲ್ಲಿದ್ದು, ಮುಂದಿನ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋತರೆ ಮಾತ್ರ ಆರ್ಸಿಬಿಗೆ ಪ್ಲೇಆಫ್ ಬಾಗಿಲು ತೆರೆಯುತ್ತದೆ. ಹಾಗೆಯೇ ಮಂಗಳವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತರೆ ಆರ್ಸಿಬಿ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗುತ್ತದೆ.
ಕಂಡೀಷನ್ ನಂ. 3: ಇದಲ್ಲದೆ ಚೆನ್ನೈ ಸೂಪರ್ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಉಳಿದಂತೆ 8ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತನ್ನ ಲೀಗ್ ಹಂತದ ಉಳಿದ ಪಂದ್ಯದಲ್ಲಿ ಸೋತರೆ ಆರ್ಸಿಬಿ ಪಾಲಿಗೆ ಪ್ಲೇಆಫ್ ಬಾಗಿಲು ತೆರೆದಂತಾಗುತ್ತದೆ. ಒಂದು ವೇಳೆ ಆರ್ಸಿಬಿ ಏನಾದರೂ ಮೂರರ ಪೈಕಿ ಒಂದರಲ್ಲಿ ಸೋಲು ಕಂಡರು ಪ್ಲೇಆಫ್ ಬಾಗಿಲು ಮುಚ್ಚಿದಂತಾಗುತ್ತದೆ.