More

    ಈ ಭಿಕ್ಷುಕಿ ಕುಡಿದು ಬಿಸಾಕಿದ ಕಾಫಿಯನ್ನು ತೀರ್ಥದಂತೆ ಸೇವಿಸುತ್ತಾರೆ… ಈ ಮಹಿಳೆಯನ್ನು ದೇವರ ಸಮಾನ ಕಾಣುವುದೇಕೆ?

    ಚೆನ್ನೈ: ಸಾಮಾನ್ಯವಾಗಿ ಭಿಕ್ಷುಕರನ್ನು ಜನರು ಅಸಡ್ಡೆಯಿಂದ ನೋಡುತ್ತಾರೆ. ಅವರು ಸಮೀಪ ಬಂದರೆ ದೂರ ಸರಿಯುತ್ತಾರೆ. ಅವರನ್ನು ಮುಟ್ಟಿಸಿಕೊಳ್ಳಲು ಹೇಸಿಗೆ ಪಟ್ಟುಕೊಳ್ಳುತ್ತಾರೆ.

    ಆದರೆ, ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಭಿಕ್ಷುಕಿಯೊಬ್ಬಳನ್ನು ಅಲ್ಲಿನ ಜನರು ದೇವರ ಸಮಾನವಾಗಿ ನೋಡುತ್ತಾರೆ. ಆಕೆಯನ್ನು ನೋಡಿದ ತಕ್ಷಣವೇ ಭಕ್ತಿಯಿಂದ ಕೈಮುಗಿದು ನಮಸ್ಕರಿಸುತ್ತಾರೆ.

    ಟೋಪಿ ಅಮ್ಮ ಎಂದೇ ಕರೆಯಲಾಗುವ ಈ ಭಿಕ್ಷುಕಿಯ ವಿಡಿಯೋ ಒಂದು ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ವೈರಲ್​​ ಆದ ವಿಡಿಯೋ ಅಚ್ಚರಿ ಮೂಡಿಸುತ್ತದೆ. ಈ ವಿಡಿಯೋದಲ್ಲಿ ಈ ಭಿಕ್ಷುಕಿ ಅರ್ಧ ಕುಡಿದು ಬಿಸಾಕಿದ ಕಾಫಿಯ ಕಪ್​ ಅನ್ನು ವ್ಯಕ್ತಿಯೊಬ್ಬ ಎತ್ತಿಕೊಳ್ಳುತ್ತಾನೆ. ಅದರಲ್ಲಿ ಉಳಿದ ಕಾಫಿಯನ್ನು ಜನರು ದೇವರ ತೀರ್ಥದಂತೆ ಕೈಯಲ್ಲಿ ಪಡೆದುಕೊಂಡು ಕುಡಿಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

    ಹಾಗಿದ್ದರೆ, ಈ ಭಿಕ್ಷುಕಿಯನ್ನು ಜನರು ಇಷ್ಟೊಂದು ಭಕ್ತಿಯಿಂದ ಕಾಣಲು ಕಾರಣವೇನು?

    ಸದಾ ಕೊಳಕು ಬಟ್ಟೆಯನ್ನು ಧರಿಸಿ ಬೀದಿ ಸುತ್ತುವ ಈ ಭಿಕ್ಷುಕಿಯನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಟೋಪಿ ಅಮ್ಮ ಎಂದು ಕರೆಯಲಾಗುತ್ತದೆ. ಈಕೆಯನ್ನು ಸಿದ್ಧಿ ಮಾತೆ ಎಂದು ಕೂಡ ಸಂಭೋಧಿಸಲಾಗುತ್ತದೆ. ಈಕೆಯನ್ನು ಮುಟ್ಟಿದರೆ ತಮ್ಮ ಪಾಪಗಳೆಲ್ಲ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈಕೆ ಮುಟ್ಟಿ ಆಶೀರ್ವದಿಸಿದರೆ ರೋಗಗಳು ಮಾಯವಾಗುತ್ತವೆ ಎಂಬ ವಿಶ್ವಾಸ ಜನರದ್ದಾಗಿದೆ.

    ಮಣಿ ಮಾರನ್​​​ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಈ ಟೋಪಿ ಅಮ್ಮನ ಆಶೀರ್ವಾದದಿಂದ ಆತನ ಕಿಡ್ನಿ ಸಮಸ್ಯೆ ನಿವಾರಣೆಯಾಗಿದೆ ಎಂದೇ ಇಲ್ಲಿನ ಜನರು ಹೇಳುತ್ತಾರೆ. ಆದ್ದರಿಂದಲೇ ಕಳೆದ 17 ವರ್ಷಗಳಿಂದ ಮಣಿಮಾರನ್​ ಈ ಟೋಪಿ ಅಮ್ಮನ ಸೇವೆ ಮಾಡುತ್ತಾ ಬಂದಿದ್ದಾರೆ.

    ಈ ನಂಬಿಕೆಯ ಕಾರಣದಿಂದಲೇ ಟೋಪಿ ಅಮ್ಮನನ್ನು ಇಲ್ಲಿನ ಜನರು ದೇವರ ಸಮಾನವಾಗಿ ಭಕ್ತಿಭಾವದಿಂದ ಕಾಣುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts