

ಹೈದರಾಬಾದ್: ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಇಲ್ಲದಿರುವುದರಿಂದ ಸಿನಿ ಲೋಕದಿಂದ ದೂರವಿರುವ ಕಿರಣ್, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.
41 ವರ್ಷದ ಕಿರಣ್, ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಇನ್ಸ್ಟಾಗ್ರಾಂಗೆ ಸೀಮಿತವಾಗದ ಕಿರಣ್, ಆ್ಯಪ್ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್ ಮತ್ತು ವೆಬ್ಸೈಟ್ ತೆರೆದಿದ್ದಾರೆ. ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು.
ಆ್ಯಪ್ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್ ಅವರು ಗ್ಲಾಮರಸ್ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಅದೇ ರೀತಿ ನೀವೇನಾದರೂ ಕಿರಣ್ ಅವರ ಜತೆ 5 ನಿಮಿಷ ಮಾತನಾಡಲು ಬಯಸಿದರೆ, 10 ಸಾವಿರ ರೂ. ಪಾವತಿಸಬೇಕಾಗುತ್ತದೆ. ನೀವೇನಾದರೂ ವಿಡಿಯೋ ಮೂಲಕ 15 ನಿಮಿಷ ಮಾತನಾಡಲು ಇಚ್ಛಿಸಿದರೆ 14 ಸಾವಿರ ರೂ. ಪಾವತಿಸಬೇಕಾಗುತ್ತದೆ.
25 ನಿಮಿಷಗಳ ಕಾಲ ವಿಡಿಯೋ ಕಾಲ್ನಲ್ಲಿ ಮಾತನಾಡಲು ಬಯಸಿದರೆ 25 ಸಾವಿರ ರೂ. ನೀಡಬೇಕಾಗುತ್ತದೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್ ಅವತಾರವನ್ನು ಕಿರಣ್ ರಾಥೋಡ್ ಅನಾವರಣಗೊಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳು ಸಣ್ಣ ಝಲಕ್ ಅನ್ನು ಕಿರಣ್ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್ ಅವತಾರಕ್ಕಾಗಿ ಆ್ಯಪ್ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಫೋಟೋವೊಂದಕ್ಕೆ ಒಳ್ಳೆಯ ಹುಡುಗಿಯರು ಇತಿಹಾಸ ನಿರ್ಮಿಸಲಾರರು, ಬೋಲ್ಡ್ ಹುಡುಗಿಯರು ಇತಿಹಾಸ ಸೃಷ್ಟಿಸಬಲ್ಲರು ಎಂದು ಅಡಿಬರಹ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. (ಏಜೆನ್ಸೀಸ್)