More

    ಕಿವಿಯಲ್ಲಿ ಕಿರಿಕಿರಿ ಎಂದು ವೈದ್ಯರ ಬಳಿ ಹೋಗಿದ್ದ ಮಹಿಳೆ; ಪರಿವಾರ ಸಮೇತ ವಾಸವಿದ್ದ ಜೇಡರ ಹುಳು!

    ನವದೆಹಲಿ: ಈ ಮಹಿಳೆ ತನ್ನ ಕಿವಿಯಲ್ಲಿ ಏನೋ ಸದ್ದು ಆಗುತ್ತಿದೆ ಎಂದು ಹೇಳುತ್ತಾ ವೈದ್ಯರ ಬಳಿಗೆ ತೆರಳಿದ್ದಾರೆ. ವೈದ್ಯರು ಟಿನಿಟಸ್ ಎಂದು ಭಾವಿಸಿಕೊಂಡು ಅದಕ್ಕೆ ಚಿಕಿತ್ಸೆ ನೀಡಲು ಮುಂದಾದಾಗ ಅಲ್ಲಿ ಜೇಡರ ಹುಳ ಕಾಣಿಸಿಕೊಂಡಿದೆ.

    ಏನಿದು ಟಿನಿಟಸ್?

    ಟಿನಿಟಸ್ ಎನ್ನುವುದು ಇಲ್ಲದ ಶಬ್ದಗಳನ್ನು ಕೇಳಿದಂತೆ ಆಗುವ ಸ್ಥಿತಿಯನ್ನು ಸೂಚಿಸುತ್ತದೆ. ಈ ಶಬ್ದಗಳಿಗೆ ಬಾಹ್ಯ ಮೂಲ ಇರುವುದಿಲ್ಲ. ಹೀಗಾಗಿ ಇತರರಿಗೆ ಈ ಸದ್ದುಗಳನ್ನು ಕೇಳಲೂ ಸಾಧ್ಯವಿಲ್ಲ. ಇಂತಹ ಸದ್ದುಗಳು ಸಾಧಾರಣವಾಗಿ ರಿಂಗಿಂಗ್, ಘರ್ಜನೆ ಅಥವಾ ಝೇಂಕರಿಸುವ ರೂಪದಲ್ಲಿ ಇರುತ್ತದೆ ಎಂದು ವಿವರಿಸಲಾಗಿದೆ.

    ಇದನ್ನೂ ಓದಿ: ಹಲ್ಲಿಯನ್ನೇ ತಿಂದು ಮುಗಿಸಿದ ಜೇಡ! ಕಡಬ ತಾಲೂಕಿನಲ್ಲಿ ಪ್ರಕೃತಿಯ ವೈಚಿತ್ರ್ಯ

    ಈ ಚೀನಾದ ಮಹಿಳೆಯ ವಿಷಯದಲ್ಲಿ, ಟಿನಿಟಸ್​ನ ಶಂಕೆ ಆಕೆಯ ದುಃಸ್ವಪ್ನವಾಗಿದೆ. ಪರೀಕ್ಷೆ ಮಾಡುತ್ತಿದ್ದ ವೈದ್ಯರಿಗೆ ಆಕೆಯ ಕಿವಿಯಲ್ಲಿ ಕಂಡುಬಂದಿದ್ದು ಒಂದಲ್ಲ ಎರಡಲ್ಲ, ಬದಲಾಗಿ ಜೇಡರ ಹುಳುಗಳ ವಸಾಹತು!

    ಕಿವಿಯಲ್ಲಿ ಕಿರಿಕಿರಿ ಎಂದು ವೈದ್ಯರ ಬಳಿ ಹೋಗಿದ್ದ ಮಹಿಳೆ; ಪರಿವಾರ ಸಮೇತ ವಾಸವಿದ್ದ ಜೇಡರ ಹುಳು!

    ನಂತರ ಇನ್ನಷ್ಟು ಮಾಹಿತಿ ಪಡೆಯಲು ಮಹಿಳೆಯ ಕಿವಿಯೊಳಕ್ಕೆ ಕ್ಯಾಮೆರಾ ಇಳಿಸಲಾಯಿತು. ಆಗ ಅಲ್ಲಿ ಬರೀ ಜೇಡಗಳ ಕಾಲನಿ ಮಾತ್ರವಲ್ಲ, ಬದಲಾಗಿ ರೇಷ್ಮೆಯಷ್ಟು ನುಣುಪಾದ ಜೇಡರ ಬಲೆಯೂ ಇದೆ ಎನ್ನುವುದು ಕಂಬಂದಿದೆ.

    ಕ್ಯಾಮರಾ ಮೇಲೆ ದಾಳಿ ಮಾಡಿದ ಜೇಡರ ಹುಳು!

    ಪ್ರಾಥಮಿಕ ಪರೀಕ್ಷೆಯಲ್ಲಿ ಅಸಹಜವಾದ ಏನೂ ಪತ್ತೆಯಾಗಿಲ್ಲ ಎಂದು ವೈದ್ಯರು ವರದಿ ಮಾಡಿದ್ದಾರೆ. ಆದಾಗ್ಯೂ, ಹತ್ತಿರದಿಂದ ನೋಡಿದಾಗ, ಕೆಳಗೆ ಏನೋ ಚಲಿಸುತ್ತಿರುವುದನ್ನು ಅವರು ಗಮನಿಸಿದರು. ನಂತರ ಅವರು ವೆಬ್ ಅನ್ನು ಪಕ್ಕಕ್ಕೆ ತಳ್ಳಿದರು ಮತ್ತು ಅದು ಪಲಾಯನ ಮಾಡಲು ಮುಂದಾದಾಗ, ಅವರು ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಕಿವಿಯೊಳಕ್ಕೆ ಕ್ಯಾಮೆರಾ ಹಾಕುತ್ತಿದ್ದಂತೆಯೇ, ತನ್ನ ಕುಟುಂಬವನ್ನು ರಕ್ಷಿಸಲು ತಾಯಿ ಜೇಡ ದಾಳಿ ಮಾಡಲು ಹೊರಬಂದಿದೆ. ಜೇಡ ವಿಷಕಾರಿಯಾಗಿರಲಿಲ್ಲ ಎನ್ನುವುದು ನಿಜಕ್ಕೂ ಶುಭಸುದ್ದಿಯಾಗಿದ್ದು ಮಹಿಳೆಯ ಒಳಕಿವಿಗೆ ಸಣ್ಣ ಹಾನಿಯಾಗಿದ್ದು ಪರಿಸ್ಥಿತಿ ಗಂಭೀರವಾಗಿಲ್ಲ ಎನ್ನುವುದೇ ಇನ್ನೊಂದು ಅಚ್ಚರಿ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts