More

    ಬೆಂಗಳೂರಿನಲ್ಲಿ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲವೆಂದು ಬಾಡಿಗೆಗೆ ಮನೆ ಕೊಡಲ್ಲ ಎಂದ ಮಾಲೀಕ!

    ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬಾಡಿಗೆಗೆ ಮನೆ ಸಿಗುವುದು ಕಷ್ಟವಾಗಿದೆ. ಬೆಂಗಳೂರು, ಐಟಿ ಹಬ್ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಬಾಡಿಗೆಯನ್ನು ಮಾಲೀಕರು ನಿರೀಕ್ಷಿಸುತ್ತಾರೆ. ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಹುಡುಕುವುದಕ್ಕಿಂತ ಐಐಟಿಗೆ ಸೇರುವುದು ಸುಲಭ ಎಂದು ಕೆಲವರು ಹೇಳುತ್ತಾರೆ .

    ಇಲ್ಲೊಬ್ಬ ವ್ಯಕ್ತಿ, ತನ್ನ ಸೋದರ ಸಂಬಂಧಿಗೆ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲ ಎಂಬ ಕಾರಣಕ್ಕೆ ಮನೆಯನ್ನು ಬಾಡಿಗೆಗೆ ನೀಡಲು ನಿರಾಕರಿಸಿದರು ಎಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಚಿತ್ರ ಕಾರಣವನ್ನು ನಂಬಲಾಗದಂತಿದ್ದರೂ, ವ್ಯಕ್ತಿ ತನ್ನ ಸೋದರಸಂಬಂಧಿ ಬ್ರೋಕರ್ ಜೊತೆ ನಡೆಸಿದ WhatsApp ಚಾಟಿಂಗ್​ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾನೆ.

    ಟ್ವಿಟರ್ ಬಳಕೆದಾರ ಶುಭ್ (@kadaipaneeeer) ಒಬ್ಬ ಬ್ರೋಕರ್ ತನ್ನ ಸಂಬಂಧಿ ಯೋಗೀಶ್‌ಗೆ ತನ್ನ ಲಿಂಕ್ಡ್‌ಇನ್, ಟ್ವಿಟರ್ ಪ್ರೊಫೈಲ್‌ಗಳು, ಅವರು ಉದ್ಯೋಗದಲ್ಲಿರುವ ಕಂಪನಿಯ ಸೇರ್ಪಡೆ ಪತ್ರ ಮತ್ತು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳ ಹೊರತಾಗಿ 10 ನೇ ಮತ್ತು 12 ನೇ ತರಗತಿಯ ಅಂಕಪಟ್ಟಿಗಳನ್ನು ಹಂಚಿಕೊಳ್ಳಲು ಕೇಳಿದ್ದರು. ಅದರೊಂದಿಗೆ ಕೆಲಸಕ್ಕೆ ಅಪ್ಲೈ ಮಾಡುತ್ತಿದ್ದಾರೋ ಎಂಬಂತೆ ಮನೆ ಮಾಲೀಕ, ಬಾಡಿಗೆಗೆ ಮನೆ ಕೇಳಿದ್ದ ವ್ಯಕ್ತಿಗೆ ತನ್ನ ಬಗ್ಗೆ 200 ಪದಗಳನ್ನು ಬರೆದು ಕಳಿಸಲು ಕೇಳಿಕೊಂಡರು.

    ಇದನ್ನೂ ಓದಿ: ಎಂಬಿಬಿಎಸ್​ ಓದಿದ ಈ ಸರ್ಕಾರಿ ವೈದ್ಯರ ಸಂಬಳ ಸೆಕ್ಯೂರಿಟಿ ಗಾರ್ಡ್​ಗೆ ಸಮಾನ! ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ ಬೆಂಗಳೂರಿಗ

    ಈ ಮಾಹಿತಿಯನ್ನು ಈತ ತನ್ನ ಬ್ರೋಕರ್​ ಮೂಲಕ ಮಾಲೀಕರಿಗೆ ಕಳಿಸಿಕೊಟ್ಟಿದ್ದಾನೆ. ನಂತರ ಮನೆ ಮಾಲೀಕ, 12ನೇ ತರಗತಿಯಲ್ಲಿ ಬಾಡಿಗೆ ಮನೆ ಕೇಳಿದವರಿಗೆ ‘ಕೇವಲ 75% ಅಂಕ ಬಂದಿದೆ, 90% ಅಂಕದ ನಿರೀಕ್ಷೆ ಇತ್ತು. ಹೀಗಾಗಿ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ’ ಎಂಬ ವಿಲಕ್ಷಣ ಕಾರಣ ನೀಡಿ ತಿರಸ್ಕರಿಸಿದ್ದಾರೆ. ಈ ವಿಚಾರವನ್ನು ಬ್ರೋಕರ್, ಯೋಗೀಶ್​ಗೆ ತಿಳಿಸಿದ್ದಾರೆ.

    ಈ ಬಗ್ಗೆ ಸಿಟ್ಟಾದ ಯೋಗೀಶ್ ಸೋದರ ಸಂಬಂಧಿ ಶುಭ್, “ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ನೀವು ಬೆಂಗಳೂರಿನಲ್ಲಿ ಫ್ಲಾಟ್ ಪಡೆಯುತ್ತೀರೋ ಇಲ್ಲವೋ ಎಂಬುದನ್ನು ಖಂಡಿತವಾಗಿಯೂ ನಿರ್ಧರಿಸುತ್ತದೆ” ಶೀರ್ಷಿಕೆಯಾಗಿ ಬರೆದಿದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts