More

    10 ಲಕ್ಷ ರೂ. ನಗದು, 93 ಸವರನ್​ ಚಿನ್ನಾಭರಣ ಸುಲಿಗೆ ಮಾಡಿದ ಮಹಿಳಾ ಎಎಸ್​ಐ ಅರೆಸ್ಟ್​!

    ಪಲಕ್ಕಾಡ್​: ರಕ್ಷಣೆ ಮಾಡಬೇಕಾದ ಪೊಲೀಸ್​ ಅಧಿಕಾರಿಯೇ ಇಬ್ಬರು ವ್ಯಕ್ತಿಗಳಿಂದ 10.25 ಲಕ್ಷ ರೂ. ನಗದು ಮತ್ತು 93 ಸವರನ್​ ಚಿನ್ನಾಭರಣವನ್ನು ಸುಲಿಗೆ ಮಾಡಿರುವ ಆತಂಕಕಾರಿ ಘಟನೆ ಕೇರಳದದಲ್ಲಿ ನಡೆದಿದೆ.

    ಮಲಪ್ಪುರಂ ವಾಲಂಚೇರಿ ಠಾಣೆಯ ಮಹಿಳಾ ಎಎಸ್​ಐ ವಿರುದ್ಧ ಹಣ ಹಾಗೂ ಚಿನ್ನಾಭರಣ ಸುಲಿಗೆ ಆರೋಪ ಕೇಳಿಬಂದಿದೆ. ಎಎಸ್​ಐ ಹೆಸರು ಆರ್ಯಶ್ರೀ (47). ಇವರು ವಲ್ಲಪುಳ ಚುರಾಕೋಡ್​ ನಿವಾಸಿ. ಒಟ್ಟಪಾಳಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಿದ 60 ವರ್ಷದ ವ್ಯಕ್ತಿ ಅರೆಸ್ಟ್​​!

    ದೂರಿನ ಪ್ರಕಾರ, ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಪಳಯನ್ನೂರಿನ ಮೂಲದ ವ್ಯಕ್ತಿಯಿಂದ 93 ಸವರನ್​ ಚಿನ್ನ ಮತ್ತು 1. 5 ಲಕ್ಷ ರೂಪಾಯಿಯನ್ನು ಸುಲಿಗೆ ಮಾಡಿದ್ದಾರೆ ಮತ್ತು ಒಟ್ಟಪಾಲಂನ ಕನ್ನಿಯಂಪುರಂ ನಿವಾಸಿಯಿಂದ 8. 75 ಲಕ್ಷ ರೂ. ವಸೂಲಿ ಮಾಡಿ ವಂಚನೆ ಮಾಡಿದ್ದಾರೆ.

    ಹಣ ಹಿಂತಿರುಸದಿದ್ದಾಗ ದೂರು

    ಪಳೆಯನ್ನೂರು ಮೂಲದ ನಿವಾಸಿ ಮನೆ ಕಟ್ಟಲು ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದಿದ್ದರು. ಅವರಿಂದ 93 ಸವರನ್ ಚಿನ್ನಾಭರಣ ತೆಗೆದುಕೊಂಡಿದ್ದ ಆರ್ಯಶ್ರೀ, ಗೃಹ ಸಾಲ ತೀರಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಚಿನ್ನಾಭರಣ ವಾಪಸ್ ನೀಡುವುದಾಗಿ ಹೇಳಿ ಹಣ ಪಡೆದಿದ್ದಳು. ಮಲಪ್ಪುರಂ ಪೊಲೀಸ್ ಸೊಸೈಟಿಗೆ ಹಣ ಪಾವತಿಸುವ ಹೆಸರಿನಲ್ಲಿ 50,000 ರೂ., ಪತಿ ವಿದೇಶಕ್ಕೆ ಹೋಗಲು 50,000 ರೂ. ಮತ್ತು ತನ್ನ ಡ್ರೈವರ್‌ನ ಸೋರುತ್ತಿರುವ ಮನೆಯನ್ನು ಸರಿಪಡಿಸಲು 50,000 ರೂ. ಹಣವನ್ನು ಪಡೆದಿದ್ದಳು. ಆದರೆ, ಹಣ ಹಿಂತಿರುಸದಿದ್ದಾಗ ಆಕೆಯ ವಿರುದ್ಧ ದೂರು ನೀಡಲಾಯಿತು.

    ಒಟ್ಟಪಾಲಂ ಇನ್ಸ್‌ಪೆಕ್ಟರ್ ಎಂ ಸುಜಿತ್ ಅವರ ತನಿಖೆಯಲ್ಲಿ ಆರ್ಯಶ್ರಿ ತಪ್ಪು ಮಾಡಿರುವುದು ಕಂಡುಬಂದಿದೆ. ನಂಬಿಕೆ ದ್ರೋಹ ಮತ್ತು ವಂಚನೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರ್ಯಶ್ರೀಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು

    ಆರ್ಯಶ್ರೀ ಯಾವುದೇ ಭಯ ಮತ್ತು ಹಿಂಜರಿಕೆಯಿಲ್ಲದೆ ಠಾಣೆಗೆ ನಿತ್ಯವೂ ಬರುತ್ತಿದ್ದರು. ಆರೋಪದ ಬಗ್ಗೆ ಕೇಳಿದರೆ ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳುತ್ತಿದ್ದರು. ಯಾವಾಗ ತನಿಖಾ ತಂಡ ಸಾಕ್ಷ್ಯಗಳನ್ನು ಹಾಜರುಪಡಿಸಿತೋ ಆಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್​)

    ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

    ಬಿಸಿಲಿನ ಝಳದಲ್ಲಿಯೂ ಜೆ.ಸಿ.ಮಾಧುಸ್ವಾಮಿ ಅಬ್ಬರದ ಪ್ರಚಾರ

    ಕಿವಿಯಲ್ಲಿ ಕಿರಿಕಿರಿ ಎಂದು ವೈದ್ಯರ ಬಳಿ ಹೋಗಿದ್ದ ಮಹಿಳೆ; ಪರಿವಾರ ಸಮೇತ ವಾಸವಿದ್ದ ಜೇಡರ ಹುಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts