ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಿದ 60 ವರ್ಷದ ವ್ಯಕ್ತಿ ಅರೆಸ್ಟ್​​!

60 year old man arrested in Indore for sending death threat to Rahul Gandhi
Published on

ನವದೆಹಲಿ: ಭಾರತ್ ಜೋಡೋ ಯಾತ್ರೆ' ಮಧ್ಯಪ್ರದೇಶವನ್ನು ಪ್ರವೇಶಿಸುವ ಮುನ್ನರಾಹುಲ್ ಗಾಂಧಿಗೆ ಪತ್ರ ಬರೆಯುವ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ 60 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಹುಲ್ ಗಾಂಧಿಗೆ 'ಭಾರತ್ ಜೋಡೋ ಯಾತ್ರೆ' ಇಂದೋರ್ ಪ್ರವೇಶಿಸುತ್ತಿದ್ದಂತೆ ಮುನ್ನರಾಹುಲ್ ಮೇಲೆ ಬಾಂಬ್ ಹಾಕುವುದಾಗಿ ಪತ್ರವನ್ನು ರವಾನಿಸಿ ಬೆದರಿಕೆವೊಡ್ಡಿದ್ದ. ಈ ಬೆದರಿಕೆ ಪತ್ರವೂ ಇಂದೂರ್‌ ನಗರದ ಸಿಹಿತಿಂಡಿ ಅಂಗಡಿಯ ಮುಂದೆ ಪತ್ತೆಯಾಗಿತ್ತು. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದರು.

ರಾಹುಲ್ ಗಾಂಧಿಗೆ ಪತ್ರ ಬರೆಯುವ ಮೂಲಕ ಬೆದರಿಕೆ ಹಾಕಿದ ಆರೋಪದ ಮೇಲೆ 60 ವರ್ಷದ ದಯಾ ಸಿಂಗ್ ಅಲಿಯಾಸ್ ಐಶಿಲಾಲ್ ಜಾಮ್ ಎಂಬಾತನು ರೈಲಿನಿಂದ ಓಡಿಹೋಗಲು ಯತ್ನಿಸುತ್ತಿದ್ದಾಗ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.

ಪೊಲೀಸ್ ಆಯುಕ್ತ ನಿಮಿಶ್ ಅಗರ್ವಾಲ್ ಮಾತನಾಡಿ, 'ಆರೋಪಿ ಐಶಿಲಾಲ್ ಝಮ್ ರಾಹುಲ್ ಗಾಂಧಿಗೆ ಬೆದರಿಕೆ ಪತ್ರವನ್ನು ಏಕೆ ಕಳುಹಿಸಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟತೆ ತಿಳಿದು ಬಂದಿಲ್ಲ . ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net