More

    ರಾಹುಲ್ ಗಾಂಧಿ ಹೇಳಿಕೆಗೆ ಕವಡೆ ಕಿಮ್ಮತ್ತಿಲ್ಲ: ಬಿ.ವೈ.ವಿಜಯೇಂದ್ರ

    ಶಿವಮೊಗ್ಗ: ಎಐಸಿಸಿ ನಾಯಕ ರಾಹುಲ್ ಗಾಂಧಿ ಅಮೇಥಿ ಜನರ ವಿಶ್ವಾಸ ಕಳೆದುಕೊಂಡು ಕೇರಳದ ವಯನಾಡಿನಲ್ಲಿ ಅಡಗಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಭವಿಷ್ಯದ ಪ್ರಧಾನಮಂತ್ರಿ ಅಭ್ಯರ್ಥಿಗೇಕೆ ಇಂತಹ ಪರಿಸ್ಥಿತಿ ಬಂದಿದೆ. ಅಮೇಥಿ ಮತದಾರರು ರಾಹುಲ್ ಗಾಂಧಿ ಅವರನ್ನೇಕೆ ಧಿಕ್ಕರಿಸಿದ್ದಾರೆ ಎಂದು ಪ್ರಶ್ನಿಸಿದರು.
    ದೇಶದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಕವಡೆ ಕಿಮ್ಮತ್ತಿಲ್ಲ. ಅವರನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಸಬೇಕು. ಶಿವಮೊಗ್ಗದಲ್ಲಿ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ರಾಹುಲ್ ಗಾಂಧಿ ಭೇಟಿ ಬಳಿಕ ಮತ್ತೆ 50 ಸಾವಿರ ಲೀಡ್ ಹೆಚ್ಚಲಿದೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗುತ್ತಿದೆ. ಮೊದಲ ಹಂತದ 14 ಕ್ಷೇತ್ರದ ಚುನಾವಣೆಯಲ್ಲಿ ನಿರೀಕ್ಷೆಗೆ ಮೀರಿ ಬೆಂಬಲ ಸಿಕ್ಕಿದೆ. ಏ.28ರಂದು ದಾವಣಗೆರೆ, ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸುತ್ತಾರೆ. ಕಾಂಗ್ರೆಸ್ ಪಕ್ಷದವರಿಗೆ ವಿಜಯೇಂದ್ರ ಅವರಿಗೆ ತಲೆಕೆಟ್ಟಿದೆ ಅನಿಸಬಹುದು. ಆದರೆ ಮೊದಲ ಹಂತದ ಮತದಾನದಲ್ಲಿ 14ಕ್ಕೆ 14 ಸ್ಥಾನ ಗೆಲ್ಲುತ್ತೇವೆ. ಮತದಾನಕ್ಕೆ ಉತ್ಸಾಹ ಇನ್ನು ಹೆಚ್ಚಾಗಬೇಕಿತ್ತು. ಬಿಸಿಲಿನಲ್ಲೂ ಮತದಾನ ಚೆನ್ನಾಗಿ ಆಗಿದೆ ಎಂದರು.
    ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆ, ಒಬಿಸಿ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಮತದಾರರ ಮೇಲೆ ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿದೆ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್‌ಗೆ ಜನ ಬುದ್ದಿ ಕಲಿಸುತ್ತಾರೆ. ಮೊದಲ ಹಂತದ ವಾತಾವರಣ ಎರಡನೇ ಹಂತದಲ್ಲೂ ಕಾಣುತ್ತಿದೆ. ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುತ್ತೇವೆ ಎಂದರು. ಈಶ್ವರಪ್ಪ ಆರೋಪಗಳಿಗೆ ಉತ್ತರಿಸಲು ವಿಜಯೇಂದ್ರ ನಿರಾಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts