

ದೆಹಲಿ: ದೇಶದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ತೀವ್ರ ಆತಂಕವನ್ನು ಸೃಷ್ಟಿಸಿವೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆಯ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸತ್ತ ಪ್ರಕರಣ ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಈ ಮಧ್ಯೆ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಫ್ರೆಂಡ್ ಜತೆ ಮಾತನಾಡುತ್ತಿರುವಾಗ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸತ್ತ ಪ್ರಕರಣ ನಡೆದಿದೆ. ಪುಣೆಯ ಇಂದಪುರದಲ್ಲಿ ಈ ಸಾವು ಸಂಭವಿಸಿದೆ. ಇಂದಪುರದ ನಾರಾಯಣದಾಸ್ ರಾಮದಾಸ್ ಹೈಸ್ಕೂಲ್ನ ಹತ್ತನೇ ತರಗತಿಯ ಸೃಷ್ಟಿ ಏಕದ್ (16) ಸಾವಿಗೀಡಾದ ವಿದ್ಯಾರ್ಥಿನಿ.
ಮಾ. 13ರಂದು ಈಕೆಯ ಕೊನೆಯ ಪರೀಕ್ಷೆ ಮುಗಿದಿರುತ್ತಿತ್ತು. ದುರದೃಷ್ಟವೆಂದರೆ ಅದಕ್ಕೂ ಒಂದು ದಿನ ಮೊದಲೇ ಈಕೆಯ ಬದುಕೇ ಕೊನೆಯಾಗಿದೆ. ಮಾ. 12ರಂದು ಈಕೆ ಫ್ರೆಂಡ್ ಜತೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಳು. ಕೂಡಲೇ ಈಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ಕಳೆದ ವಾರ ಪುಣೆಯ ಮರುಂಜಿ ಎಂಬಲ್ಲಿ ಕುಸ್ತಿಪಟು ಸ್ವಪ್ನಿಲ್ ಪಡಾಲೆ ಕಸರತ್ತು ನಡೆಸುತ್ತಿರುವಾಗಲೇ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಸತ್ತಿರುವುದಾಗಿ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ.