More

    ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

    ಬೆಂಗಳೂರು: ಈಗ ಮೊಬೈಲ್​ಫೋನ್​ ಅಂದರೆ ಅದು ಬರೀ ಸಂಪರ್ಕ-ಸಂವಹನ ಸಾಧನವಲ್ಲ, ಅದೊಂಥ ದಾಖಲೆಗಳ ಆಗರ, ಬ್ಯಾಂಕಿಂಗ್ ಕೇಂದ್ರ ಎಂದರೂ ತಪ್ಪೇನಲ್ಲ. ಏಕೆಂದರೆ ಡಿಜಿಲಾಕರ್ ಮುಂತಾದ ಮೂಲಕ ದಾಖಲೆಗಳನ್ನೆಲ್ಲ ಇರಿಸಿಕೊಂಡಿರುತ್ತೇವೆ. ಮಾತ್ರವಲ್ಲ, ಬ್ಯಾಂಕಿಂಗ್ ವಹಿವಾಟು ಕೂಡ ಅದರಲ್ಲೇ ನಡೆಯುತ್ತಿರುತ್ತದೆ. ಹೀಗಿರುವಾಗ ಮೊಬೈಲ್​ಫೋನ್​ ಕಳೆದುಹೋದರೆ ದೊಡ್ಡ ಸಮಸ್ಯೆಯೇ ಎದುರಾಗಿಬಿಡುತ್ತದೆ. ಅದರಲ್ಲೂ ಈಗೀಗ ಮೊಬೈಲ್​ಫೋನ್ ಕಳೆದುಹೋದರೆ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ. ಆದರೆ ಮೊಬೈಲ್​ಫೋನ್​ ಕಳೆದುಹೋದ ತಕ್ಷಣ ಒಂದು ಕ್ರಮವನ್ನು ಅನುಸರಿಸಿದರೆ ಫೋನ್ ಸಿಗುವ ಸಾಧ್ಯತೆ ಹೆಚ್ಚು. ಮಾತ್ರವಲ್ಲ, ಕಳೆದುಹೋದ ಫೋನ್​ ಕೊರಿಯರ್​ನಲ್ಲಿ ಪೊಲೀಸ್ ಠಾಣೆಗೇ ಬಂದು ಬಿಡುತ್ತದೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಸಿಇಐಆರ್ ಪೋರ್ಟಲ್‌ನಲ್ಲಿ ನೋಂದಾಯಿಸಿ: ಮೊಬೈಲ್ ಫೋನ್​ ಕಳೆದುಕೊಂಡವರು ತಮ್ಮ ಫೋನ್ ಮಾಹಿತಿಯನ್ನು ಸಿಇಐಆರ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣೆ ಆದ ನಂತರ ಮೊಬೈಲ್​ಫೋನ್​ ಬ್ಲಾಕ್ ಆಗುತ್ತದೆ. ಕಳೆದು ಹೋಗಿರುವ ಮೊಬೈಲ್​​ಫೋನ್​ ಯಾರಾದರೂ ಉಪಯೋಗಿಸಲು ಪ್ರಯತ್ನಿಸಿದಲ್ಲಿ ಅವರ ಮಾಹಿತಿ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗುತ್ತದೆ. ನಂತರ ಮೊಬೈಲ್​ಫೋನ್​ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಹೀಗಾಗಿ ಮೊಬೈಲ್​ಫೋನ್​ ಕಳೆದುಕೊಂಡವರು ಸಿಇಐಆರ್ ಪೋರ್ಟಲ್​ನಲ್ಲಿ ತಪ್ಪದೇ ನೋಂದಾಯಿಸಿಕೊಳ್ಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಸಿಇಐಆರ್​ ಪೋರ್ಟಲ್ ಲಿಂಕ್​: https://www.ceir.gov.in/Home/index.jsp

    ಇದನ್ನೂ ಓದಿ: ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ

    ಸಾರ್ವನಿಕರು ಕಳೆದುಕೊಂಡಿದ್ದ ಒಟ್ಟು 18 ಲಕ್ಷ ರೂ. ಮೌಲ್ಯದ 112 ಮೊಬೈಲ್​​ಫೋನ್​ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ (ಸಿಇಐಆರ್) ಪೋರ್ಟಲ್ ಮತ್ತು ಇ-ಲಾಸ್ಟ್ ದತ್ತಾಂಶ ಉಪಯೋಗಿಸಿ ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

    ಪೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ ವ್ಯವಸ್ಥೆ ಸಹಕಾರಿಯಾಗಿದ್ದು, ಈ ಸೇವೆಯನ್ನು ಬಳಸಿಕೊಂಡು ಪೊಲೀಸರು ಇಂಥ ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ. ಅಲ್ಲದೇ ಈ ತಂತ್ರಜ್ಞಾನ ಫೋನ್​ ಕಳ್ಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

    ಇದನ್ನೂ ಓದಿ: ಮೇಡಮ್​ಗೆ ಕೇಸರಿ ಶಾಲು ಹಾಕಿಲ್ವಾ? ಎಂದು ಸುಮಲತಾ ಕಾಲೆಳೆದ ಪ್ರತಾಪ್​ಸಿಂಹ

    ದೂರು ಬಂದ ಬಳಿಕ ಮೊದಲು ಪೊಲೀಸರು ಆ ಸಂಖ್ಯೆಗೆ ಕರೆ ಮಾಡುತ್ತಾರೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಮೊಬೈಲ್ ಫೋನ್ ಸಕ್ರಿಯಗೊಳಿಸುತ್ತಾರೆ. ಇದು ಕದ್ದ ಅಥವಾ ಕಳೆದು ಹೋದ ಫೋನ್ ಎಂದು ತಿಳಿಸುತ್ತಾರೆ ಮತ್ತು ಅದನ್ನು ಹಿಂತಿರುಗಿಸಬೇಕು ಇಲ್ಲವೇ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಾರೆ. ಇದು ರಿಸೀವರ್ ಬಳಸಿದ ಸಿಮ್ ಕಾರ್ಡ್ ಎಲ್ಲ ವಿವರಗಳನ್ನು ಒದಗಿಸುತ್ತದೆ ಮತ್ತು ಪೊಲೀಸರು ಫೋನ್ ಸಿಕ್ಕ ವ್ಯಕ್ತಿ ಜತೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಇಂತಹ ಪ್ರಕರಣದಲ್ಲಿ ಖುದ್ದಾಗಿ ಬಂದು ಫೋನ್ ನೀಡುವುದಿಲ್ಲ ಬದಲಿಗೆ ಮೊಬೈಲ್‌ಗಳನ್ನು ಕೊರಿಯರ್‌ಗಳ ಮೂಲಕ ಪೊಲೀಸರಿಗೆ ಹಿಂದಿರುಗಿಸುತ್ತಾರೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಈ ಬಗ್ಗೆ ಹಿರಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಜನರ ಸ್ಪಂದನೆ ಮೇರೆಗೆ ನಗರದ ಇನ್ನೂ 8 ಸಿಇಎನ್ ಅಧಿಕಾರಿಗಳಿಗೆ ಈ ಪತ್ತೆ ಕಾರ್ಯದ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಲು ಸೂಚಿಸಿ ಇನ್ನೂ ಹೆಚ್ಚಿನ ಮೊಬೈಲ್​ಫೋನ್​ಗಳನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts