ವಿದ್ಯಾರ್ಥಿನಿಗೆ ಬಲವಂತ ‘ಅಶ್ಲೀಲ’ ವಿಡಿಯೋ ತೋರಿಸಿದ ಶಿಕ್ಷಕ: ಪೋಕ್ಸೋ ಕಾಯ್ದೆ ಕೇಸ್ ದಾಖಲು

f
Published on

ಧರ್ಮಶಾಲಾ: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬನ ಮೇಲೆ 9ನೇ ತರಗತಿಯ ಬಾಲಕಿಗೆ ಬಲವಂತವಾಗಿ 'ಅಶ್ಲೀಲ' ವಿಡಿಯೋ ತೋರಿಸಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.

ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕ ಜುಂಗಾದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಡ್ರಾಯಿಂಗ್​ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು ಮೇ 3 ರಂದು ಧಲ್ಲಿ ಪೊಲೀಸ್​ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಘಟನೆ ಹಿನ್ನೆಲೆ?: ಗುರುವಾರ ( ಮೇ 2, 2024) ಹೆಚ್ಚುವರಿ ತರಗತಿ ಬಳಿಕ ತನ್ನ ಮಗಳನ್ನು ಶಿಕ್ಷಕ ಶಾಲೆಯಲ್ಲಿರುವಂತೆ ಹೇಳಿದ್ದಾನೆ. ಬಳಿಕ ತನ್ನ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋವನ್ನು ಬಾಲಕಿಗೆ ಬಲವಂತವಾಗಿ ತೋರಸಿದ್ದಾನೆ. ಹಾಗೂ ಶಿಕ್ಷಕ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತು ಬಾಲಕಿ ತಾಯಿ ನೀಡಿದ ದೂರಿನ ಮೇಲೆ ಆರೋಪಿ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪೋಕ್ಸೋ ಕಾಯ್ದೆ 10 ಮತ್ತು 12 ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 354 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ ನಂತರ ಅಪರಾಧಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ ಎಂದು ವರಿದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net