ಲಾಹೋರ್: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಭಾರೀ ಹರಸಾಹಸ ಪಡುತ್ತಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ ಬಿಸಿಸಿಐಗೆ ಒತ್ತಾಯಿಸಿದೆ. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿದೆ. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್ ಇನ್ ಬ್ಲ್ಯೂ ಪಡೆಯನ್ನು ಲಾಹೋರ್ಗೆ ಕರೆತರುವ ಪಾಕ್ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ.
ಇದನ್ನೂ ಓದಿ: ಮಹಿಳೆಯರ ಏಷ್ಯಾಕಪ್: ಸೆಮಿಫೈನಲ್ ತಲುಪಿದ ಭಾರತ- ಫೈನಲ್ ನಲ್ಲಿ ಪಾಕಿಸ್ತಾನ ಎದುರಾಳಿ?!
ಟೀಮ್ ಇಂಡಿಯಾ ಕಿಂಚಿತ್ತು ಆದ್ಯತೆ ನೀಡುತ್ತಿಲ್ಲ ಎಂದು ತೀವ್ರ ಕೆರಳಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಾಗೂ ಪಿಸಿಬಿ, ಇದು ಹೀಗೆ ಮುಂದುವರಿದರೆ ಏನು ಮಾಡೋದು? ಎಂಬ ಚಿಂತೆಯಲ್ಲಿ ಮುಳಗಿದೆ. ಇಷ್ಟು ದಿನ ಬಿಸಿಸಿಐ ಮೊರೆ ಹೋಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ನೇರವಾಗಿ ಐಸಿಸಿ ಅಖಾಡಕ್ಕೆ ಚೆಂಡನ್ನು ಎಸೆದಿದೆ. ಚಾಂಪಿಯನ್ಸ್ ಟ್ರೋಫಿಗೆ ಪಿಸಿಬಿ ಏನು ಮಾಡಬೇಕೋ ಅದನ್ನೆಲ್ಲಾ ಮಾಡಿ ಮುಗಿಸಿದೆ. ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದೆ. ಭಾರತವನ್ನು ಪಾಕಿಸ್ತಾನದಲ್ಲಿ ಆಡಲು ಮನವೊಲಿಸುವುದು ಈಗ ಐಸಿಸಿ ಕೈಯಲ್ಲಿದೆ ಎಂದು ಹೇಳಿ ಸುಮ್ಮನಾಗಿದೆ.
ಇದೆಲ್ಲದರ ಮಧ್ಯೆ ಪಾಕ್ನ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಧ್ವನಿ ಎತ್ತಿದ್ದು, ಪ್ರತ್ಯೇಕವಾಗಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್, ‘ರನ್ಮಷಿನ್’ ವಿರಾಟ್ ಕೊಹ್ಲಿ ಅವರಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ವಿರಾಟ್ ತಮ್ಮ ಕರಿಯರ್ನಲ್ಲಿ ಎಲ್ಲಾ ಕಡೆ ಆಡಿದ್ದಾರೆ ಹಾಗೂ ದಾಖಲೆಗಳನ್ನು ಗಳಿಸಿದ್ದಾರೆ. ಆದ್ರೆ, ಅವರ ಕರಿಯರ್ನಲ್ಲಿ ಬಾಕಿ ಉಳಿದಿರುವುದು ಪಾಕಿಸ್ತಾನಕ್ಕೆ ಬರುವುದು ಮಾತ್ರ. 2006ರಲ್ಲಿ ಅಂಡರ್ 19ನಲ್ಲಿ ಆಡಿದ್ದ ಕೊಹ್ಲಿ, ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಬಳಿಕ ಇಲ್ಲಿಯವರೆಗೆ ಪಾಕ್ಗೆ ಆಗಮಿಸಿಲ್ಲ, ಯಾವುದೇ ಪಂದ್ಯವನ್ನಾಡಿಲ್ಲ. ಇದೊಂದು ಮಾತ್ರ ಈಗ ಬಾಕಿ ಉಳಿದಿದೆ ಎಂದು ಪರೋಕ್ಷವಾಗಿ ವಿರಾಟ್ಗೆ ತಮ್ಮ ತಂಡದೊಂದಿಗೆ ಬರುವಂತೆ ಗಾಳ ಹಾಕಿದ್ದಾರೆ.
ಇದನ್ನೂ ಓದಿ: ಸೀರೆಯುಟ್ಟು ತೌಬಾ ತೌಬಾ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿದ ಮಹಿಳೆ; ವಿಕ್ಕಿ ಕೌಶಲ್ನಿಂದ ಸಿಕ್ತು ಭರ್ಜರಿ ಗಿಫ್ಟ್
“2025ರ ಚಾಂಪಿಯನ್ಸ್ ಟ್ರೋಫಿಗೆ ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬರಬೇಕು. ಇದು ನಮ್ಮ ಆಸೆಯೂ ಹೌದು. ಕೊಹ್ಲಿ ಅವರ ವೃತ್ತಿಜೀವನದಲ್ಲಿ ಪಾಕಿಸ್ತಾನದಲ್ಲಿ ಪ್ರದರ್ಶನ ನೀಡುವುದೊಂದೇ ಸದ್ಯ ಬಾಕಿ ಉಳಿದಿರುವುದು ಎಂದು ಭಾವಿಸುತ್ತೇನೆ” ಎಂದು ಯೂನಿಸ್ ಅಭಿಪ್ರಾಯಿಸಿದ್ದಾರೆ. “ಟೀಮ್ ಇಂಡಿಯಾವನ್ನು ನಾನು ಪಾಕಿಸ್ತಾನಕ್ಕೆ ಸ್ವಾಗತಿಸುತ್ತೇನೆ. ನಾವು ಭಾರತಕ್ಕೆ ಬಂದಾಗ ಅಲ್ಲಿನ ಜನರು ನಮಗೆ ಅಪಾರ ಪ್ರೀತಿ, ಗೌರವ ನೀಡಿದ್ದಾರೆ. ಅದನ್ನು ನಾವು ಮರೆಯಲು ಸಾಧ್ಯವಿಲ್ಲ. ಈಗ ವಿರಾಟ್ ಕೊಹ್ಲಿ ಇಲ್ಲಿಗೆ ಬರುವ ಸಮಯ. ಅವರು ಪಾಕಿಸ್ತಾನಕ್ಕೆ ಬಂದರೆ ಖಂಡಿತ ಭಾರತೀಯ ಅಭಿಮಾನಿಗಳು ಕೊಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನೇ ಮರೆತುಬಿಡುತ್ತಾರೆ” ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ,(ಏಜೆನ್ಸೀಸ್).
ಐಸಿಸಿಗೆ ಗಾಳ ಹಾಕಿದ ಪಿಸಿಬಿ! ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಕರೆಸಿಕೊಳ್ಳಲು ಸಖತ್ ಪ್ಲಾನ್ ಮಾಡಿದೆ ಪಾಕ್
ಗೌತಿ ಇಟ್ಟ ಈ ಕಂಡೀಷನ್ ಪಾಸಾದ್ರೆ ಮಾತ್ರ ಕೊಹ್ಲಿ-ರೋಹಿತ್ಗೆ ವಿಶ್ವಕಪ್ ಆಡೋ ಚಾನ್ಸ್! ಇಲ್ಲದಿದ್ರೆ ಗೇಟ್ಪಾಸ್