ನವದೆಹಲಿ: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆದ ಬಳಿಕ ಮೊದಲ ಪತ್ರಿಕಾಗೋಷ್ಠಿಗೆ ಬಿಸಿಸಿಐ ಆಯ್ಕೆಗಾರರಾದ ಅಜಿತ್ ಅಗರ್ಕರ್ ಜತೆಗೆ ಹಾಜರಾದ ಗೌತಮ್ ಗಂಭೀರ್, ಮುಂಬರುವ ಶ್ರೀಲಂಕಾ ವಿರುದ್ಧದ ವೈಟ್ ಬಾಲ್ ಪಂದ್ಯಗಳು ಹಾಗೂ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದು ಟ್ರೋಫಿ ಎತ್ತಿಹಿಡಿದ ರೋಹಿತ್ ನೇತೃತ್ವದ ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಕನಸನ್ನು ನನಸು ಮಾಡಿಕೊಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ‘ರನ್ಮಷಿನ್’ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ಫಾರ್ಮ್ಯಾಟ್ಗೆ ನಿವೃತ್ತಿ ಘೋಷಿಸಿದರು.
ಇದನ್ನೂ ಓದಿ: ವಿರಾಟ್ ಜತೆಗಿನ ನಿಮ್ಮ ಸಂಬಂಧ ಹೇಗಿದೆ? ‘ಗೌತಿ’ ಕೊಟ್ಟ ಖಡಕ್ ಉತ್ತರಕ್ಕೆ ಪ್ರಶ್ನೆ ಕೇಳಿದವರೇ ಗಪ್ ಚುಪ್!
ಇಬ್ಬರು ಸ್ಟಾರ್ ಕ್ರಿಕೆಟಿಗರು ನಿವೃತ್ತಿ ಕೊಟ್ಟಿದ್ದು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅತೀವ ಬೇಸರ ತಂದೊಡ್ಡಿತು. ಟೀಮ್ ಇಂಡಿಯಾದ ದೊಡ್ಡ ಶಕ್ತಿಯಾಗಿರುವ ವಿರಾಟ್ ಮತ್ತು ರೋಹಿತ್ ಇನ್ನು ಕೆಲವು ವರ್ಷಗಳ ಕಾಲ ತಂಡದಲ್ಲಿ ಆಡುವ ಸಾಮರ್ಥ್ಯವಿದ್ದರೂ ಇಷ್ಟು ಬೇಗ ನಿವೃತ್ತಿ ಅವಶ್ಯಕತೆ ಇರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಅಂತ್ಯಗೊಂಡ ಬೆನ್ನಲ್ಲೇ ಟಿ20 ಪಂದ್ಯಗಳನ್ನು ಬಿಟ್ಟು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಕೊಹ್ಲಿ ಮತ್ತು ರೋಹಿತ್ ಹೇಳಿದ್ದರು. ಆದರೆ, ಎಷ್ಟು ದಿನ ಆಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ.
ಇನ್ನು ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆದ ಗೌತಮ್ ಗಂಭೀರ್ ಯುವ ಕ್ರಿಕೆಟಿಗರಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ವ್ಯಕ್ತಿ ಎಂಬುದು ಅನೇಕರಿಗೆ ಗೊತ್ತಿರುವ ವಿಷಯ. ಅದರಲ್ಲೂ ಸೀನಿಯರ್ ಆಟಗಾರರಿಗೆ ಮತ್ತಷ್ಟು ಅವಕಾಶ ಕೊಡುವ ಮಾತು ಇಲ್ಲವೇ ಇಲ್ಲ. ಹೀಗಿರುವಾಗ ಕೊಹ್ಲಿ ಮತ್ತು ರೋಹಿತ್ಗೆ ಏಕದಿನ ಫಾರ್ಮೆಟ್ ಆಡಲು ಚಾನ್ಸ್ ಕೊಡುವುದು ಬಹುತೇಕ ಡೌಟ್ ಎಂದೇ ಕ್ರಿಕೆಟ್ ಪ್ರಿಯರು ಭಾವಿಸಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ವಿರಾಟ್ ಮತ್ತು ಗಂಭೀರ್ ನಡುವಿನ ವೈಮನಸ್ಸು ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದ್ದು, ಇದರಿಂದ ಕ್ರೀಡಾಂಗಣದಲ್ಲಿ ಕೊಹ್ಲಿ ಅವರ ಅಬ್ಬರ ನೋಡುವುದು ಕಷ್ಟ ಎಂದೇ ಅನಿಸಿತ್ತು. ಆದ್ರೆ, ಗೌತಿ ನೀಡಿದ ಈ ಒಂದು ಆಫರ್ ಅದೆಲ್ಲವನ್ನೂ ಇದೀಗ ತಲೆಕೆಳಗಾಗಿಸಿದೆ.
ಇದನ್ನೂ ಓದಿ: ಲೈವ್ ಶೋನಲ್ಲಿ ಕರೆಂಟ್ ಶಾಕ್ ಹೊಡೆದು ಅಭಿಮಾನಿಗಳ ಎದುರೆ ಪ್ರಾಣ ಬಿಟ್ಟ ಸ್ಟಾರ್ ಸಿಂಗರ್
“ರೋಹಿತ್ ಮತ್ತು ಕೊಹ್ಲಿ ವಿಶ್ವದರ್ಜೆಯ ಆಟಗಾರರು ಮತ್ತು ಯಾವುದೇ ತಂಡವು ಇವರಿಬ್ಬರನ್ನೂ ಆಡಲು ಬಯಸುತ್ತದೆ. ಟೀಮ್ ಇಂಡಿಯಾಗೆ ಈ ಇಬ್ಬರು ಅತ್ಯಂತ ಪ್ರಮುಖ ಆಟಗಾರರು. ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಇಬ್ಬರೂ ಆಡಲಿದ್ದಾರೆ” ಎಂದು ಗೌತಿ ಸ್ಪಷ್ಟಪಡಿಸಿದರು. ನೀವು 2027ರ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಮತ್ತು ರೋಹಿತ್ರನ್ನು ನೋಡಬಹುದು. ತಮ್ಮ ಫಿಟ್ನೆಸ್ ಕಾಪಾಡಿಕೊಂಡರೆ ಖಂಡಿತ 2027ರ ವಿಶ್ವಕಪ್ನ ಟೂರ್ನಿಯಲ್ಲಿ ಅವರಿಬ್ಬರು ಕೂಡ ತಂಡದ ಪರವಾಗಿ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಸದ್ಯ ರೋಹಿತ್ ಮತ್ತು ವಿರಾಟ್ ಮುಂದೆ ಈಗ ಇರುವುದು ಫಿಟ್ನೆಸ್ ಟಾಸ್ಕ್. ಇದರಲ್ಲಿ ಪಾಸಾದ್ರೆ ಮುಂಬರುವ ವಿಶ್ವಕಪ್ನಲ್ಲಿ ಆಡೋ ಚಾನ್ಸ್ ಸಿಗುವುದು ಪಕ್ಕಾ.
ವಿರಾಟ್ ಜತೆಗಿನ ನಿಮ್ಮ ಸಂಬಂಧ ಹೇಗಿದೆ? ‘ಗೌತಿ’ ಕೊಟ್ಟ ಖಡಕ್ ಉತ್ತರಕ್ಕೆ ಪ್ರಶ್ನೆ ಕೇಳಿದವರೇ ಗಪ್ ಚುಪ್!