ಐಸಿಸಿಗೆ ಗಾಳ ಹಾಕಿದ ಪಿಸಿಬಿ! ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಕರೆಸಿಕೊಳ್ಳಲು ಸಖತ್ ಪ್ಲಾನ್ ಮಾಡಿದೆ ಪಾಕ್​

ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ದೊಡ್ಡ ವಿವಾದವೇ ಭುಗಿಲೆದ್ದಿದೆ. 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಸದ್ಯ ಸಿಕ್ಕಾಪಟ್ಟೆ ವಿವಾದಳಿಂದಲೇ ಸದ್ದು ಮಾಡುತ್ತಿದ್ದು, ಪಾಕ್​ ಮಾಜಿ ಆಟಗಾರರ ಹೇಳಿಕೆಗೆ ಟೀಮ್ ಇಂಡಿಯಾ ಕಿಂಚಿತ್ತು ಆದ್ಯತೆ ನೀಡುತ್ತಿಲ್ಲ. ಇದರಿಂದ ತೀವ್ರ ಕೆರಳಿರುವ ಪಾಕಿಸ್ತಾನ, ಇದೇ ಮುಂದುವರಿದರೆ ಏನು ಮಾಡೋದು? ಎಂಬ ಚಿಂತೆಯಲ್ಲಿ ಮುಳಗಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ನೇರವಾಗಿ ಐಸಿಸಿ ಅಖಾಡಕ್ಕೆ ಚೆಂಡನ್ನು ಎಸೆದಿದ್ದು, ಇದು ಅನೇಕರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಮೇಲೆ ಕಿಡಿಕಾರುವ ಪಾಕ್ ಆಟಗಾರನ ಪ್ರೀತಿಸಿ ಮದ್ವೆಯಾದಳು ಭಾರತೀಯ ಯುವತಿ!

2025ರ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರಲು ಕಿಂಚಿತ್ತು ಒಪ್ಪುತ್ತಿಲ್ಲ. ಇದರಿಂದ ತೀವ್ರ ಸಿಡಿಮಿಡಿಗೊಂಡಿರುವ ಪಾಕ್ ಆಟಗಾರರು ಹಾಗೂ ಕ್ರಿಕೆಟ್ ಮಂಡಳಿಗೆ ದಿಕ್ಕು ತೋಚದಂತಾಗಿದೆ. ಇತ್ತ ಧ್ವನಿ ಏರಿಸಿ ಮಾತನಾಡಲು ಆಗುತ್ತಿಲ್ಲ, ಅತ್ತ ಮನವಿ ಮಾಡಲು ಸಿದ್ಧವಿಲ್ಲ. ಈ ಎರಡು ಪರಿಸ್ಥಿತಿಯಿಂದ ಕಟ್ಟುಬಿದ್ದಿರುವ ಪಿಸಿಬಿ ಇದೀಗ ತಮ್ಮ ಬತ್ತಳಿಕೆಯಿಂದ ಹೊಸ ಅಸ್ತ್ರವೊಂದನ್ನು ನೇರವಾಗಿ ಐಸಿಸಿ ಅಖಾಡಕ್ಕೆ ಬಿಟ್ಟಿದೆ. ಈ ಮೂಲಕ ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆತರುವ ಹೊಸ ತಂತ್ರವನ್ನು ಹೂಡಿದೆ.

ಐಸಿಸಿ ಟೂರ್ನಮೆಂಟ್​ಗೆ ಈಗಾಗಲೇ ಹಣಕಾಸು ವಿಚಾರ ಚರ್ಚೆಯಾಗಿದೆಯೇ ವಿನಃ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಪಿಸಿಬಿ ಏನು ಮಾಡಬೇಕೋ ಅದನ್ನೆಲ್ಲಾ ಮಾಡಿ ಮುಗಿಸಿದೆ. ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದೆ. ಭಾರತವನ್ನು ಪಾಕಿಸ್ತಾನದಲ್ಲಿ ಆಡಲು ಮನವೊಲಿಸುವುದು ಈಗ ಐಸಿಸಿ ಕೈಯಲ್ಲಿದೆ. ನಮ್ಮಿಂದ ಏನೇನು ಸಾಧ್ಯವೋ ಅದನ್ನೆಲ್ಲಾ ನಾವು ಮಾಡಿದ್ದೇವೆ. ಟೂರ್ನಿಗೆ ಅಗತ್ಯವಿದ್ದ ಬಜೆಟ್ ಅನ್ನು ಕೂಡ ಅನುಮೋದಿಸಿದ್ದೇವೆ ಎಂದು ಪಿಸಿಬಿ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಇದನ್ನೂ ಓದಿ: KGF 3 ಹೀರೋ ಬದಲಾವಣೆ! ಯಶ್​​ ಬದಲಾಗಿ ಸ್ಟಾರ್​ ಹೀರೋಗೆ ಮಣೆ ಹಾಕಿದ್ರಾ ಪ್ರಶಾಂತ್​ ನೀಲ್

ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕಳುಹಿಸಿಕೊಡುವಂತೆ ಬಿಸಿಸಿಗೆ ತಿಳಿಸಿ ಎಂದು ಐಸಿಸಿಗೆ ಮನವಿ ಮಾಡಿರುವ ಪಾಕ್ ಕ್ರಿಕೆಟ್ ಮಂಡಳಿಗೆ ನಿರೀಕ್ಷಿಸಿದ ಉತ್ತರ ಸಿಗಲಿದೆಯೋ ಅಥವಾ ನಿರಾಸೆಯಾಗಲಿದೆಯೋ ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ಇದೊಂದು ಸಂಗತಿಯಿಂದ ಅಭಿಮಾನಿಗಳ ಹುಬ್ಬೇರಿಸಿದ ರಶ್ಮಿಕಾ! ಅಬ್ಬಬ್ಬಾ ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್​

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…