ಇದೊಂದು ಸಂಗತಿಯಿಂದ ಅಭಿಮಾನಿಗಳ ಹುಬ್ಬೇರಿಸಿದ ರಶ್ಮಿಕಾ! ಅಬ್ಬಬ್ಬಾ ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್​

ಬೆಂಗಳೂರು: ಕನ್ನಡ ಸಿನಿಮಾದಿಂದ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇಂದು ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಟಿಯರ ಸಾಲಿನಲ್ಲಿ ಮೊದಲಿಗರು ಎಂದರೆ ತಪ್ಪಾಗಲಾರದು. ಸ್ಯಾಂಡಲ್​ವುಡ್​, ಟಾಲಿವುಡ್​ ಚಿತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ ಇದೀಗ ಬಾಲಿವುಡ್​ ಅಂಗಳದಲ್ಲೂ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ. ಪ್ರಸ್ತುತ ರಾಷ್ಟ್ರಪ್ರಶಸ್ತಿ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’ ಚಿತ್ರಕ್ಕೆ ನಾಯಕಿಯಾಗಿರುವ ರಶ್ಮಿಕಾ, ಚಿತ್ರೀಕರಣದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಜತೆ ಜತೆಯಲ್ಲಿ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ನೀವು ಅತಿಯಾಗಿ ನಿದ್ದೆ ಮಾಡುತ್ತಿದ್ದೀರಾ? ಹಾಗಿದ್ರೆ ನಿಮ್ಮ ಆರೋಗ್ಯ ಅಪಾಯದಲ್ಲಿರುವುದು ಖಂಡಿತಾ!

ಈ ಹಿಂದೆಯೇ ‘ಪುಷ್ಟ 2’ ಚಿತ್ರತಂಡ ತಿಳಿಸಿದಂತೆ 2024ರ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಇದು ಬಹುತೇಕ ಡೌಟ್ ಎಂದು ಸ್ವತಃ ಚಿತ್ರತಂಡವೇ ಸ್ಪಷ್ಟಪಡಿಸಿದ್ದು, ಈಗಾಗಲೇ ಹೊಸ ದಿನಾಂಕವನ್ನು ಕೂಡ ಘೋಷಿಸಿದೆ. ಚಿತ್ರದ ಮತ್ತಷ್ಟು ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಈ ಕಾರಣಗಳಿಂದ ಸಿನಿಮಾವನ್ನು ಇದೀಗ ಡಿಸೆಂಬರ್​ 06ರಂದು ರಿಲೀಸ್ ಮಾಡಲಿದ್ದೇವೆ ಎಂದು ಚಿತ್ರ ತಯಾರಕರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯ ಸಿನಿಮಾ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದ ಅಭಿಮಾನಿಗಳಿಗೆ ಈ ಒಂದು ಸುದ್ದಿ ಡಬಲ್ ಧಮಾಕಾ ಕೊಟ್ಟಂತಿದೆ. ಯಾಕೆ ಗೊತ್ತಾ? ಹೀಗಿದೆ ನೋಡಿ ವರದಿ.

ಒಂದೆಡೆ ರಶ್ಮಿಕಾ ನಟನೆಯ ‘ಪುಷ್ಪ 2’ ಚಿತ್ರವು ಡಿಸೆಂಬರ್ 06ರಂದು ತೆರೆಕಾಣುತ್ತಿದ್ದರೆ, ಮತ್ತೊಂದೆಡೆ ಇದೇ ದಿನಾಂಕದಂದು ಬಾಲಿವುಡ್​ ನಟ ವಿಕ್ಕಿ ಕೌಶಲ್ ಜತೆ ಅಭಿನಯದ ‘ಛಾವ’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದೊಂದು ರೀತಿ ಫ್ಯಾನ್ಸ್​ಗೆ ಭಾರೀ ಅಚ್ಚರಿ ತಂದಿದ್ದು, ನಟಿಯ ಎರಡು ಬಹುನಿರೀಕ್ಷಿತ ಸಿನಿಮಾಗಳನ್ನು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳನ್ನು ಒಂದೇ ದಿನ ರಿಲೀಸ್ ಮಾಡುವಂತದ್ದೇನಿತ್ತು ಎಂಬ ಪ್ರಶ್ನೆಯನ್ನು ಸದ್ಯ ಫ್ಯಾನ್ಸ್​ ಎರಡು ಚಿತ್ರತಂಡಕ್ಕೂ ಕೇಳಿದ್ದಾರೆ.

ಇದನ್ನೂ ಓದಿ: ಕಾಲೇಜ್​​​ ಫೀಜ್​ನಲ್ಲೇ ದಂಡ ಕಟ್ಟಿದ್ದೀನಿ ಮೇಡಂ ಮನೇಲಿ ಬೈತಾರೆ! ಬಾಲಕನ ಕಣ್ಣೀರಿಗೆ ಕರಗಿದ ಲೇಡಿ ಪಿಎಸ್​ಐ

ಒಂದಷ್ಟು ಅಭಿಮಾನಿಗಳಿಗೆ ಇದು ಖುಷಿ ಮೂಡಿಸಿದರೆ, ಮತ್ತೊಂದಷ್ಟು ಫ್ಯಾನ್ಸ್​ಗಳಿಗೆ ಬೇಸರ ತಂದಿದೆ. ಡಬಲ್ ಧಮಾಕಾ ಓಕೆ ಆದ್ರೆ, ಎರಡು ಬಹುನಿರೀಕ್ಷಿತ ಒಂದೇ ದಿನ ರಿಲೀಸ್ ಏಕೆ? ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ಗೌತಿ ಇಟ್ಟ ಈ ಕಂಡೀಷನ್​ ಪಾಸಾದ್ರೆ ಮಾತ್ರ ಕೊಹ್ಲಿ-ರೋಹಿತ್​ಗೆ ವಿಶ್ವಕಪ್​ ಆಡೋ ಚಾನ್ಸ್! ಇಲ್ಲದಿದ್ರೆ ಗೇಟ್​ಪಾಸ್​

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…