ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ವರ್ಷಗಳಲ್ಲಿ ಮುಟ್ಟಿದೆಲ್ಲಾ ಚಿನ್ನ ಎಂಬಂತಾಗಿದೆ. ಅವರ ನಟನೆಯ ಸಿನಿಮಾಗಳು ಹಿಟ್ಲಿಸ್ಟ್ ಸೇರುತ್ತಿದ್ದು, ಇದೀಗ ಅವರ ನಟನೆಯ ಬ್ಯಾಡ್ ನ್ಯೂಸ್ ಚಿತ್ರದ ತೌಬಾ ತೌಬಾ ಹಾಡು ಸಖತ್ ಸೌಂಡ್ ಮಾಡುತ್ತಿದ್ದು, ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದೀಗ ಈ ಹಾಡಿಗೆ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋಗೆ ಸ್ವತಃ ವಿಕ್ಕಿ ಕೌಶಲ್ ಕೂಡ ಕಮೆಂಟ್ ಮಾಡಿದ್ದಾರೆ.
ರೂಪಾಲಿ ಸಿಂಗ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತೌಬಾ ತೌಬಾ ಹಾಡಿಗೆ ಮಕ್ಕಳ ಜೊತೆ ಮಹಿಳೆ ಸೀರೆಯುಟ್ಟು ಹೆಜ್ಜೆ ಹಾಕುತ್ತಿದ್ದಾರೆ. ಈ ವಿಡಿಯೋ 55 ಮಿಲಿಯನ್ ವೀವ್ ಪಡೆದುಕೊಂಡಿದ್ದು, ಮಹಿಳೆಯ ಡ್ಯಾನ್ಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 81 ಸಾವಿರ ಫಾಲೋವರ್ಸ್ ಹೊಂದಿರುವ ರೂಪಾಲಿ ಅವರು ಆಗಿಂದಾಗೆ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಾಕುತ್ತಿರುತ್ತಾರೆ.
ಇದನ್ನೂ ಓದಿ: ಸರ್ಕಾರ ವಂಚನೆ ಎಸಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ; ಬಜೆಟ್ ಖಂಡಿಸಿ ಸಂಸತ್ ಎದುರು ಪ್ರತಿಭಟನೆ ನಡೆಸಿದ ವಿಪಕ್ಷ ಸಂಸದರು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ವಿಕ್ಕಿ ಕೌಶಲ್, ಹಾಡನ್ನು ಕೊರಿಯೋಗ್ರಾಫಿ ಮಾಡಿದ ಬಾಸ್ಕೋ ಮಾರ್ಟಿಸ್ ಹಾಗೂ ತಾಹಿರಾ ಕಶ್ಯಪ್ ಮಹಿಳೆಯ ಡ್ಯಾನ್ಸ್ ವಿಡಿಯೋಗೆ ಕಮೆಂಟ್ ಮಾಡಿದ್ದು, ಕ್ಯಾ ಬಾತ್ ಹೈ ಎಂದು ಹೇಳಿ ಹಾರ್ಟ್ ಎಮೋಜಿ ಹಾಕಿದ್ದಾರೆ. ಇದಲ್ಲದೆ ಪೊಲೀಸ್ ಅಧಿಕಾರಿ ಸೇರಿದಂತೆ ಅನೇಕರು ಕಮೆಂಟ್ ಮಾಡಿ ಮಹಿಳೆಯನ್ನು ಹಾಡಿ ಹೊಗಳಿದ್ದಾರೆ.
ವಿಕ್ಕಿ ಕೌಶಲ್, ತ್ರಿಪ್ತಿ ದಿಮ್ರಿ ನಟನೆಯ ಬ್ಯಾಡ್ ನ್ಯೂಸ್ ಚಿತ್ರವು ಜುಲೈ 19ರಂದು ವಿಶ್ವದಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಾಕ್ಸ್ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.