More

    ‘ಎಕ್ಸ್’ ವಿಚಾರ: ಸಾರಾಸಗಟು ಇಲ್ಲವೆಂದ ತೆಂಡುಲ್ಕರ್ ಪುತ್ರಿ!

    ಬೆಂಗಳೂರು: ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಕೂಡ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಈ ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಅವರ ಕುರಿತು ಹಲವು ಸುದ್ದಿಗಳು ಹರಿದಾಡಿದ್ದವು.

    ದೇಶಾದ್ಯಂತ ಇತ್ತೀಚೆಗೆ ಡೀಪ್​ಫೇಕ್​ ಫೋಟೋ/ವಿಡಿಯೋ ಪ್ರಕರಣಗಳು ಹೆಚ್ಚಾಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಇದು ಆತಂಕಕಾಗಿ ಸಂಗತಿಯಾಗಿ ಪರಿಣಮಿಸಿದೆ. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರ ಡೀಪ್​ಫೇಕ್ ಫೋಟೋ/ವಿಡಿಯೋಗಳು ಇತ್ತೀಚೆಗೆ ಹರಿದಾಡಿದ್ದವು.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಇದೀಗ ತಮ್ಮ ಫೋಟೋ ಕೂಡ ಡೀಪ್​ಫೇಕ್ ಆಗಿವೆ ಎಂದು ಆ ಕುರಿತು ಮಾಹಿತಿ ಹಂಚಿಕೊಂಡಿರುವ ತೆಂಡುಲ್ಕರ್ ಪುತ್ರಿ ಸಾರಾ, ‘ಎಕ್ಸ್’​ ವಿಚಾರವಾಗಿ ಇನ್ನೊಂದು ಮಹತ್ವದ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

    ಎಕ್ಸ್​ನಲ್ಲಿ ಅರ್ಥಾತ್ ಹಳೆಯ ಟ್ವಿಟರ್​ನಲ್ಲಿ ನನ್ನ ಹೆಸರಿನ ಕೆಲವು ಖಾತೆಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲಾಗುತ್ತದೆ. ನಾನು ಎಕ್ಸ್​ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಸಾರಾ, ಎಕ್ಸ್​ ಆ್ಯಪ್​ನವರು ಈ ನಕಲಿ ಖಾತೆಗಳ ಕುರಿತು ಸೂಕ್ತ ಕ್ರಮಕೈಗೊಳ್ಳಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಸಾರಾ ತೆಂಡುಲ್ಕರ್​ ಹೆಸರಿನಲ್ಲಿ ಹಲವು ಎಕ್ಸ್​ ಖಾತೆಗಳಿದ್ದು, ಈ ಮೂಲಕ ಸಾರಾಸಗಟಾಗಿ ಈಕೆ ಆ ಎಲ್ಲ ಖಾತೆಗಳನ್ನು ತಮ್ಮದಲ್ಲವೆಂದು ಹೇಳಿದ್ದಾರೆ.

    'ಎಕ್ಸ್' ವಿಚಾರ: ಸಾರಾಸಗಟು ಇಲ್ಲವೆಂದ ತೆಂಡುಲ್ಕರ್ ಪುತ್ರಿ!

    ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts