More

    ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

    ಬೆಂಗಳೂರು: ಮೊನ್ನೆಯಷ್ಟೇ ಕೊನೆಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಆ ಚಾಂಪಿಯನ್ಸ್​ ತಂಡದ ಹಿಂದೆ ಕರಾವಳಿಯ ಮಹಿಳೆಯೊಬ್ಬರು ಇರುವುದು ತಡವಾಗಿ ಬೆಳಕಿಗೆ ಬಂದಿದೆ.

    ಅಂದರೆ ಈ ಸಲ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್​ ಆಗಿರುವ ಊರ್ಮಿಳಾ ರೊಸೆರಿಯೊ ಮೂಲತಃ ಮಂಗಳೂರಿನವರು. ಟೀಮ್ ಮ್ಯಾನೇಜರ್ ಆಗಿರುವ ಈಕೆಯ ನೇತೃತ್ವದಲ್ಲಿ ಒಂದು ಪ್ರತ್ಯೇಕ ತಂಡವಿದ್ದು, ಇವರು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಪ್ರಯಾಣ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ನೋಡಿಕೊಳ್ಳುತ್ತಾರೆ.

    ಯಾರೀಕೆ ಊರ್ಮಿಳಾ?: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಕಿನ್ನಿಗೋಳಿಯ ವೆಲಂಟೈನ್ ರೊಸೆರಿಯೊ ಮತ್ತು ಇವಿ ಅವರ ಪುತ್ರಿಯೇ ಊರ್ಮಿಳಾ ರೊಸೆರಿಯೊ. ಈ ದಂಪತಿ ದೋಹಾ ಕತಾರ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಜನಿಸಿದ್ದ ಊರ್ಮಿಳಾಗೆ ಈಗ 34 ವರ್ಷ. ಈಕೆಯ ತಂದೆ-ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು, ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ನೆಲೆಸಿದ್ದಾರೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಈ ಮಧ್ಯೆ ಕಾರ್ನೆಜಿ ಮೆಲನ್ ಯುನಿವರ್ಸಿಟಿಯಲ್ಲಿ ಬಿಬಿಎ ಪದವಿ ಪಡೆದಿರುವ ಊರ್ಮಿಳಾ ಆಸ್ಟ್ರೇಲಿಯಾಗೆ ತೆರಳಿದ್ದರು. ಇದಕ್ಕೂ ಮುನ್ನ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಊರ್ಮಿಳಾ, ಮೂರು ವರ್ಷಗಳ ಕಾಲ ಕತಾರ್ ಟೆನಿಸ್ ಫೆಡರೇಷನ್​ನಲ್ಲೂ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾಗೆ ತೆರಳಿದ ಬಳಿಕ ಮೊದಲಿಗೆ ಮೂರು ವರ್ಷ ಅಡಿಲೇಡ್ ಕ್ರಿಕೆಟ್ ಟೀಮ್ ಜತೆ ಕೆಲಸ ಮಾಡಿದ್ದರು. ನಂತರ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆದರು.

    ನಂತರ ಕಳೆದ ಫುಟ್​ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಕ್ರಿಕೆಟ್​ನಿಂದ ಬಿಡುವು ಪಡೆದ ಊರ್ಮಿಳಾ ಕತಾರ್​ನಲ್ಲಿ ನಾಲ್ಕು ತಿಂಗಳ ಕಾಲ ಫುಟ್​ಬಾಲ್ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿ ನಿಭಾಯಿಸಿದ್ದರು. ಇದೇ ಸೆಪ್ಟೆಂಬರ್​ನಲ್ಲಿ ಮತ್ತೆ ಆಸ್ಟ್ರೇಲಿಯಾಗೆ ವಾಪಸ್ ಆದ ಈಕೆಗೆ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವನ್ನು ನಿರ್ವಹಣೆ ಮಾಡುವ ಅವಕಾಶ ಸಿಕ್ಕಿತ್ತು.

    ಇದನ್ನೂ ಓದಿ: ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

    ಊರ್ಮಿಳಾ ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದು, ಅದು ಮುಗಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಮರಳಲಿದ್ದು, ಈ ತಂಡ ಡಿಸೆಂಬರ್​​ನಲ್ಲಿ ಭಾರತಕ್ಕೆ ಬರುವಾಗ ಜೊತೆಯಾಗಲಿದ್ದಾರೆ ಎಂಬುದಾಗಿ ಈಕೆಯ ತಂದೆ ಮಾಹಿತಿ ನೀಡಿದ್ದಾರೆ.
    ಅಂದಹಾಗೆ ಈಕೆ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸಿದ್ದೇ ಅಚ್ಚರಿ. ವಿದ್ಯಾರ್ಥಿನಿ ಆಗಿದ್ದಾಗ ಅವಳು ಬಾಸ್ಕೆಟ್​ಬಾಲ್, ಟೆನಿಸ್​, ರೋಯಿಂಗ್, ಬಂಗಿ ಜಂಪಿಂಗ್​ನಲ್ಲಿ ತೊಡಗಿಸಿಕೊಂಡಿದ್ದಳು. ಆದರೆ ನಂತರ ಹೀಗೆ ಕ್ರಿಕೆಟ್​ನಲ್ಲಿ ತೊಡಗಿಸಿಕೊಳ್ಳುತ್ತಾಳೆ ಎಂಬ ಯೋಚನೆಯೇ ಇರಲಿಲ್ಲ ಎನ್ನುತ್ತಾರೆ ಊರ್ಮಿಳಾ ಅವರ ತಂದೆ ವೆಲಂಟೈನ್.

    ಮಹಿಳೆಯರ ಕ್ರಿಕೆಟ್ ತಂಡವನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದರಿಂದ ಆಕೆಗೆ ಈ ಜವಾಬ್ದಾರಿ ಸಿಕ್ಕಿರಬಹುದು. ಅಲ್ಲದೆ ಭಾರತದ ಪರಿಚಯ ಮತ್ತು ಭಾಷೆಗಳ ಅರಿವು ಚೆನ್ನಾಗಿರುವುದರಿಂದ ಪುರುಷರ ಟೀಮ್​ ಮ್ಯಾನೇಜ್ ಮಾಡುವ ಅವಕಾಶ ನೀಡುವಾಗ ಪರಿಗಣಿಸಿರಬಹುದು ಎನ್ನುತ್ತಾರೆ ವೆಲಂಟೈನ್. ಆಸ್ಟ್ರೇಲಿಯಾ ತಂಡ ಬೆಂಗಳೂರು ಮತ್ತು ಪುಣೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎದುರು ಆಡಿದ್ದ ಕ್ರಿಕೆಟ್ ಪಂದ್ಯವನ್ನು ಊರ್ಮಿಳಾ ತಂದೆ-ತಾಯಿ ವೀಕ್ಷಿಸಿದ್ದರು.

    ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

    ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ಸೋತಿದ್ದಕ್ಕೆ ಬೇಜಾರಾಗಿ ಸತ್ತ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts