More

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಎಂಬ ಹೆಸರು ಹೇಗೆ ಬಂತು, ಇದರ ಹಿನ್ನೆಲೆ ಏನು ಎಂಬ ಕುತೂಹಲ ಹಲವರಿಗೆ ಇದ್ದಿರಬಹುದು.

    ರಾಜ್ಯದಲ್ಲಿ ಘಟಾನುಘಟಿ ಕ್ರಿಕೆಟ್ ಆಟಗಾರರು ಇದ್ದರೂ ಯಾಕೆ ಚಿನ್ನಸ್ವಾಮಿ ಅವರ ಹೆಸರನ್ನೇ ಈ ಕ್ರೀಡಾಂಗಣಕ್ಕೆ ಇಡಲಾಯಿತು ಎಂಬುದು ಆಸಕ್ತಿಕರ ಸಂಗತಿ. ಅದರಲ್ಲೂ ನಿನ್ನೆ ಅಂದರೆ ನ. 8 ಎಂ. ಚಿನ್ನಸ್ವಾಮಿ ಅವರ ಪುಣ್ಯದಿನ. ಈ ಹಿನ್ನೆಲೆಯಲ್ಲಿ ಅವರ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಇವರ ಪೂರ್ತಿ ಹೆಸರು ಮಂಗಳಂ ಚಿನ್ನಸ್ವಾಮಿ. ಇವರು 1900ರ ಮಾರ್ಚ್ 29ರಂದು ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾದ ಚಿನ್ನಸ್ವಾಮಿ 1925ರಿಂದ 1975ರವರೆಗೆ ಸಕ್ರಿಯವಾಗಿ ವಕೀಲಿಕೆ ನಡೆಸಿದವರು. ಅನೇಕ ಪ್ರಸಿದ್ಧ ಸಂಸ್ಥೆಗಳಿಗೆ ಕಾನೂನು ತಜ್ಞರಾಗಿದ್ದರು. ಎಂಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿದ್ದರು. ಅಲ್ಲದೆ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೂ ಅಪಾರ ಪರಿಶ್ರಮ ವಹಿಸಿದ್ದರು.

    ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​: ಭಾರತ-ಪಾಕಿಸ್ತಾನ ಸೆಮಿಫೈನಲ್ ಫಿಕ್ಸಾ?

    ಚಿನ್ನಸ್ವಾಮಿ ಭಾರತೀಯ ಕ್ರಿಕೆಟ್ ನಿರ್ವಾಹಕರಾಗಿ ಪ್ರಸಿದ್ಧರಾದವರು. ಅವರು ಬ್ಯಾಟಿಂಗ್ ಬೌಲಿಂಗ್ ಮಾಡಿದವರಲ್ಲ. 1952-53ರ ಅವಧಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್ಮಿ ಅಧಿಕಾರಿಗಳ ಪಂದ್ಯದ ಸಮಯದಲ್ಲಿ ಒಂದು ಭಿನ್ನಾಭಿಪ್ರಾಯ ಸರಿಪಡಿಸಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕ್ರಿಕೆಟ್ ಸಂಸ್ಥೆಗೆ ಕಾರ್ಯದರ್ಶಿಗಳಾಗಿ ಪರಿಗಣಿತರಾದ ಅವರು ಮುಂದಿನ 25 ವರ್ಷಗಳ ಕಾಲ ಅದರ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದರು. ಕ್ರಿಕೆಟ್ ಲೋಕದಲ್ಲಿ ಅಮರ ಹೆಸರಾದರು.

    ಚಿನ್ನಸ್ವಾಮಿ 1977ರಿಂದ 1980ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದರು. ಅದಕ್ಕೆ ಮುಂಚೆ 1960ರಿಂದ 1965ರವರೆಗೆ ಕಾರ್ಯದರ್ಶಿಯಾಗಿದ್ದರು. ಅವರು ದೀರ್ಘಾವಧಿಯವರೆಗೆ ಉಪಾಧ್ಯಕ್ಷರಾಗಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1965, 1973 ಮತ್ತು 1977- 1980ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

    ಇದನ್ನೂ ಓದಿ: ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ: ಎಂದಿನಿಂದ, ಎಷ್ಟು ದಿನ? ಇಲ್ಲಿದೆ ವಿವರ..

    ಚಿನ್ನಸ್ವಾಮಿ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಸಂಸ್ಥಾಪಕರಲ್ಲಿ ಪ್ರಮುಖರು. ಅವರು 1953ರಿಂದ 1978ರವರೆಗೆ ಅದರ ಕಾರ್ಯದರ್ಶಿಯಾಗಿ ಮತ್ತು 1978ರಿಂದ 1990ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು 1967-68ರಲ್ಲಿ ಆಸ್ಟ್ರೇಲಿಯಾದ ಭಾರತೀಯ ಪ್ರವಾಸಕ್ಕೆ ಖಜಾಂಚಿಯಾಗಿ ಮತ್ತು ಎರಡನೇ ಅಧಿಕಾರಿಯಾಗಿದ್ದರು. ಎರಡು ವರ್ಷಗಳ ನಂತರ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಭೇಟಿ ನೀಡಿದಾಗ ಸರಣಿಯ ವ್ಯವಸ್ಥಾಪಕರಾಗಿದ್ದರು. ಎಂಸಿಸಿ 1969ರಲ್ಲಿ ಅವರಿಗೆ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿತು.

    ಇದನ್ನೂ ಓದಿ: ಅಗಲಿದ ಮಗನ ನೆನಪಲ್ಲೇ 600ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದ ತಂದೆ!

    ಚಿನ್ನಸ್ವಾಮಿ ಅವರು ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿ. ಅನೇಕ ಗಣ್ಯ ವ್ಯಕ್ತಿಗಳಿಂದ ಸಹಕಾರ ಪಡೆದ ಅವರು, 1969ರಲ್ಲಿ ಮಹಾತ್ಮ ಗಾಂಧಿ ರಸ್ತೆ ಪ್ರದೇಶದಲ್ಲಿ ಕ್ರಿಕೆಟ್‌ಗಾಗಿ ಮೈದಾನ ಮಂಜೂರು ಮಾಡಲು ಕರ್ನಾಟಕ ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.

    ಚಿನ್ನಸ್ವಾಮಿಯವರು ತಮ್ಮ ಹೆಸರನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆ ಇಡುವುದಕ್ಕೆ ಸಹಮತ ಹೊಂದಿಲ್ಲದ ನಿಸ್ವಾರ್ಥ ಮನೋಭಾವ ಹೊಂದಿದ್ದರು. ಹೀಗಿದ್ದಾಗ್ಯೂ ಕರ್ನಾಟಕದ ಕ್ರಿಕೆಟ್ ಪ್ರಿಯರು ಅವರ ಕೊಡುಗೆಗಳಿಗೆ ಗೌರವ ತಾಳಿದವರಾಗಿದ್ದು ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಬಯಸಿದರು. ಹೀಗೆ ಈ ಕ್ರೀಡಾಂಗಣಕ್ಕೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಎಂದು ನಾಮಕರಣವಾಗಿದ್ದು, ಇಂದು ವಿಶ್ವಪ್ರಸಿದ್ಧಿ ಪಡೆದಿದೆ. ಎಂ. ಚಿನ್ನಸ್ವಾಮಿ 1991ರ ನ. 8ರಂದು ನಿಧನರಾದರು.

    ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಟೂಲ್ ಇಟ್ಟು ಕುಳಿತು ಬಸ್​ಗೆ ತಡೆ; ಸಿನಿಮೀಯ ರೀತಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ ನೆರವಾದ ಉದ್ಯಮಿ

    ನೋಟ್ ಬ್ಯಾನ್​ನಿಂದ ಆದ ಒಂದೇ ಒಂದು ಪ್ರಯೋಜನವಿದ್ದರೆ ಬಿಜೆಪಿ ಉತ್ತರಿಸಲಿ: ಕಾಂಗ್ರೆಸ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts