More

    ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಬೆಂಗಳೂರು: ಮನುಷ್ಯರು ಸಾಮಾನ್ಯವಾಗಿ ಮೂರೂ ಹೊತ್ತು ಆಹಾರ ಸೇವಿಸುತ್ತಾರಾದರೂ ಪ್ರತಿ ಆಹಾರಕ್ಕೂ ಅದರ ಸೇವನೆಗೆ ಸೂಕ್ತ ಎಂಬಂಥ ಸಮಯ ಇರುತ್ತದೆ. ಕೆಲವು ಆಹಾರಗಳು ಸೇವಿಸುವ ಸಮಯಕ್ಕೆ ತಕ್ಕಂತೆ ದೇಹದ ಮೇಲೆ ಪರಿಣಾಮ ಬೀರುತ್ತವೆ.

    ಅದರಲ್ಲೂ ಹಾಲಿನ ವಿಚಾರದಲ್ಲಿ ಇದು ಅತ್ಯಂತ ಮುಖ್ಯವಾದುದು. ಹಾಲು ಆರೋಗ್ಯಕ್ಕೆ ಉತ್ತಮ ಎಂದಾದರೂ ಅದನ್ನು ಸೇವಿಸುವ ಸಮಯ ಯಾವುದು ಎನ್ನುವುದು ಕೂಡ ಬಹುಮುಖ್ಯವಾಗಿರುತ್ತದೆ. ಆಯುರ್ವೇದದಲ್ಲಿ ಇತರ ಕೆಲವು ಆಹಾರಗಳ ಸೇವನೆಗೂ ಇಂಥ ಸಮಯವೇ ಸೂಕ್ತ ಎಂಬ ನಿಯಮವಿದೆ.

    ಹಾಲಿನ ಸೇವನೆಯನ್ನು ಮೂರು ವಿಭಿನ್ನ ಸಮಯಗಳಲ್ಲಿ ಸೇವಿಸುವುದರಿಂದ ಏನಾಗುತ್ತದೆ ಎಂಬ ಕುರಿತು ಇಲ್ಲೊಂದಿಷ್ಟು ಮಾಹಿತಿಗಳಿವೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ.. ಹೀಗೆ ಯಾವ ಹೊತ್ತಿನಲ್ಲಿ ಹಾಲು ಕುಡಿದರೆ ಉತ್ತಮ ಎಂಬುದಕ್ಕೆ ಇಲ್ಲೊಂದಿಷ್ಟು ಸಲಹೆಗಳಿವೆ.

    ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

    ಬೆಳಗ್ಗೆ: ಹಾಲನ್ನು ಬೆಳಗ್ಗಿನ ಸಮಯದಲ್ಲಿ ಕುಡಿಯುವುದರಿಂದ ಹೆಚ್ಚಿನ ಪೋಷಣೆ ಸಿಗುವುದರಿಂದ ದೈಹಿಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದು ದೇಹದ ತೂಕವನ್ನೂ ಹೆಚ್ಚಿಸುತ್ತದೆ. ಅದಾಗ್ಯೂ ಬೆಳಗ್ಗಿನ ಹೊತ್ತಲ್ಲಿ ಸೇವಿಸುವುದರಿಂದ ಆಯಾಸ, ಆಲಸ್ಯ ಹಾಗೂ ಆಮ್ಲೀಯತೆ ಉಂಟಾಗುತ್ತದೆ.

    ಮಧ್ಯಾಹ್ನ: ದಿನದ ಮಧ್ಯೆ ಅಂದರೆ ಮಧ್ಯಾಹ್ನದ ಸಮಯದಲ್ಲಿ ಹಾಲು ಸೇವಿಸುವುದರಿಂದ ಬಲ ಹೆಚ್ಚುತ್ತದೆ, ಹಸಿವೂ ಸುಧಾರಿಸುತ್ತದೆ. ಮಾತ್ರವಲ್ಲ ಕಷ್ಟಕರವಾದ ಅಥವಾ ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆ ಉಳ್ಳವರಿಗೆ ಇದು ಅನುಕೂಲಕಾರಿ. ವಿಶೇಷವಾಗಿ ಮಕ್ಕಳಿಗೆ ಮಧ್ಯಾಹ್ನದ ಹೊತ್ತಲ್ಲಿ ಹಾಲು ಕುಡಿಸುವುದು ಒಳ್ಳೆಯದು.

    ರಾತ್ರಿ: ಇರುಳಿನ ಸಮಯದಲ್ಲಿ ಹಾಲು ಕುಡಿಯುವುದರಿಂದ ದೇಹದಲ್ಲಿನ ಮೂರು ದೋಷಗಳ ಸಮತೋಲನ ಉಂಟಾಗುತ್ತದೆ. ಅಷ್ಟಕ್ಕೂ ರಾತ್ರಿ ಹಾಲು ಸೇವನೆಗೂ ಮಲಗುವುದಕ್ಕೂ ಮಧ್ಯ 30 ನಿಮಿಷ ಅಂತರವಿದ್ದರೆ ಉತ್ತಮ. ಹಾಗೇ ರಾತ್ರಿ ಹಾಲು ಸೇವನೆ ಮತ್ತು ಊಟದ ಮಧ್ಯೆ ಸಾಕಷ್ಟು ಅಂತರವಿರಲಿ.

    ಕುಡಿಯುವ ಹಾಲು ಹೇಗಿರಬೇಕು?

    ಆಯುರ್ವೇದದ ಪ್ರಕಾರ ಕುಡಿಯುವ ಹಾಲು ತೀರಾ ತಣ್ಣಗಿರಬಾರದು, ಹಾಲು ಬಿಸಿ ಇರಬೇಕು. ಜ್ವರ, ಅಜೀರ್ಣ, ಕೆಮ್ಮು, ದೇಹದಲ್ಲಿನ ಕಫ ಹೆಚ್ಚಳವಿದ್ದಾಗ ಮತ್ತು ಕೆಲವೊಂದು ಚರ್ಮದ ಸಮಸ್ಯೆ, ಕರುಳಿನ ಸಮಸ್ಯೆಗಳು ಇದ್ದಾಗ ಹಾಲು ಸೇವಿಸದಿರುವುದು ಒಳ್ಳೆಯದು. ಇನ್ನು ಹಾಲಿಗೆ ಸಿಹಿ ಬೆರೆಸದೆ ಕುಡಿಯುವುದು ಉತ್ತಮ ಎನ್ನಲಾಗಿದೆ.

    ಲವಣದ ಅಂಶಗಳಿರುವ ಪದಾರ್ಥದೊಂದಿಗೆ ಹಾಲನ್ನು ಸೇರಿಸಿ ಕುಡಿಯುವುದು ಸೂಕ್ತವಲ್ಲ. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯವುದು ಒಳ್ಳೆಯದಲ್ಲ. ಅಲೋಪಥಿ ಔಷಧ ಸೇವನೆಗೆ ಹಾಲನ್ನು ಬಳಸುವುದು ತಪ್ಪು.

    ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..

    ರಾತ್ರಿ ಮಲಗುವ ಮುನ್ನ ಇವುಗಳನ್ನು ಮಾಡಬೇಡಿ: ಯಾತಕ್ಕಾಗಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts