ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

Linga Bhairavi Temple
Published on

ಕೊಯಮತ್ತೂರು: ಸಾಮಾನ್ಯವಾಗಿ ದೇವಸ್ಥಾನವೆಂದರೆ ಅಲ್ಲಿ ಪುರುಷರಿಂದಲೇ ಪೂಜೆ ನಡೆಯುತ್ತಿರುತ್ತದೆ. ಗರ್ಭಗುಡಿಗೆ ಅವರಿಗಷ್ಟೇ ಪ್ರವೇಶ ಇರುತ್ತದೆ. ಇನ್ನು ಮುಟ್ಟಾದವರು ದೇವಸ್ಥಾನಕ್ಕೆ ಹೋಗಬಾರದು ಎಂಬ ಕಟ್ಟಳೆಯೂ ಇದೆ. ಆದರೆ ಇಲ್ಲೊಂದು ಕಡೆ ಈ ನಿರ್ಬಂಧಗಳಿಲ್ಲ, ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ.

ಹೌದು.. ಇಲ್ಲೊಂದು ದೇವಸ್ಥಾನದಲ್ಲಿ ಮಹಿಳೆಯರೇ ಅರ್ಚಕರು, ಅವರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಅವರಿಗೆ ಮಾತ್ರ ಪೂಜೆಗೆ ಮಾಡಲು ಅವಕಾಶ. ಅಷ್ಟೇ ಅಲ್ಲ, ಭಕ್ತೆಯರು ಮುಟ್ಟಾಗಿದ್ದರೂ ಇಲ್ಲಿಗೆ ಬರಬಹುದು, ಅವರಿಗೆ ಯಾವ ನಿರ್ಬಂಧವೂ ಇಲ್ಲ.

ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತ ಪ್ರದೇಶದ ಬುಡದಲ್ಲಿ ಮಾ ಲಿಂಗ ಭೈರವಿ ಎಂಬ ದೇವಸ್ಥಾನದಲ್ಲಿ ಇಂಥ ಸನ್ನಿವೇಶ ಕಾಣಸಿಗುತ್ತದೆ. ಬೈರಾಗಿಣಿ ಮಾ ಎಂದೂ ಕರೆಯಲಾಗುವ ಈ ದೇವಸ್ಥಾನದಲ್ಲಿ ಮಹಿಳೆಯರು ಕೆಂಪು ಸೀರೆ ಉಟ್ಟುಕೊಂಡು ಪೂಜೆ ಮಾಡುತ್ತಾರೆ.

ತಮಿಳುನಾಡಿನ ಕೊಯಮತ್ತೂರು ನಗರದಿಂದ 40 ಕಿಲೋಮೀಟರ್ ದೂರದಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಆಶ್ರಮದಲ್ಲಿ ಈ ದೇವಾಲಯ ಇದೆ. ಈ ದೇವಸ್ಥಾನ ಗೋಡೆಗಳಲ್ಲಿ ತಲೆಕೆಳಗಾದ ತ್ರಿಕೋನದ ರಚನೆಗಳಿದ್ದು, ಗರ್ಭದ ಸಂಕೇತ ಎನ್ನಲಾಗುತ್ತಿದೆ. ದೇವಾಲಯದ ವಿನ್ಯಾಸವು ಸ್ತ್ರೀಯ ದೇಹವನ್ನು ಪ್ರತಿನಿಧಿಸುವಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net