More

    ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

    ಬೆಂಗಳೂರು: ಆನ್​ಲೈನ್​ ಹಣಕಾಸು ವಹಿವಾಟಿಗೆ, ಹಣ ರವಾನಿಸಲು ಅಥವಾ ಸ್ವೀಕರಿಸಲು ಬ್ಯಾಂಕ್ ಖಾತೆ ಅಗತ್ಯ. ಆದರೆ ಬ್ಯಾಂಕ್ ಖಾತೆ ಅಗತ್ಯವಿರದೇ ಹಣಕಾಸು ವಹಿವಾಟು ನಡೆಸಲು ಸಾಧ್ಯ. ಇಂಥದ್ದೊಂದು ಅವಕಾಶ ಮುಂದಿನ ವರ್ಷಾಂತ್ಯದ ಸುಮಾರಿಗೆ ಲಭ್ಯವಾಗಲಿದೆ.

    ಹೌದು.. ಸದ್ಯ ಆನ್​ಲೈನ್​ ಹಣಕಾಸು ವಹಿವಾಟು ಸಾಧ್ಯವಾದರೂ ಅದಕ್ಕೆ ಬ್ಯಾಂಕ್ ಖಾತೆ ಅಗತ್ಯ. ಬ್ಯಾಂಕ್ ಖಾತೆ ಇದ್ದರೆ ಮಾತ್ರ ಭೀಮ್, ಗೂಗಲ್ ಪೇ, ಫೋನ್​ ಪೇ ಇತ್ಯಾದಿ ಮೂಲಕ ಇಲ್ಲವೇ ನೆಟ್​ ಬ್ಯಾಂಕಿಂಗ್ ಮುಖಾಂತರ ಹಣಕಾಸು ವಹಿವಾಟು ನಡೆಸಬಹುದು. ಆದರೆ ಬ್ಯಾಂಕ್ ಖಾತೆಯೇ ಇರದೆ ಆನ್​ಲೈನ್​ನಲ್ಲಿ ಹಣ ಪಾವತಿ-ಸ್ವೀಕೃತಿ ಸಾಧ್ಯ ಎಂದರೆ ಅಚ್ಚರಿ ಅನಿಸಬಹುದು. ಅದಾಗ್ಯೂ ಅಂಥ ಅಚ್ಚರಿಯನ್ನು ಸಾಧ್ಯವಾಗಿಸುವುದಾಗಿ ಎಲಾನ್ ಮಸ್ಕ್​ ಹೇಳಿದ್ದಾರೆ.

    ನಿಮಗೆ ಬ್ಯಾಂಕ್ ಖಾತೆಯೇ ಬೇಕಾಗಿಲ್ಲ, ಎಕ್ಸ್ ಖಾತೆಯೊಂದಿದ್ದರೆ ಸಾಕು, ಎಲ್ಲ ರೀತಿಯ ಹಣ ಪಾವತಿ-ಸ್ವೀಕೃತಿ ಸಾಧ್ಯವಾಗಲಿದೆ. ಅಂಥ ಒಂದು ವ್ಯವಸ್ಥೆಯನ್ನು 2024ರ ವರ್ಷಾಂತ್ಯದ ಸುಮಾರಿಗೆ ಜಾರಿಗೆ ತರಲಿರುವುದಾಗಿ ಹೇಳಿರುವ ಎಲಾನ್ ಮಸ್ಕ್​, ಅಷ್ಟರೊಳಗೆ ಅಂಥ ವ್ಯವಸ್ಥೆ ಜಾರಿ ಮಾಡಲು ಆಗದಿದ್ದರೆ ನಾನು ನಿಮಗೆ ತಲೆಬಾಗುವುದಾಗಿಯೂ ಹೇಳಿದ್ದಾರೆ.

    ಇದನ್ನೂ ಓದಿ: ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?

    ಸೋಷಿಯಲ್ ಮೀಡಿಯಾ ಆ್ಯಪ್ ಎಕ್ಸ್​ನ ಮಾಲೀಕ ಎಲಾನ್ ಮಸ್ಕ್​ ಮೀಟಿಂಗ್​​ವೊಂದರಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್​ನಿಂದಾಗಿ ಈ ವಿಷಯ ಬಹಿರಂಗಗೊಂಡಿದೆ. ಅಷ್ಟಕ್ಕೂ ಎಕ್ಸ್ ಮೂಲಕ ಹಣಕಾಸು ವಹಿವಾಟು ಎಂದರೆ ಬರೀ ಹಣ ಸ್ವೀಕೃತಿ-ಪಾವತಿ ಮಾತ್ರವಷ್ಟೇ ಅಲ್ಲ ಎಂದೂ ಅವರು ಹೇಳಿದ್ದಾರೆ.

    ಎಕ್ಸ್​ನ ಪೇಮೆಂಟ್ ಎಂದರೆ ವ್ಯಕ್ತಿಯೊಬ್ಬರ ಇಡೀ ಹಣಕಾಸು ಜೀವನವೇ ಆಗಿರುತ್ತದೆ. ಯಾವುದೇ ಸಂಗತಿ ಹಣದ ವಹಿವಾಟನ್ನು ಒಳಗೊಂಡಿರುತ್ತದೆ ಎಂದರೆ ಅದು ನಮ್ಮ ಪ್ಲ್ಯಾಟ್​ಫಾರ್ಮ್​ನಲ್ಲೂ ಸಾಧ್ಯವಾಗಲಿದೆ. ಅದು ಹಣ, ಭದ್ರತೆ ಏನೇ ಆಗಲಿ, ಎಲ್ಲವೂ ಸಾಧ್ಯವಾಗಲಿದೆ. ಎಕ್ಸ್​ ಪೇಮೆಂಟ್ ಎಂದರೆ ಬರೀ ಹಣ ಸ್ವೀಕೃತಿ ಪಾವತಿಯಷ್ಟೇ ಅಲ್ಲ, ಅದು ಬ್ಯಾಂಕ್ ಖಾತೆಯೇ ಇರದೆ ವ್ಯವಹರಿಸುವ ವ್ಯವಸ್ಥೆ ಎಂದಿದ್ದಾರೆ ಮಸ್ಕ್.

    ಇದನ್ನೂ ಓದಿ: ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ ‘ರಜಿನಿಕಾಂತ್’!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ‌

    ಈ ರೀತಿ ವ್ಯವಸ್ಥೆಯ ರೋಡ್​ಮ್ಯಾಪ್​ ನಾನು ಮತ್ತು ಡೇವಿಡ್​ ಸ್ಯಾಕ್ಸ್ 2000ನೇ ಇಸವಿಯ ಜುಲೈನಲ್ಲೇ ಯೋಜಿಸಿದ್ದೆವು ಎಂಬುದಾಗಿ ಮಸ್ಕ್ ಹೇಳಿರುವ ಸಂಗತಿ ಈ ಆಡಿಯೋದಲ್ಲಿ ದಾಖಲಾಗಿದೆ. ಹಣದ ವಹಿವಾಟು ಮಾತ್ರವಲ್ಲ, ಎಕ್ಸ್​ನಲ್ಲಿ ಎಲ್ಲವೂ ಸಾಧ್ಯ ಎಂಬಂಥ ಆ್ಯಪ್​ ಆಗಿ ರೂಪಿಸುವ ಗುರಿ ಹೊಂದಿರುವುದನ್ನೂ ಪುನರುಚ್ಚರಿಸಿದ್ದಾರೆ.

    ಬದುಕಿದ್ದಾರೋ ಇಲ್ವೋ ಗೊತ್ತಿಲ್ಲ, ಆದ್ರೂ ಜನ್ಮದಿನದ ಶುಭಾಶಯ!

    ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts