More

    ಲೋಕಸಭಾ ಚುನಾವಣೆಗೂ ಮುನ್ನವೇ 4650 ಕೋಟಿ ರೂ. ಸೀಜ್​! 75 ವರ್ಷದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ

    ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ದೇಶದಲ್ಲಿ ಮತದಾನ ಇನ್ನೂ ಆರಂಭವಾಗಿಲ್ಲ, ಅಷ್ಟರಲ್ಲೇ ಭರ್ಜರಿ ಬೇಟೆಯಾಡಿರುವ ಚುನಾವಣಾಧಿಕಾರಿಗಳು ಈವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್​ ಹಾಗೂ ಉಚಿತ ಉಡುಗೊರೆ ಸೇರಿದಂತೆ 4,650 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ (ಏಪ್ರಿಲ್​ 15) ತಿಳಿಸಿದೆ.

    ವಶಕ್ಕೆ ಪಡೆಯಲಾದ ಹಣವು 75 ವರ್ಷಗಳ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವೆಂದು ಆಯೋಗ ಹೇಳಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 3475 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು. ನಗದು, ಮದ್ಯ, ಡ್ರಗ್ಸ್​, ಬೆಲೆಬಾಳುವ ಲೋಹಗಳು ಮತ್ತು ಹಲವಾರು ಇತರ ಉಚಿತಗಳನ್ನು ಒಳಗೊಂಡಂತೆ ಮತದಾರರನ್ನು ಸೆಳೆಯುವ ವಿವಿಧ ವಸ್ತುಗಳು ಆಯೋಗವು ವಶಪಡಿಸಿಕೊಂಡ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಡ್ರಗ್ಸ್​ ಮತ್ತು ಮಾದಕವಸ್ತುಗಳು ಶೇ. 45 ರಷ್ಟಿದೆ.

    ಸಮಗ್ರ ಯೋಜನೆ, ಸ್ಕೇಲ್ ಅಪ್ ಸಹಯೋಗ ಮತ್ತು ಏಜೆನ್ಸಿಗಳಿಂದ ಏಕೀಕೃತ ತಡೆ ಕ್ರಮ, ನಾಗರಿಕರ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನದ ಸೂಕ್ತ ತೊಡಗಿಸಿಕೊಳ್ಳುವಿಕೆಯಿಂದ ಇಷ್ಟೊಂದು ಹಣವನ್ನು ಸೀಜ್​ ಮಾಡಲು ಸಾಧ್ಯವಾಯಿತು ಎಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ಮಾರ್ಚ್ 1 ರಿಂದ ಆರಂಭವಾದ ತಪಾಸಣೆಯಲ್ಲಿ ಚುನಾವಣ ಅಧಿಕಾರಿಗಳು ಪ್ರತಿದಿನ 100 ಕೋಟಿ ರೂ.ನಷ್ಟು ಹಣವನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

    ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಕಠಿಣ ಕ್ರಮವನ್ನು ಕಾಯ್ದುಕೊಳ್ಳುವ ತನ್ನ ಬದ್ಧತೆಯನ್ನು ಚುನಾವಣಾ ಆಯೋಗ ಪುನರುಚ್ಚರಿಸಿದೆ. ಪ್ರಚೋದನೆಗಳನ್ನು ನಿಗ್ರಹಿಸಲು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಸಮಗ್ರತೆಯನ್ನು ಎತ್ತಿಹಿಡಿಯಲು ಕಠಿಣವಾದ ಮೇಲ್ವಿಚಾರಣೆ, ತಪಾಸಣೆಗೆ ಆದ್ಯತೆ ನೀಡಲಾಗಿದೆ ಎಂದು ಆಯೋಗ ಹೇಳಿದೆ.

    ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ, ಫ್ಲೈಯಿಂಗ್ ಸ್ಕ್ವಾಡ್‌ಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 46.59 ಕೋಟಿ ರೂ. ನಗದು, 151 ಕೋಟಿ ರೂ. ಮೌಲ್ಯದ ಮದ್ಯದ ಬಾಟಲಿಗಳು, ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 9.93 ಕೋಟಿ ಮೌಲ್ಯದ ವಸ್ತುಗಳು, 56.86 ಕೋಟಿ ಮೌಲ್ಯದ ಚಿನ್ನ ಮತ್ತು 7.73 ಕೋಟಿ ರೂ. ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್​)

    ಹೆಂಡ್ತಿ ಎಚ್ಚರಿಕೆಗೂ ಬಗ್ಗದ ರವೀಂದರ್​! ಮದ್ವೆಯಾದ 2 ವರ್ಷದಲ್ಲಿ ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ?

    ಅಮಲು ಪದಾರ್ಥವಾಗಿ ಹಾವಿನ ವಿಷ ಪೂರೈಕೆ ಪ್ರಕರಣ; ಜೈಲಿನಿಂದ ಬರ್ತಿದ್ದಂತೆ 3 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿ ಬಿಗ್​ಬಾಸ್​ ವಿನ್ನರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts