More

    ಬದುಕಿದ್ದಾರೋ ಇಲ್ವೋ ಗೊತ್ತಿಲ್ಲ, ಆದ್ರೂ ಜನ್ಮದಿನದ ಶುಭಾಶಯ!

    ನವದೆಹಲಿ: ಇಸ್ರೇಲ್​ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ 19 ದಿನಗಳು ಕಳೆದಿದ್ದರೂ ಇನ್ನೂ ಅಲ್ಲಿನ ರಣಭೀಕರ ಪರಿಸ್ಥಿತಿ ಸಂಪೂರ್ಣ ತಿಳಿಯಾಗಿಲ್ಲ. ಅದೆಷ್ಟೋ ಮಂದಿ ಎಲ್ಲಿ ಹೇಗಿದ್ದಾರೆ ಎನ್ನುವುದೇ ಗೊತ್ತಿಲ್ಲ. ಕೆಲವರು ಬದುಕಿದ್ದಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ.

    ಅದಾಗ್ಯೂ ಇಂಥದ್ದೇ ಒಂದು ಪರಿಸ್ಥಿತಿಯ ನಡುವೆ ಬಾಲಕನೊಬ್ಬನ ಜನ್ಮದಿನ ಬಂದಿದ್ದು, ಆತನಿಗೆ ಜನ್ಮದಿನದ ಶುಭಾಶಯ ಕೋರಲಾಗಿದೆ. 12ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎರೆಜ್ ಕಲ್ಡರಾನ್ ಎಂಬ ಬಾಲಕನಿಗೆ ಇಸ್ರೇಲ್​ನ ಅಧಿಕೃತ ಎಕ್ಸ್ ಖಾತೆಯಿಂದ ಜನ್ಮದಿನದ ಶುಭಾಶಯ ಕೋರಲಾಗಿದೆ.

    ಎರೆಜ್ ಹಾಗೂ ಆತನ ಸಹೋದರಿ ಮತ್ತು ತಂದೆಯನ್ನು ಹಮಾಸ್ ಉಗ್ರರು ಕರೆದೊಯ್ದಿದ್ದು, ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಈತನಿಗೆ ಜನ್ಮದಿನದ ಶುಭಾಶಯ ಕೋರಿರುವ ಇಸ್ರೇಲ್, ನೀವು ನಮ್ಮೊಂದಿಗೆ ಶುಭಾಶಯ ಕೋರಿ, ಹೇಗಾದರೂ ಈ ಸಂದೇಶ ಆತನಿಗೆ ತಲುಪುತ್ತದೆ ಎಂದು ಭಾವಿಸೋಣ ಎಂದು ಹೇಳಿದೆ.

    ಆದರೆ ಅವರೆಲ್ಲರೂ ಬದುಕಿದ್ದಾರೋ ಇಲ್ಲವೋ ಎಂಬ ಕುರಿತು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಎಲ್ಲವೂ ಒಳ್ಳೆಯದೇ ಆಗಲಿ, ಬೇಗ ಮನೆಗೆ ಮರಳುವಂತಾಗಲಿ ಎಂಬ ಹಾರೈಕೆಯೊಂದಿಗೆ ಎರೆಜ್​ಗೆ ಹಲವರು ಜನ್ಮದಿನದ ಶುಭಾಶಯ ಕೋರಿದ್ದಾರೆ.

    ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?

    ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts