More

    ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯ

    ಸಿಂಧನೂರು: ದೇಶದಲ್ಲಿ ದುಡಿಯುವ ಕೈಗಳಿಗಿಂತ ಕುಂತು ಉಣ್ಣುವ ಕೈಗಳೇ ಜಾಸ್ತಿ ಇರುವುದು ದುರಂತದ ಸಂಗತಿ ಎಂದು ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಹೇಳಿದರು.

    ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಪ್ಲೇಸ್‌ಮೆಂಟ್ ಸೆಲ್ ಹಾಗೂ ಇಂಟರ್ ನ್ಯಾಷನಲ್ ಕ್ವಾಲಿಟಿ ಅಷ್ಯೂರೆನ್ಸ್ ಸೆಲ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ಶಿಕ್ಷಣದಲ್ಲಿ ಬದಲಾವಣೆ ತರುವುದು ಅವಶ್ಯಕ: ಮೈಸೂರು ವಿವಿ ಶಿಕ್ಷಣ ಮಂಡಳಿ ಅಧ್ಯಕ್ಷೆ ಡಾ.ಎಂ.ಪುಷ್ಪಾ ಅಭಿಮತ

    ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಪದವಿ ಮುಗಿಸಿದರೆ ಸಾಲದು, ಮನೆ ಬಾಗಿಲಿಗೆ ಉದ್ಯೋಗ ಹುಡುಕಿಕೊಂಡು ಬರವಂತೆ ಶಿಕ್ಷಣ ಪಡೆಯಬೇಕಾಗಿದೆ. ಶ್ರಮಿಕ ವರ್ಗದಿಂದಲೇ ದೇಶದ ಪ್ರಗತಿ ಅಳೆಯಲಾಗುತ್ತಿದೆ. ಇತ್ತೀಚಿಗೆ ಯುವಕರು ದುಡಿಯುವತ್ತ ಹೆಜ್ಜೆ ಇಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

    ಯುವಸಮೂಹ ದೊಡ್ಡ ಮಟ್ಟದ ಸಾಧನೆ ಮಾಡುವತ್ತ ಯೋಚನೆ ಮಾಡಬೇಕು. ಅದಾನಿ, ಅಂಬಾನಿ ಅವರನ್ನು ಶ್ರೀಮಂತರಾದ ಮೇಲೆ ನಾವೆಲ್ಲರೂ ಟೀಕೆ ಮಾಡುತ್ತೇವೆ. ಆದರೆ, ಅವರ ಬೆಳವಣೆಗೆ ಬಗ್ಗೆ ಮಾತನಾಡುವುದಿಲ್ಲ. ಈ ಸರ್ಕಾರಿ ಮಹಾವಿದ್ಯಾಲಯದಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

    ಪ್ರಾಚಾರ್ಯ ಪ್ರಹ್ಲಾದರೆಡ್ಡಿ, ಗೋಪಾಲಕೃಷ್ಣ ಇಆರ್, ಶಿವಯ್ಯ ಮುಪ್ಪಯ್ಯನಮಠ, ಎಂ.ವೆಂಕಟನಾರಾಯಣ, ಹನುಮನಗೌಡ, ಸೈಯ್ಯದ್ ಅಜಗರ್ ಹುಸೇನ್, ಬಸವರಾಜ ತಡಕಲ್, ಮಹ್ಮದ್ ಸಿದ್ದಿಕಿ, ವೈಜನಾಥ ಸಗರಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts