More

    ಸುಂದರ ಬದುಕಿಗೆ ಯೋಗ-ಧ್ಯಾನ ಅಗತ್ಯ

    ಸಿಂಧನೂರು: ಎಷ್ಟೇ ಶ್ರೀಮಂತರಾದರೂ ಜ್ಞಾನ, ವಿವೇಕ, ಸಮಾಜದ ಬಗ್ಗೆ ಕಳಕಳಿ, ವ್ಯವಹಾರ ಜ್ಞಾನ ಇಲ್ಲದಿದ್ದರೆ ಜೀವನ ಪರಿಪೂರ್ಣ ಆಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ಯೋಗಗುರು ಹರ್ಷಾನಂದ ಹೇಳಿದರು.

    ನಗರದ ಬಪ್ಪೂರು ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಿವೇಕ ಪೂರ್ಣಿಮೆ ಮಾಸಿಕ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಬದುಕು ಸುಂದರವಾಗಲು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಯೋಗ, ಧ್ಯಾನ ಹಾಗೂ ಸತ್ಸಂಗದ ಬಗ್ಗೆ ಗಮನಹರಿಸುವಂತೆ ತಿಳಿಸಬೇಕೆಂದರು.

    ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆಯಲು ಹಾಗೂ ಮೊಬೈಲ್ ಗೀಳಿನಿಂದ ಹೊರತರಲು ನೀತಿ ಕಥೆಗಳನ್ನು ಹೇಳಬೇಕು. ಇತ್ತೀಚಿಗೆ ನಡೆಯುತ್ತಿರುವ ಹಲ್ಲೆ, ಅತ್ಯಾಚಾರ, ಕೊಲೆ ಪ್ರಕರಣಗಳು ಸಮಾಜದ ನೆಮ್ಮದಿ ಹಾಳು ಮಾಡಿವೆ. ಎಷ್ಟೇ ವಿದ್ಯಾವಂತರಾದರೂ, ಪದವಿಗಳನ್ನು ಪಡೆದರೂ ನೈತಿಕತೆ, ಮಾನವೀಯತೆ ಇಲ್ಲದಿದ್ದರೆ ಆ ಪದವಿಗಳಿಗೆ ಅರ್ಥವಿಲ್ಲವೆಂದರು.

    ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಶ್ರಮಕ್ಕೆ ಎಲ್ಲರ ಸಹಕಾರ, ಸಹಾಯ ಅಗತ್ಯವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts