More

    ಅಗಲಿದ ಮಗನ ನೆನಪಲ್ಲೇ 600ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದ ತಂದೆ!

    ಮುಂಬೈ: ಪುತ್ರನನ್ನು ಕಳೆದುಕೊಂಡ ಶೋಕ ನಿರಂತರ ಎಂಬ ಮಾತಿದೆ. ಅಂಥದ್ದೇ ಒಂದು ಶೋಕವನ್ನು ಇಲ್ಲೊಬ್ಬರು ತಂದೆ ಅನುಭವಿಸುತ್ತಿದ್ದು, ಅಗಲಿದ ಮಗನ ನೆನಪಲ್ಲೇ 600ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ.

    ಮುಂಬೈನ ದಾದಾರಾವ್ ಎಂಬ ವ್ಯಕ್ತಿ ಹೀಗೆ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಮಗನ ಅಗಲಿಕೆ ನೋವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ 16 ವರ್ಷದ ಪುತ್ರ ಪ್ರಕಾಶ್ ಬಿಲ್ಹೋರ್ ಎಂಬಾತ 2015ರ ಜುಲೈನಲ್ಲಿ ಬೈಕ್​ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದ.

    ಕಸಿನ್ ಜತೆ ಮುಂಬೈನ ರಸ್ತೆಯಲ್ಲಿ ಹಿಂಬದಿ ಸವಾರನಾಗಿ ಈತ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದಾಗ, ನೀರು ತುಂಬಿದ್ದ ರಸ್ತೆಗುಂಡಿಗಿಳಿದ ಬೈಕ್ ಅಪಘಾತಕ್ಕೀಡಾಗಿ ಇಬ್ಬರೂ ಒಮ್ಮೆ ಮೇಲಕ್ಕೆ ಚಿಮ್ಮಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದ್ದರಿಂದ ಗಂಭೀರವಾಗಿ ಗಾಯಗೊಂಡ ಪ್ರಕಾಶ್ ಬ್ರೇನ್ ಡ್ಯಾಮೇಜ್​ಗೆ ಒಳಗಾಗಿ ಸಾವಿಗೀಡಾಗಿದ್ದ. ಹೆಲ್ಮೆಟ್ ಧರಿಸಿದ್ದ ಕಸಿನ್ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿ ಬಳಿಕ ಚೇತರಿಸಿಕೊಂಡಿದ್ದ.

    ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​: ಭಾರತ-ಪಾಕಿಸ್ತಾನ ಸೆಮಿಫೈನಲ್ ಫಿಕ್ಸಾ?

    ಈ ಪ್ರಕರಣದಿಂದ ತೀವ್ರ ಮನನೊಂದ ದಾದಾರಾವ್, ತಮ್ಮ ಪುತ್ರನ ಅಗಲಿಕೆಯ ನೋವಿನಿಂದ ಹೊರಬರುವ ಸಲುವಾಗಿ ಮುಂಬೈನ ರಸ್ತೆಗುಂಡಿಗಳನ್ನು ಮುಚ್ಚಲು ಆರಂಭಿಸಿದರು. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶಗಳಲ್ಲಿನ ತ್ಯಾಜ್ಯಗಳನ್ನು ಸಂಗ್ರಹಿಸಿ, ಇದುವರೆಗೆ ಸುಮಾರು 600 ಗುಂಡಿಗಳನ್ನು ಇವರು ಮುಚ್ಚಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಪುತ್ರನ ಅಗಲಿಕೆ ತಮ್ಮನ್ನು ತೀವ್ರವಾಗಿ ಕಾಡಿದೆ. ಆತನ ನೆನಪಲ್ಲಿ ಹಾಗೂ ಆತನ ಆತ್ಮಕ್ಕೆ ಗೌರವ ಸಲ್ಲಿಸಲು ತಾವು ಈ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾ ಆ್ಯಪ್​ನಲ್ಲಿ ಮಾಡಲಾಗಿರುವ ಪೋಸ್ಟ್​ವೊಂದನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ‘ಒಳಿತು ಮಾಡು ಮನುಸಾ’ ಎಂಬ ಕ್ಯಾಪ್ಷನ್​ನೊಂದಿಗೆ ರಿ-ಪೋಸ್ಟ್ ಮಾಡಿಕೊಂಡಿದ್ದಾರೆ.

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಚಿರತೆಯನ್ನೇ ಎದುರಿಸಿ ಏಳು ವರ್ಷದ ಮಗಳನ್ನು ರಕ್ಷಿಸಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts