More

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆದಾರರು ಆಗಾಗ ಏನಾದರೂ ಒಂದು ಸಮಸ್ಯೆಗೆ ಒಳಗಾಗುವುದು ಸಹಜ. ಹಾಗೇ ಫೇಸ್​ಬುಕ್​ನಲ್ಲೀಗ ‘ಬ್ಯಾಕ್​ ಪೇನ್​’ ಕಾಣಿಸಿಕೊಂಡಿದೆ. ಅರ್ಥಾತ್​, ಫೇಸ್​ಬುಕ್​ನಲ್ಲಿ ಬ್ಯಾಕ್ ಬಟನ್ ಕೆಲಸ ಮಾಡದ್ದರಿಂದ ಬಳಕೆದಾರರು ನೋವು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಕೆಲವರು ವಿಶೇಷ ಬೇಡಿಕೆಯನ್ನೂ ಸಲ್ಲಿಸಿದ್ದಾರೆ.

    ಸೋಷಿಯಲ್ ಮೀಡಿಯಾ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್​ಬುಕ್​ನಲ್ಲಿ ಯಾವುದಾದರೂ ಒಂದು ಪೋಸ್ಟ್​​ ನೋಡಲು ಕ್ಲಿಕ್ ಮಾಡಿದ ನಂತರ ಪುನಃ ಟೈಮ್​ಲೈನ್​ಗೆ ಮರಳಲು ಫೋನ್​ನಲ್ಲಿನ ಬ್ಯಾಕ್​ ಬಟನ್ ಒತ್ತಿದರೆ ಸಾಕು. ಆದರೆ ಕಳೆದ ಕೆಲವು ದಿನಗಳಿಂದ ಫೇಸ್​ಬುಕ್ ಬಳಕೆದಾರರು ಬ್ಯಾಕ್​ ಬಟನ್ ಅದುಮಿದರೂ ಅದು ಕೆಲಸ ಮಾಡದಂತಾಗಿದೆ.

    ಇದನ್ನೂ ಓದಿ: 10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

    ಬಹಳಷ್ಟು ಮಂದಿ ತಮ್ಮ ಫೋನ್​ನಲ್ಲೇ ಏನೋ ಸಮಸ್ಯೆ ಆಗಿದೆ ಎಂದು ರಿಸ್ಟಾರ್ಟ್ ಇತ್ಯಾದಿ ಮಾಡಿ ತಲೆಕೆಡಿಸಿಕೊಂಡಿದ್ದರು. ಆದರೆ ಇದು ಫೋನ್​ ಸಮಸ್ಯೆ ಅಲ್ಲ ಎಂಬುದು ಬಳಿಕ ಖಚಿತಗೊಂಡಿದೆ. ಫೇಸ್​ಬುಕ್​ ಆ್ಯಪ್​ನಲ್ಲಿ ಮಾತ್ರ ಮಾಮೂಲಿ ಆಗಿರುವ ಕೆಳಗಿನ ಬ್ಯಾಕ್ ಬಟನ್ ವರ್ಕ್ ಆಗುತ್ತಿಲ್ಲ. ಆದರೆ ಮೇಲಿರುವ ಬ್ಯಾಕ್ ಬಟನ್ ಒತ್ತಿದರೆ ಟೈಮ್​ಲೈನ್​ಗೆ ಮರಳಲು ಸಾಧ್ಯವಾಗುತ್ತಿದೆ. ಈ ಸಮಸ್ಯೆ ಬೇರೆ ಆ್ಯಪ್​ಗಳ ಬಳಕೆ ವೇಳೆ ಕಂಡುಬಂದಿಲ್ಲ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಈ ಬಗ್ಗೆ ಹಲವಾರು ಬಳಕೆದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊದಲಿದ್ದಂತೆ ನಮಗೆ ಬಾಟಮ್​ನಲ್ಲಿ ಇರುವ ಬ್ಯಾಕ್​ ಬಟನ್ ಬೇಕು, ಬ್ಯಾಕ್ ಬಟನ್ ಮೇಲಿರುವುದು ಬೇಡ ಎಂದು ಆಗ್ರಹಿಸಿದ್ದಾರೆ. ಅದಾಗ್ಯೂ ಈ ಸಮಸ್ಯೆ ಯಾಕಾಯಿತು, ಏನು ಎಂದು ಫೇಸ್​ಬುಕ್​ ಅಥವಾ ಅದರ ಮಾತೃಸಂಸ್ಥೆ ಮೆಟಾದಿಂದ ಯಾವುದೇ ಮಾಹಿತಿ ಅಪ್​ಡೇಟ್ ಆಗಿಲ್ಲ.

    ಚಿರತೆಯನ್ನೇ ಎದುರಿಸಿ ಏಳು ವರ್ಷದ ಮಗಳನ್ನು ರಕ್ಷಿಸಿದ ತಂದೆ!

    ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts