More

    ಏಕಕಾಲದಲ್ಲಿ ಫೇಸ್​ಬುಕ್, ಇನ್​ಸ್ಟಾಗ್ರಾಂ ಸರ್ವರ್​ ಡೌನ್

    ನವದೆಹಲಿ: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರಿಗೆ ಆ್ಯಂಡ್ರಾಯ್ಡ್​​, ಐಒಎಸ್​ ಹಾಗೂ ಪಿಸಿಯಲ್ಲಿ ಬಳಸಲು ಸಮಸ್ಯೆ ಎದುರಾಗಿದೆ.

    ಜಗತ್ತಿನಾದ್ಯಂತ ರಾತ್ರಿ 9:00 ಗಂಟೆ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಎಕ್ಸ್​ (ಈ ಹಿಂದೆ ಟ್ವಿಟರ್​)ನಲ್ಲಿ #Zuckerberg, #facebookDown, #InstagramDown ಎಂಬ ಹ್ಯಾಶ್​​ಟ್ಯಾಗ್ ಟ್ರೆಂಡ್​ ಆಗುತ್ತಿದೆ.

    ಜಗತಿನಾದ್ಯಂತ ಸುಮಾರು 200ಕೋಟಿಗೂ ಅಧಿಕ ಫೇಸ್​ಬುಕ್​ ಬಳಕೆದಾರರಿದ್ದು, ಇಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಆ್ಯಪ್​ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ. ಏಕಾಏಕಿ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. 

    ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್​ವರ್ಡ್​ ಮರೆತವರು ಮತ್ತು ಬೇರೆಯವರ ಕಡೆಯಿಂದ ಫೇಸ್ಬುಕ್ ಖಾತೆ ಸೃಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts