More

    ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಶಹಬಾಜ್ ನದೀಮ್

    ನವದೆಹಲಿ: ಟೀಮ್​ ಇಂಡಿಯಾದ ಅಟಗಾರ ಶಹಬಾಜ್​ ಷರೀಪ್​ ಮಂಗಳವಾರ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಎರಡು ದಶಕಗಳ ಕ್ರಿಕೆಟ್​ ಜೀವನಕ್ಕೆ ಅವರು ವಿದಾಯ ಹೇಳಲಿದ್ದಾರೆ.

    ಜಾರ್ಖಂಡ್​ ಪರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 500ಕ್ಕೂ ಹೆಚ್ಚು ವಿಕೆಟ್​ಗಳನ್ನು ಪಡೆದಿರುವ ಶಹಬಾಜ್​ ನದೀಮ್​ 2004 ರಲ್ಲಿ ಕೇರಳ ವಿರುದ್ಧದ ಪ್ರಥಮ ದರ್ಜೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಟೀಮ್​ ಇಂಡಿಯಾ ಪರ ಎರಡು ಟೆಸ್ಟ್​ ಪಂದ್ಯಗಳನ್ನು ಆಡಿರುವ ನದೀಮ್​ 2019ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2021ರಲ್ಲಿ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ಗಳಲ್ಲಿ ತಂಡವನ್ನು ಪ್ರತಿನಿಧಿಸಿಜದ್ದಾರೆ.

    ಇದನ್ನೂ ಓದಿ: ಕರಿಮಣಿ ಮಾಲೀಕ ಯಾರೆಂದು ರಿವೀಲ್​ ಮಾಡಿದ ದೀಪಿಕಾ ದಾಸ್; ಸೀಕ್ರೆಟ್​ ಮದುವೆಗೆ ಕಾರಣ ಹೀಗಿದೆ

    ಐಪಿಎಲ್​ನಲ್ಲಿ 72 ಪಂದ್ಯಗಳನ್ನು ಆಡಿರುವ ನದೀಮ್ ಡೆಲ್ಲಿ ಕ್ಯಾಪಿಟಲ್ಸ್​, ಸನ್​ರೈಸರ್ಸ್​ ಹೈದರಾಬಾದ್, ಲಖನೌ ಸೂಪರ್​ಜೈಂಟ್ಸ್​ ಪರ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಜಾರ್ಖಂಡ್​ ಪರ ಪ್ರಮುಖ ವಿಕೆಟ್​ ಟೇಕರ್​ ಎನ್ನಿಸಿಕೊಂಡಿರುವ ನದೀಮ್ ರಣಜಿ ಹಾಗೂ ವಿಜಯ್​ ಹಜಾರೆ ಟ್ರೋಫಿಯಲ್ಲಿನ ಪ್ರದರ್ಶನದಿಂದಾಗಿ ಇತಿಹಾಸ ರಚಿಸಿದ್ದಾರೆ.

    ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 140 ಪಂದ್ಯಗಳನ್ನು ಆಡಿರುವ ಶಹಬಾಜ್​ 28.86ರ ಸರಾಸರಿಯಲ್ಲಿ 542 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಟಿ-20 ಕ್ರಿಕೆಟ್​ನಲ್ಲಿ 125 ವಿಕೆಟ್​ಗಳನ್ನು ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts