More

    ಕರಿಮಣಿ ಮಾಲೀಕ ಯಾರೆಂದು ರಿವೀಲ್​ ಮಾಡಿದ ದೀಪಿಕಾ ದಾಸ್; ಸೀಕ್ರೆಟ್​ ಮದುವೆಗೆ ಕಾರಣ ಹೀಗಿದೆ

    ಬೆಂಗಳೂರು: ನಾಗಿಣಿ, ಬಿಗ್​ಬಾಸ್​ ಸೀಸನ್​ 7 ಹಾಗೂ 9ರ ಮೂಲಕ ಮನೆ ಮಾತಾಗಿರುವ ನಟಿ ದೀಪಿಕಾ ದಾಸ್​ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ಧಾರೆ. ಶುಕ್ರವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ದೀಪಿಕಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ಧಾರೆ.

    ನಟಿಯ ದಿಢೀರ್ ಮದುವೆ ಫೋಟೋಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ ಎಂದು ಕನ್​​ಫ್ಯೂಸ್ ಆಗಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ದೀಪಿಕಾ ದಾಸ್​ ಕರಿಮಣಿ ಮಾಲೀಕ ಯಾರೆಂದು ರಿವೀಲ್​ ಮಾಡಿದ್ದಾರೆ. ಈ ಮೂಲಕ ನಟಿ ದೀಪಿಕಾ ದಾಸ್​ ಮದುವೆಯಾಗಿರುವುದು ಖಚಿತವಾಗಿದೆ. 

    ದೀಪಿಕಾ ದಾಸ್ ಮಾರ್ಚ್​​ 01ರಂದು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ವೀಟ್ ಶಾಕ್ ನೀಡಿದ್ರು. ಅಷ್ಟೇ ಅಲ್ಲದೇ ಕಮೆಂಟ್ ಬಾಕ್ಸ್ ಆಫ್​ ಮಾಡಿ ಕುತೂಹಲ ಕೆರಳಿಸಿದ್ದರು. ದೀಪಿಕಾ ದಾಸ್ ಮಾರ್ಚ್​ 01ರಂದು ದೀಪಕ್ ಅವರ ಬಾಳ ಸಂಗಾತಿಯಾಗಿ ಹೊಸ ಜೀವನ ಶುರು ಮಾಡಿದ್ದಾರೆ. ಮನಗೆದ್ದವನ ಜೊತೆ ದೀಪಿಕಾ ದಾಸ್ ಸಪ್ತಪದಿ ತುಳಿದಿದ್ದಾರೆ.

    Deepika Deepak

    ಇದನ್ನೂ ಓದಿ: ಪಾಕ್​ ಪರ ಘೋಷಣೆ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​; FSL ವರದಿಯಲ್ಲಿ ಸತ್ಯ ಬಹಿರಂಗ

    ದೀಪಿಕಾ ದಾಸ್​ ತಾನು ಮದುವೆಯಾದ ಹುಡುಗ ಯಾರು ಎನ್ನುವ ವಿಚಾರವನ್ನು ತಿಳಿಸಿಲ್ಲ. ಗಂಡನ ಹೆಸರನ್ನು ಮಾತ್ರ ದೀಪಿಕಾ ದಾಸ್​ ರಿವೀಲ್ ಮಾಡಿದ್ದಾರೆ. ದೀಪಿಕಾ ಕೈ ಹಿಡಿದ ಹುಡುಗನ ಹೆಸರು ದೀಪಕ್​. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್​ ಎಂಬುವವರನ್ನು ದೀಪಿಕಾ ದಾಸ್​ ಮದುವೆ ಆಗಿದ್ದಾರೆ. ದೀಪಿಕಾ ದಾಸ್​ ಹೆಚ್ಚಾಗಿ ದುಬೈಗೆ ಹೋಗ್ತಿದ್ರು. ಆಗಾಗ ಇನ್ಸ್ಟಾದಲ್ಲೂ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ದುಬೈನಲ್ಲಿರುವ ಹುಡುಗನ  ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಗೋವಾದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ವಧು ಹಾಗೂ ವರನ ಕುಟುಂಬಸ್ಥರು ಹಾಜರಿದ್ದರು ಎಂದು ತಿಳಿದು ಬಂದಿದೆ. ಫೋಟೋ ನೋಡಿದ ಫ್ಯಾನ್ಸ್​ ದೀಪಿಕಾ ದಾಸ್ ಹಾಗೂ ದೀಪಕ್​ಗೆ ಶುಭ ಕೋರಿದ್ದಾರೆ. ದೀಪಿಕಾ ದಾಸ್ ತಮ್ಮ ಮದುವೆ ಯಾವುದೇ ಸೆಲೆಬ್ರಿಟಿ ಹಾಗೂ ಸಿನಿ ಸ್ನೇಹಿತರನ್ನು ಆಹ್ವಾನಿಸಿದಂತೆ ಕಾಣುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts