More

  ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್

  ಬೆಂಗಳೂರು: ನಾಗಿಣಿ, ಬಿಗ್​ಬಾಸ್​ ಸೀಸನ್​ 7 ಹಾಗೂ 9ರ ಮೂಲಕ ಮನೆ ಮಾತಾಗಿರುವ ನಟಿ ದೀಪಿಕಾ ದಾಸ್​ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ಧಾರೆ. ಶುಕ್ರವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ದೀಪಿಕಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

  ನಟಿಯ ದಿಢೀರ್ ಮದುವೆ ಫೋಟೋಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ ಎಂದು ಕನ್​​ಫ್ಯೂಸ್ ಆಗಿದ್ದಾರೆ. ಆದರೆ ಪೋಸ್ಟ್ ನೋಡಿದರೆ ರಿಯಲ್ ಮದುವೆಯಂತಿದೆ. ಮೂರು ಫೋಟೋಸ್ ಶೇರ್ ಮಾಡಿದ ದೀಪಿಕಾ ದಾಸ್ ಅವರು ಮಿಸ್ಟರ್ & ಮಿಸಸ್ ಡಿ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಮದುವೆ ಆಯ್ತಾ ಎಂದು ಕೇಳುತ್ತಿದ್ದಾರೆ.

  Deepika Das

  ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ಇತಿಹಾಸ ರಚಿಸಲು ಸಜ್ಜಾದ ಟೀಮ್ ಇಂಡಿಯಾ; ಏನದು?

  ಸುದ್ದಿ ಮೂಲಗಳ ಪ್ರಕಾರ ನಟಿ ದೀಪಿಕಾ ದಾಸ್ ದುಬೈನಲ್ಲಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ಗೋವಾದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ವಧು ವರರ ಕುಟುಂಬಸ್ಥರು ಮಾತ್ರ ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆಯನ್ನು ಉಟ್ಟಿದ್ದರು. ಆಕರ್ಷಕವಾದ ವರಮಾಲೆ ಧರಿಸಿ ಸುಂದರವಾಗಿ ವಧುವಾಗಿ ಕಂಗೊಳಿಸಿದ್ದಾರೆ. ವರನ ಕೈ ಹಿಡಿದುಕೊಂಡು ಖುಷಿಯಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯ ಫೋಟೋದಲ್ಲಿ ಸೆರೆಯಾಗಿದೆ.

  ಇತ್ತ ಫೋಟೋಗಳನ್ನು ಹಂಚಿಕೊಂಡಿರುವ ನಟಿ ದೀಪಿಕಾ ದಾಸ್​ ನಡೆಗೆ ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದು, ಇದು ನಿಜವಾದ ಮದುವೆನಾ ಅಥವಾ ಜಾಹೀರಾತು ಚಿತ್ರೀಕರಣನಾ ಎಂದು ಪ್ರಶ್ನಿಸಿದ್ದಾರೆ, ಏಕೆಂದರೆ ಬಿಗ್‌ಬಾಸ್‌ ಸ್ಪರ್ಧಿಗಳಾದ ಕಾರ್ತಿಕ್‌ ಮಹೇಶ್‌ ಮತ್ತು ನಮ್ರತಾ ಗೌಡ ಕೂಡ ಇದೇ ರೀತಿ ಮದುವೆಯಾದ ಫೋಟೋ ಹಂಚಿಕೊಂಡಿದ್ದರು. ಬಳಿಕ ಅದು ಜಾಹೀರಾತು ಚಿತ್ರೀಕರಣದ ವೇಲೆ ತೆಗೆಯಲಾದ ಫೋಟೋ ಎಂದು ತಿಳಿದು ಬಂದಿತ್ತು. ಇದೇ ರೀತಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ದೀಪಿಕಾ ದಾಸ್‌ ಕೂಡ ಮದುಮಗಳಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ, ಇದೀಗ ದೀಪಿಕಾ ದಾಸ್‌ ಮದುವೆಯಾಗಿರುವುದು ಖಚಿತವಾಗಿದೆ. 

  See also  ಹೆಲ್ಮೆಟ್​ ಯಾಕೆ ಹಾಕಿಲ್ಲ ಎಂದಿದ್ದಕ್ಕೆ ಪೊಲೀಸಪ್ಪನ​ ಕೈ ಕಚ್ಚಿದ ಭೂಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts