More

  ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ಇತಿಹಾಸ ರಚಿಸಲು ಸಜ್ಜಾದ ಟೀಮ್ ಇಂಡಿಯಾ; ಏನದು?

  ನವದೆಹಲಿ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್​ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಲಿದ್ದು, ಈಗಾಗಲೇ ಆಟಗಾರರು ತಯಾರಿ ಆರಂಭಿಸಿದ್ದಾರೆ.

  ಸರಣಿಯ ಕೊನೆ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆಗಳು ಆಗುವ ಸಾಧ್ಯತೆ ಇದ್ದು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗಿದೆ. ಜಸ್ಪ್ರೀತ್ ಬುಮ್ರಾ ಆಗಮನದಿಂದ ಟೀಮ್​ ಇಂಡಿಯಾ ಬಲಿಷ್ಠಗೊಂಡಿದ್ದು, ಧರ್ಮಶಾಲಾದಲ್ಲಿ ಇತಿಹಾಸ ಸೃಷ್ಟಿಸುವ ಸುವರ್ಣಾವಕಾಶ ಅತಿಥೇಯರ ಮುಂದಿದೆ.

  ಭಾರತ ಕ್ರಿಕೆಟ್ ತಂಡ ಇದುವರೆಗಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಆದರೆ ಧರ್ಮಶಾಲಾದಲ್ಲಿ ಈ ಕಥೆ ಬದಲಾಗುವ ಅವಕಾಶವಿದೆ. ಭಾರತ ತಂಡವು ಧರ್ಮಶಾಲಾದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಮೊದಲ ಬಾರಿಗೆ ಟೀಮ್ ಇಂಡಿಯಾ ಗೆದ್ದ ಮತ್ತು ಸೋತ ಪಂದ್ಯಗಳ ಸಂಖ್ಯೆ ಸಮಾನವಾಗಲಿದೆ.

  ಇದನ್ನೂ ಓದಿ: ಆಂಗ್ಲರ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ?

  1932 ರಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಭಾರತ ಅಂದಿನಿಂದ 578 ಪಂದ್ಯಗಳನ್ನು ಆಡಿದೆ. ಈ ಪೈಕಿ 177ರಲ್ಲಿ ಗೆದ್ದು 178ರಲ್ಲಿ ಸೋತಿದೆ. ಈ 92 ವರ್ಷಗಳಲ್ಲಿ ಭಾರತ ತಂಡ ಗೆದ್ದ ಪಂದ್ಯಗಳ ಸಂಖ್ಯೆ ಹೆಚ್ಚು ಮತ್ತು ಸೋತ ಸಂಖ್ಯೆ ಕಡಿಮೆ ಎಂಬುದೇನೂ ನಡೆದಿಲ್ಲ. ಆದರೆ ಧರ್ಮಶಾಲಾದಲ್ಲಿ ಭಾರತ ಗೆದ್ದರೆ, ಟೆಸ್ಟ್ ಇತಿಹಾಸದಲ್ಲಿ ಭಾರತ ಗೆದ್ದ ಹಾಗೂ ಸೋತ ಪಂದ್ಯಗಳ ಸಂಖ್ಯೆ ಸಮಾನವಾಗಲಿದೆ.

  ಇಂಗ್ಲೆಂಡ್ ತಂಡ ಇದುವರೆಗೆ 392 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದು, 323ರಲ್ಲಿ ಸೋಲು ಕಂಡಿದೆ. ಆಸ್ಟ್ರೇಲಿಯಾ ಇದುವರೆಗೆ 412 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದು, 232 ಪಂದ್ಯಗಳಲ್ಲಿ ಮಾತ್ರ ಸೋತಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಇಲ್ಲಿಯವರೆಗೆ 178 ಪಂದ್ಯಗಳನ್ನು ಗೆದ್ದು 161ರಲ್ಲಿ ಸೋತಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರೂ ಇದ್ದು, ಪಾಕಿಸ್ತಾನ ಕ್ರಿಕೆಟ್ ತಂಡ 148 ಪಂದ್ಯಗಳನ್ನು ಗೆದ್ದಿದ್ದು, 142ರಲ್ಲಿ ಸೋಲುಂಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts