More

    ಎಸ್​ಆರ್​ಎಚ್​ ವಿರುದ್ಧ ಸೋತರೂ ಟಿ-20 ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ಬರೆದ ಆರ್​ಸಿಬಿ

    ಬೆಂಗಳೂರು: ಏಪ್ರಿಲ್​ 15ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ರಣರೋಚಕ ಕಾದಾಟದಲ್ಲಿ ಆರ್​ಸಿಬಿ 25 ರನ್​ಗಳ ಸೋಲು ಕಂಡಿದ್ದು, ಸೋಲಿನ ನಡುವೆಯೇ ಆರ್​ಸಿಬಿ ವಿಶ್ವದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ.

    ಸನ್​ರೈಸರ್ಸ್​​ ವಿರುದ್ಧದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್​ ಆಯ್ದುಕೊಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆರ್​ಸಿಬಿ ಬೌಲರ್​ಗಳು ವಿಫಲರಾದರು. ಎಸ್​ಆರ್​ಎಚ್​ ಪರ ಟ್ರಾವಿಸ್​ ಹೆಡ್​, ಹೆನ್ರಿಚ್​​​ ಕ್ಲಾಸೆನ್​, ಏಡೆನ್​ ಮಾರ್ಕ್ರಾಮ್​, ಅಬ್ದುಲ್​ ಸಮದ್​ ಆರ್​ಸಿಬಿ ಬೌಲರ್​ಗಳನ್ನು ದಂಡಿಸುವ ಮೂಲಕ 287 ರನ್​ಗಳನ್ನು ಪೇರಿಸಿದರು. ಇನ್ನು ಬೃಹತ್​ ಗುರಿ ಬೆನ್ನತ್ತಿದ್ದ ಆರ್​ಸಿಬಿಗೆ ಬ್ಯಾಟ್ಸ್​ಮನ್​ಗಳು ಉತ್ತಮ ಆರಂಭ ಒದಗಿಸುವಲ್ಲಿ ಸಫಲರಾದರು ಕೂಡ ಮಧ್ಯಮ ಕ್ರಮಾಂಕದ ದಿಢೀರ್​ ಕುಸಿತದಿಂದಾಗಿ 25ರನ್​ಗಳ ಸೋಲು ಕಂಡಿತ್ತು.

    288ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ್ದ ಆರ್​ಸಿಬಿ ತಂಡವು ಎಸ್​ಆರ್​ಎಚ್​ ವಿರುದ್ಧ ದಿಟ್ಟ ಪ್ರತಿರೋಧ ತೋರಿತ್ತು. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ದಿನೇಶ್​ ಕಾರ್ತಿಕ್ (83 ರನ್, 35 ಎಸೆತ, 5 ಬೌಂಡರಿ, 7 ಸಿಕ್ಸರ್), ನಾಯಕ ಫಾಫ್​ ಡು ಪ್ಲೆಸಿಸ್​ (62 ರನ್, 28 ಎಸೆತ, 7 ಬೌಂಡರಿ, 4 ಸಿಕ್ಸರ್), ವಿರಾಟ್​ ಕೊಹ್ಲಿ (42 ರನ್, 20 ಎಸೆತ, 6 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 262ರನ್​ ಕಲೆಹಾಕಿ 25ರನ್​ಗಳ ಸೋಲು ಕಂಡಿತ್ತು.

    RCB Trio

    ಇದನ್ನೂ ಓದಿ: ಎಸ್​ಆರ್​ಎಚ್​ ವಿರುದ್ಧ 25ರನ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

    ಸೋಲಿನ ನಡುವೆಯೇ ಆರ್​ಸಿಬಿ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಒಂದನ್ನು ನಿರ್ಮಿಸಿದೆ. ದಕ್ಷಿಣ ಆಫ್ರಿಕಾ ಹೆಸರಿನಲ್ಲಿದ್ದ ಈ ದಾಖಲೆಯನ್ನು ಆರ್​ಸಿಬಿ ಚೇಸಿಂಗ್​ ಮಾಡುವ ಮೂಲಕ ತನ್ನದಾಗಿಸಿಕೊಂಡಿದೆ. ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್​ ವೇಳೆ 262ರನ್​ ಬಾರಿಸುವ ಮೂಲಕ ಆರ್​ಸಿಬಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್​ ಇಂಡೀಸ್​ ವಿರುದ್ಧ ಮಾಡಿದ್ದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

    2023ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 4 ವಿಕೆಟ್​ ನಷ್ಟಕ್ಕೆ 259ರನ್​ಗಳ ಗುರಿ ಬೆನ್ನಟ್ಟುವ ಮೂಲಕ ಜಯ ಗಳಿಸಿತ್ತು. ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 262 ರನ್​ಗಳನ್ನು ಬಾರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೌತ್ ಆಫ್ರಿಕಾ ತಂಡದ ದಾಖಲೆ ಮುರಿದಿದೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ಅತಿ ಹೆಚ್ಚು ರನ್ ಬಾರಿಸಿದ ಹೊಸ ವಿಶ್ವ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts