More

  ಕೈಗೆ ಪಟ್ಟಿ ಕಟ್ಟಿಕೊಂಡು ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಡಿ ಬಾಸ್

  ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕರ್ನಾಟಕದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್​ ಅವರ ನಿಧನ ಸ್ಯಾಂಡಲ್​ವುಡ್​ಗೆ ಆಘಾತವನ್ನುಂಟು ಮಾಡಿದೆ. ದ್ವಾರಕೀಶ್​ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

  ನಟ ದರ್ಶನ್​ಗೆ ದ್ವಾರಕೀಶ್​ ಕುಟುಂಬಸ್ಥರು ಆಪ್ತರಾಗಿದ್ದರು. ಕೈನೋವಿನ ನಡುವೆಯೂ ನಟ ದರ್ಶನ್ ದ್ವಾರಕೀಶ್​ ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

  ಇದನ್ನೂ ಓದಿ: ಅಂಬೇಡ್ಕರ್​ ಜಯಂತಿ ಗುರಿಯಾಗಿಸಿ ಮೊಟ್ಟೆ ಎಸೆದ ಕಿಡಿಗೇಡಿಗಳು; ಪ್ರಕರಣ ದಾಖಲು

  ದ್ವಾರಕೀಶ್​ ಕುಟುಂಬಸ್ಥರು ಹಾಗೂ ನಟ ದರ್ಶನ್​ ಕುಟುಂಬಸ್ಥರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ದ್ವಾರಕೀಶ್​ ಅವರ ಪುತ್ರ ಯೋಗೀಶ್​ಗೆ ನಟ ದರ್ಶನ್​ ಸಾಂತ್ವಾನ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಟ ದರ್ಶನ್​ ಮಾತ್ರವಲ್ಲದೇ ಶಿವರಾಜ್​​ಕುಮಾರ್​, ಶರಣ್, ನೀನಾಸಂ ಸತೀಶ್, ಸುಂದರ್​ ರಾಜ್​, ಮೇಘನಾ ರಾಜ್​ ಸರ್ಜಾ, ನಟಿ ಭವ್ಯಾ, ನಿರ್ದೇಶಕ ಆರ್. ಚಂದ್ರು ಸೇರಿದಂತೆ ಹಲವರು ದ್ವಾರಕೀಶ್​ ಅವರ ನಿಧನಕ್ಕೆ ಸಂತಾಪವನ್ನೂ ಸೂಚಿಸಿದ್ದಾರೆ.

  ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ  ಎಂದು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts