More

    ಪಂಚಭೂತಗಳಲ್ಲಿ ಲೀನರಾದ ದ್ವಾರಕೀಶ್​; ಕರ್ನಾಟಕದ ಕುಳ್ಳ ಇನ್ನು ನೆನಪು ಮಾತ್ರ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ನಿನ್ನೆ ಮೃತಪಟ್ಟ ದ್ವಾರಕೀಶ್​ ಅವರ ಅಂತ್ಯಕ್ರೀಯೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳ ಮೂಲಕ ಅಂತಿಮ ವಿಧಿವಿಧಾನ ನೇರವೇರಿದೆ.

    ಮಂಗಳವಾರ (ಏಪ್ರಿಲ್ 16)  ನಿನ್ನೆ ನಿಧನರಾದ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಟೌನ್ ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಗಣ್ಯರು ಇಲ್ಲಿ ಅಂತಿಮ ದರ್ಶನ ಪಡೆದರು.

    ದರ್ಶನದ ಬಳಿಕ ಬೆಂಗಳೂರಿನ ಚಾಮರಾಜಪೇಟೆ ಟಿಆರ್​ಮಿಲ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.  ದ್ವಾರಕೀಶ್​​ ಅವರ ಐವರು ಮಕ್ಕಳು ಸೇರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.  ಪೊಲೀಸ್ ಗೌರವದೊಂದಿಗೆ ಅತ್ಯಕ್ರೀಯೆ ನೇರವೆರಿಸಲಾಗಿದೆ.

    ದ್ವಾರಕೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹೀಗಾಗಿ, ಅವರಿಗೆ ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಇಂದು ಬೆಳಗ್ಗೆ 10.30ರ ಶೋ ಬಂದ್ ಮಾಡಲು ಪ್ರದರ್ಶಕರ ವಲಯದಿಂದ ಕರೆ ನೀಡಲಾಗಿದೆ. ಪ್ರದರ್ಶಕರ ವಲಯದ ಕರೆಗೆ ಚಿತ್ರೋದ್ಯಮ‌ ಸಾಥ್ ಕೊಟ್ಟಿದೆ. ಮದ್ಯಾಹ್ನ 1 ಘಂಟೆ ನಂತರ ಚಿತ್ರಮಂದಿರಗಳಲ್ಲಿ ಶೋ ಆರಂಭ ಆಗಲಿವೆ. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಎಲ್ಲವೂ ಒಂದು ಶೋ ಬಂದ್ ಮಾಡಲಿವೆ.

    ಬಿಸಿಲಿನಲ್ಲಿ ನವಜಾತ ಶಿಶುವನ್ನು ಮಲಗಿಸಿದ ತಂದೆ; ಮಗು ಸಾವು, ಅಪ್ಪ ಜೈಲಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts