More

    ಬಿಸಿಲಿನಲ್ಲಿ ನವಜಾತ ಶಿಶುವನ್ನು ಮಲಗಿಸಿದ ತಂದೆ; ಮಗು ಸಾವು, ಅಪ್ಪ ಜೈಲಿಗೆ

    ರಷ್ಯಾ: ತನ್ನ ಒಂದು ತಿಂಗಳ ಮಗನನ್ನು ಬಿಸಿಲಿನಲ್ಲಿ ಮಲಗಿಸಿ ಸಾವಿಗೆ ಕಾರಣನಾದ ತಂದೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ರಷ್ಯಾದಲ್ಲಿ ನಡೆದಿದೆ.

    ಕಾಸ್ಮೋಸ್ ಮೃತ ಪುಟ್ಟ ಕಂದ. ಮ್ಯಾಕ್ಸಿಮ್ ಲ್ಯುಟಿ ಆರೋಪಿ ತಂದೆ.ತನ್ನ ಒಂದು ತಿಂಗಳ ಮಗನನ್ನು ಬಿಸಿಲಿನಲ್ಲಿ ಮಲಗಿಸಿ ಸಾವಿಗೆ ಕಾರಣನಾದ ತಂದೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ನಡೆದಿದ್ದೇನು?: ಮ್ಯಾಕ್ಸಿಮ್ ಲ್ಯುಟಿನನ ಮಡದಿಗೆ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗುಗೆ ಸೂರ್ಯನ ಕಿರಣಗಳು ತಾಕಿದರೆ ಅತಿಮಾನುಷ ಸಾಮರ್ಥ್ಯ ಆತನಿಗೆ ಬರುತ್ತದೆ ಎಂದು ನಂಬಿದ್ದನು. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಬೆಳಗ್ಗೆಯ ಎಳೆ ಬಿಸಿಲು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಇಡೀ ದಿನ ಮಗುವನ್ನು ಬಿಸಿಲಿಗೊಡ್ಡಿದ್ದಾರೆ.

    ಹೆರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೇ ಮನವಿ ಮಾಡಿದರೂ ಲ್ಯೂಟಿ ಒಪ್ಪಿರಲಿಲ್ಲ ಹಾಗಾಗಿ ಮಗು ಮನೆಯಲ್ಲೇ ಜನಿಸಿತ್ತು. ಹುಟ್ಟಿದ ಮಗುವಿಗೆ ಹಾಲು ನೀಡುವ ಬದಲು ಬಿಸಿಲಲ್ಲಿ ಮಲಗಿಸಿದ, ಶಿಶುವಿಗೆ ಹಣ್ಣುಗಳನ್ನು ತಿನ್ನಿಸಿದ್ದ. ಒಕ್ಸಾನಾ ಗಂಡನ ಕಣ್ಣು ತಪ್ಪಿಸಿ ಮಗುವಿಗೆ ಎದೆಹಾಲುಣಿಸಲು ಪ್ರಯತ್ನಿಸುತ್ತಿದ್ದಳು ಆದರೆ ಕೊನೆಗೆ ಆತನಿಗೆ ಹೆದರಿ ಹಿಂದೆ ಸರಿಯುತ್ತಿದ್ದಳು.

    ದುರಂತವೆಂದರೆ ಮಗು ಅಪೌಷ್ಠಿಕತೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿತ್ತು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ. ಆತ ಉದ್ದೇಶಪೂರ್ವಕವಾಗಿಯೇ ಗಂಭೀರವಾದ ದೈಹಿಕ ಹಾನಿಯನ್ನು ಮಾಡಿದ್ದಾನೆ ಎಂದು ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಗುವಿಗೆ ಹಾಲು ಕೊಡದೆ ಬಿಸಿಲಲ್ಲ ಮಲಗಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದ ನ್ಯಾಯಾಲಯವು ಮ್ಯಾಕ್ಸಿಮ್ ಲ್ಯುಟಿ ಎಂಬಾತನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತನ್ನ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

    2ನೇ ಮದ್ವೆಗೆ ದ್ವಾರಕೀಶ್​​​ ಮೊದಲ ಪತ್ನಿಯಿಂದ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಹೆಂಡ್ತಿ, ಮಕ್ಕಳ ಸಮ್ಮುಖದಲ್ಲೇ ನಡೆದಿತ್ತು ಮತ್ತೊಂದು ಮದುವೆ

    ದ್ವಾರಕೀಶ್​ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ರಾ ವಿಷ್ಣು? ಕೊನೆಗೆ ಆಪ್ತಮಿತ್ರನಿಗೆ ಆಪ್ತರಕ್ಷಕನಾದ ರೋಚಕ ಕಥೆ ಇದು….

    ಸಿನಿಮಾಗಾಗಿ 15 ಮನೆ ಮಾರಿ ಬಾಡಿಗೆ ನಿವಾಸದಲ್ಲಿ ವಾಸ; ದ್ವಾರಕೀಶ್ ಬದುಕಿನ ದುರಂತ ಕಥೆ ಇದು…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts