More

    2ನೇ ಮದ್ವೆಗೆ ದ್ವಾರಕೀಶ್​​​ ಮೊದಲ ಪತ್ನಿಯಿಂದ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಹೆಂಡ್ತಿ, ಮಕ್ಕಳ ಸಮ್ಮುಖದಲ್ಲೇ ನಡೆದಿತ್ತು ಮತ್ತೊಂದು ಮದುವೆ

    ಬೆಂಗಳೂರು: ಸ್ಯಾಂಡಲ್​​ವುಡ್​ ನಟ, ನಿರ್ದೇಶಕ, ನಿರ್ಮಾಪಕ, ಹಾಸ್ಯನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ದ್ವಾರಕೀಶ್​​ ಅವರು ವಯೋಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದ್ದಾರೆ.

    ದ್ವಾರಕೀಶ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ನಟ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು.  ಕನ್ನಡ, ಹಿಂದಿ, ತಮಿಳು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಆದರೆ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದ ಕೊಡುಗೆ ಮಾತ್ರ ಅಪಾರವಾಗಿದೆ. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದರು.  ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದ ಈ ನಟನ ಜೀವನ ಕೂಡಾ ಅಷ್ಟೇ ಸುಂದರವಾಗಿತ್ತು.

    1967 ಏಪ್ರಿಲ್ 26ರಂದು ದ್ವಾರಕೀಶ್  ತಮ್ಮ ಸಂಬಂಧಿಯೇ ಆದ ಅಂಬುಜಾ ಅವರನ್ನು ಮದುವೆಯಾಗಿ  4 ಗಂಡು ಮಕ್ಕಳಿಗೆ ಪೋಷಕರಾದರು. ಮೊದಲನೇ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರಡು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಈಗ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಶೈಲಜಾ ಎಂಬುವರನ್ನೂ ಕೂಡ ಎರಡನೇ ಮದುವೆ ಮಾಡಿಕೊಂಡಿದ್ದರು.  ಕೆಲವು ತಿಂಗಳ ಹಿಂದೆ ಅವರ ಮೊದಲನೇ ಪತ್ನಿ ಅಂಬುಜಾರನ್ನು ಅಗಲಿದ್ದರು. ಇಬ್ಬರು ಪತ್ನಿಯ ಮುದ್ದಿನ ಗಂಡನಾಗಿದ್ದ ದ್ವಾರಕೀಶ್​ ಅವರು 2ನೇ ಮದುವೆ ಆಗಿರುವ ಕಥೆ ಒಂದು ಸಿನಿಮಾವನ್ನು ಮೀರಿಸುವಂತೆ ಇದೆ.

    ಮೊದಲ ಪತ್ನಿಗೆ ಮಕ್ಕಳಿದ್ದಾಗಲೇ ದ್ವಾರಕೀಶ್ ಎರಡನೇ ಮದುವೆಯಾಗಿದ್ದರು. ಆದರೆ ಅವರ ಪ್ರೇಮ ಕಥೆ ಬಹಳ ಚರ್ಚೆ ಹುಟ್ಟುಹಾಕಿತ್ತು. ಒಮ್ಮೆ ಅವರೇ ಈ ಕುರಿತು ಹೀಗೆ ಹೇಳಿಕೊಂಡಿದ್ದರು.

    “ಎಲ್ಲರನ್ನು ಮದರಾಸಿನ ಫೈವ್ ಸ್ಟಾರ್ ಹೋಟೆಲೊಂದಕ್ಕೆ ಕರೆದುಕೊಂದು ಹೋದೆ. ಊಟ ಮಾಡುವ ಮೊದಲು ಒಂದು ನೋಟ್ ಪುಸ್ತಕವನ್ನು ಅಂಬುಜಾ ಮುಂದಿಟ್ಟು ಹೇಳಿದೆ, ಇದೊಂದು ಕಾದಂಬರಿ ಅಂತಿಟ್ಕೋ. ಇದು ನನ್ನ ಲೈಫ್ ಸ್ಟೋರಿ. ಲವ್‌ನಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗಬೇಕೂಂತಿದ್ದೇನೆ. ಇಲ್ಲವದರೆ ಇಲ್ಲ. ಮರೆತುಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯ ಪುಟದಲ್ಲಿ ನಿನಗೆ ಏನನ್ನಿಸುತ್ತದೋ ಅದನ್ನು ಬರೆ. ಕಾದಂಬರಿ ಸುಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ದುಃಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ಇಷ್ಟನ್ನು ಹೇಳಿ ಮೌನವಾದೆ ಎಂದರು.

    ಐದೇ ಐದು ನಿಮಿಷ ಯೋಚಿಸಿದ ಅಂಬುಜಾ ಆ ನೋಟ್ ಪುಸ್ತಕವನ್ನು ಹತ್ತಿರ ಎಳೆದುಕೊಂಡು ಕೊನೆಯ ಪುಟದಲ್ಲಿ ಅದೇನನ್ನೋ ಬರೆದಳು. ನಾನು ಓದಿದೆ : ನಿಮ್ಮ ಸಂತೋಷವೇ ನನ್ನ ಸಂತೋಷ. ಹೆಂಡತಿಯ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಕೂಡಲೆ ಅಲ್ಲಿಂದಲೇ ಫೋನ್ ಮಾಡಿ ಶೈಲಜಾಗೆ ವಿಷಯ ತಿಳಿಸಿದೆ.

    ಅಂಬುಜಾ ಕೂಡಾ ಆಕೆಯ ಜೊತೆ ಮಾತನಾಡಿದಳು. ಮಕ್ಕಳೂ ಕಂಗ್ರಾಟ್ಸ್ ಹೇಳಿದರು. ನೀವು ನಂಬುವುದಿಲ್ಲ. ಆದರೆ ಇದು ನಿಜ. ಎಲ್ಲರ ಸಮ್ಮುಖದಲ್ಲೇ ನಾನು ಶೈಲಜಾಳ ಕುತ್ತಿಗೆಗೆ ತಾಳಿ ಕಟ್ಟಿದೆ. ಮೊದಲ ಹೆಂಡತಿ, ಮಕ್ಕಳೆಲ್ಲಾ ಶುಭ ಹಾರೈಸಿದರು. ಸಿನಿಮಾದಲ್ಲಾದರೆ ದುಃಖಾಂತವಾಗಬಹುದಾಗಿದ್ದ ಕಥೆ ನನ್ನ ಸ್ವಂತ ಬದುಕಿನಲ್ಲಿ ಸುಖಾಂತವಾಯಿತು ಎಂದಿದ್ದರು.

    ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts