More

  ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌

  ಬೆಂಗಳೂರು: ಸ್ಯಾಂಡಲ್​​ವುಡ್​ನ ನಟ, ನಿರ್ದೇಶಕ  ದ್ವಾರಕೀಶ್ (81)​​ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ.  ಚಲನಚಿತ್ರರಂಗಕ್ಕೆ  ಇವರ ಕೊಡುಗೆ ಅಪಾರವಾಗಿದೆ.

  ದ್ವಾರಕೀಶ್ 1942 ಆಗಸ್ಟ್ 18 ರಂದು ಮೈಸೂರಿನ ಹುಣಸೂರುನಲ್ಲಿ ಜನಿಸಿದರು.  ಶಮಾರಾವ್ ಮತ್ತು ಜಯಮ್ಮ ಇವರ ತಂದೆ-ತಾಯಿ. ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1963ರಲ್ಲಿ, ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು.

  ಏಪ್ರಿಲ್ 26, 1967 ರಂದು ದ್ವಾರಕೀಶ್  ತಮ್ಮ ಸಂಬಂಧಿಯೇ ಆದ ಅಂಬುಜಾ ಅವರನ್ನು ಮದುವೆಯಾಗಿ  4 ಗಂಡು ಮಕ್ಕಳಿಗೆ ಪೋಷಕರಾದರು. ಮೊದಲನೇ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರಡು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಈಗ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಶೈಲಜಾ ಎಂಬುವರನ್ನೂ ಕೂಡ ಎರಡನೇ ಮದುವೆ ಮಾಡಿಕೊಂಡಿದ್ದರು.  ಕೆಲವೇ ತಿಂಗಳ ಹಿಂದೆ ಅವರ ಮೊದಲನೇ ಪತ್ನಿ ಅಂಬುಜಾರನ್ನು  ಅಗಲಿದ್ದರು.

  ದ್ವಾರಕೀಶ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ನಟ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು.  ಕನ್ನಡ, ಹಿಂದಿ, ತಮಿಳು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಆದರೆ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದ ಕೊಡುಗೆ ಮಾತ್ರ ಅಪಾರವಾಗಿದೆ. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದರು.

  ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು.

  1966ರಲ್ಲಿ ದ್ವಾರಕೀಶ್ ಅವರು ಮಮತೆಯ ಬಂಧನ ಸಿನಿಮಾವನ್ನು ಇನ್ನಿಬ್ಬರು ನಿರ್ಮಾಪಕರ ಜೊತೆ ಸೇರಿ ತುಂಬಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದರು. ೧೯೬೯ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಬಳಿಕ ಹಲವು ಸಿನಿಮಾಗಳನ್ನು ನಿರ್ಮಿಸಿ, ಅದರಲ್ಲಿ ಯಶಸ್ಸು ಗಳಿಸಿದರು. ನಿರ್ಮಾಪಕರಾಗಿ ಹಲವು ಕಲಾವಿದರನ್ನು ಚಿತ್ರರಂಗ ಪರಿಚಯಸಿದ್ದಾರೆ

  1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಲವು ಸಿನಿಮಾಗಳಲು   ಸೂಪರ್​ ಹಿಟ್​​, ಇನ್ನೂ ಕೆಲವು ಸಿನಿಮಾಗಳು ನೀರಿಕ್ಷೆ ಮಟ್ಟವನ್ನು ತಲುಪುವುದು ಕಷ್ಟವಾಗಿತ್ತು.
  ಸಿನಿಮಾ ಆಸಕ್ತಿಯನ್ನ ದ್ವಾರಕೀಶ್ ಎಂದೂ ಕಡಿಮೆ ಮಾಡಿಕೊಂಡಿರಲಿಲ್ಲ. ಚಿತ್ರ ಸೋತರೂ ಸರಿಯೇ.? ಗೆದ್ದರೂ ಸರಿಯೇ? ಗೆದ್ದ ಸಿನಿಮಾದಿಂದ ಮತ್ತೊಂದು ಸಿನಿಮಾ ಮಾಡ್ತಿದ್ದರು. ಇದರಿಂದ ಸಾಲು ಸಾಲು ಗೆಲುವು…ಸಾಲು ಸಾಲು ಸೋಲುಗಳನ್ನ ಕೂಡ ದ್ವಾರಕಿಶ್ ಕಂಡಿದ್ದಾರೆ. ದ್ವಾರಕೀಶ್ ವಯಸ್ಸಾದ ಕಾರಣ ನಟೆಯನ್ನ ಬಿಟ್ಟಿದ್ರು. ಆದರೆ ಸಿನಿಮಾ ನಿರ್ಮಾಣ ಮುಂದುವರೆಸಿದ್ದರು. 2012 ಚಾರುಲತಾ ಸಿನಿಮಾಡಿದ್ದರು. ಇದು ಒಂದು ಹಂತಕ್ಕೆ ಹೋಗಿತ್ತು. 2015 ರಲ್ಲಿ ಆಟಗಾರ ಸಿನಿಮಾ ನಿರ್ಮಿಸಿದ್ರು. ಇದು ಒಂದು ಹಂತಕ್ಕೆ ಕೈ ಹಿಡಿದಿತ್ತು. ದ್ವಾರಕೀಶ್ ನಿರ್ಮಿಸಿದ್ದ ಚಿತ್ರಗಳಲ್ಲಿ ಚೌಕ ೧೦೦ ದಿನ ಈ ಸಿನಿಮಾ ಓಡಿತ್ತು. ತರುಣ್ ಸುಧೀರ್ ಈ ಮೂಲಕ ಹೆಸರಾಗಿದ್ದರು. 2018 ರಲ್ಲಿ ಅಮ್ಮ ಐ ಲವ್ ಯು ಸಿನಿಮಾ ಮಾಡಿದ್ರು. ಇದನ್ನ ಒಳ್ಳೆ ಕಥೆಯಂತೆಲೇ ಮಾಡಿದ್ದರು. ಇದು ಕೂಡ ಒಳ್ಳೆ ಹೆಸರು ತಂದುಕೊಡ್ತು. ಇದಾದ್ಮೇಲೆ ಕಡೆಯದಾಗಿ, 2019 ರಲ್ಲಿ ಆಯುಷ್ಮಾನ್‌ಭವ ಸಿನಿಮಾ ಮಾಡಿದ್ರು. ಇದಲ್ಲಿ ಶಿವರಾಜ್‌ ಕುಮಾರ್ ಭಿನಯಿಸಿದ್ದರು. ದ್ವಾರಕೀಶ್​ ಅವರಿಗೆ ವಯಸ್ಸು ಆಗಿದ್ರೂ ಕೂಡಾ ಸಿನಿಮಾ ಮೇಲೆ ಇರುವ ಆಸಕ್ತಿ ಕಿಂಚಿತ್ತು ಕಡಿಮೆ ಆಗಿರಲಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts