More

    ಇತಿಹಾಸ ಪ್ರಸಿದ್ಧ ಹುಳಿಮಾವು ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

    ಬೆಂಗಳೂರು: ಸಾವಿರಾರು ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವವು ಭಾನುವಾರ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ಬೆಂಗಳೂರು ದಕ್ಷಿಣ ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ ಚೋಳರು ನಿರ್ಮಿಸಿರುವ ಶ್ರೀಕೋದಂಡರಾಮಸ್ವಾಮಿ ದೇವಾಲಯವು ಸಹಸ್ರಾರು ಭಕ್ತರ ಆರಾಧ್ಯ ತಾಣ. ಬ್ರಹ್ಮರಥೋತ್ಸವಕ್ಕೂ ಮುನ್ನ ವಿವಿಧ ಹೋಮ, ಹವನ, ವಿಶೇಷ ಪೂಜೆಗಳು ನಡೆದವು.

    ಕೋದಂಡರಾಮಸ್ವಾಮಿ ದೇವಾಲಯದ ರಾಜ ಬೀದಿಯಲ್ಲಿ ಹೂವು, ಮಾವಿನ ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ವಿಶೇಷ, ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮೂಲಾ ನಕ್ಷತ್ರದ ಸಿಂಹ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ಜೈಶ್ರೀರಾಮ್, ವೆಂಕಟರಮಣ ಗೋವಿಂದನ ನಾಮಸ್ಮರಣೆಯೊಂದಿಗೆ ಜಯಘೋಷ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು.

    ಭಕ್ತರು ರಥಕ್ಕೆ ಧವನ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ಜಾನಪದ ಕಲೆಗಳ ಪ್ರದರ್ಶನ, ಕೇರಳದ ಚಂಡೆವಾದ್ಯ, ಮೊಬೈಲ್ ಆರ್ಕೆಸ್ಟ್ರಾ, ವೀರಗಾಸೆ, ವೀರಗಾಸೆ ಕುಣಿತ ಗಮನ ಸೆಳೆದವು. ಭಕ್ತಾಧಿಗಳಿಗಾಗಿ ನೀರು ಮಜ್ಜಿಗೆ, ಪಾನಕ. ಕೋಸಂಬರಿ, ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.

    ದೇವಸ್ಥಾನದ ಧರ್ಮದರ್ಶಿಗಳಾದ ಆರ್.ಶರತ್ಚಂದ್ರ, ಟಿ.ಶ್ರೀನಿವಾಸ ರೆಡ್ಡಿ, ಸಿ.ಲಕ್ಷ್ಮೀನಾರಾಯಣ್, ಎಚ್.ಕೆ.ಮುತ್ತಪ್ಪ, ಆನೇಕಲ್ ಶಾಸಕ ಬಿ.ಶಿವಣ್ಣ, ಸಿ.ರವಿಕುಮಾರ್ ಮತ್ತಿತರ ಗಣ್ಯರು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts