More

  ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ್ದ ಆರೋಪಿ ಬಂಧನ

  ನಂಜನಗೂಡು: ನಗರದಲ್ಲಿ ಕಳೆದ ಏಪ್ರಿಲ್ 25ರಂದು ತನ್ನ ತಂಗಿಯ ಮಗಳ ಮೇಲೆ ಅತ್ಯಾಚಾರ ಎಸೆಗಿ ತಲೆತಪ್ಪಿಸಿಕೊಂಡಿದ್ದ ರೌಡಿ ಶೀಟರ್ ದೈತ್ಯರಾಜ್‌ನನ್ನು ಪೊಲೀಸರು ಮೈಸೂರಿನ ಹಾರೋಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
  ಆರೋಪಿ ತನ್ನ ತಂಗಿಯ ಮಗಳನ್ನು ಮನೆ ಪಾಠಕ್ಕೆ ಬಿಡುವ ನೆಪದಲ್ಲಿ ಕಾರಿನಲ್ಲಿ ನಗರದ ಹೌಸಿಂಗ್ ಬೋರ್ಡ್‌ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸೆಗಿದ್ದ. ಆರೋಪಿಯ ತಂಗಿ ನಗರ ಪೊಲೀಸ್ ಠಾಣೆಯಲ್ಲಿ ದೈತ್ಯರಾಜ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರು. ಆರೋಪಿಯ ಬಂಧನಕ್ಕಾಗಿ ನಗರದ ಪೊಲೀಸರು ವಿಶೇಷ ತಂಡ ರಚಿಸಿ, ಆರೋಪಿಯ ಪತ್ತೆಗಾಗಿ ಕ್ರಮವಹಿಸಿದ್ದರು. ಬಂಧಿತ ಆರೋಪಿಯನ್ನು ಮೈಸೂರಿನ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts