More

    ಸಿಬಿಎಸ್‌ಇ ಫಲಿತಾಂಶ: ಕಳೆದ ವರ್ಷಕ್ಕಿಂತ 2 ಸ್ಥಾನ ಕುಸಿದ ಬೆಂಗಳೂರು

    ಬೆಂಗಳೂರು ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ರಾಷ್ಟ್ರದ 17 ವಲಯಗಳಲ್ಲಿ ಬೆಂಗಳೂರು 4ನೇ ಸ್ಥಾನ ಕಾಯ್ದುಕೊಂಡಿದೆ.

    ಬೆಂಗಳೂರಿನಲ್ಲಿ 10ನೇ ತರಗತಿಯಲ್ಲಿ ಶೇ.99.26 ಹಾಗೂ 12ನೇ ತರಗತಿಯಲ್ಲಿ ಶೇ.96.95 ಅಂಕಗಳಿಸಿರುವುದೇ ಅತಿ ಹೆಚ್ಚಿನ ಅಂಕಗಳೆಂದು ಪರಿಗಣಿಸಲಾಗಿದೆ. 2023ರಲ್ಲಿ ಬೆಂಗಳೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತ್ತು. ಕಳೆದ ವರ್ಷ 10ನೇ ತರಗತಿ ಶೇ.99.18 ಮತ್ತು 12ನೇ ತರಗತಿ ಶೇ.98.64 ಇತ್ತು. ಇದನ್ನು ಈ ವರ್ಷಕ್ಕೆ ಹೋಲಿಕೆ ಮಾಡಿದರೆ, 10ನೇ ತರಗತಿಯಲ್ಲಿ ಶೇ.0.08 ಏರಿಕೆಯಾಗಿದ್ದು, 12ನೇ ತರಗತಿಯಲ್ಲಿ ಶೇ.1.69 ಇಳಿಕೆಯಾಗಿದೆ.

    ಬೆಂಗಳೂರಿನಲ್ಲಿರುವ ಸಿಬಿಎಸ್‌ಇ ಶಾಲೆಗಳು ಉತ್ತಮ ಲಿತಾಂಶವನ್ನು ಪಡೆದುಕೊಂಡಿವೆ. ಕೆಲವು ಶಾಲೆಗಳು ಶೇ.100 ಲಿತಾಂಶ ಪಡೆದಿದ್ದರೆ, ಬಹುತೇಕ ಶಾಲೆಗಳು ಶೇ.99 ಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. 12ನೇ ತರಗತಿಯಲ್ಲಿ ರಾಮಮೂರ್ತಿ ನಗರದ ಚೈತನ್ಯ ಟೆಕ್ನೋ ವಿದ್ಯಾಸಂಸ್ಥೆಯ ಎಂ.ಮೋನಿಕಾ 500 ಅಂಕಗಳಿಗೆ 494, ವಿಶ್ರುತ್ ಗುರುಲ್ಲಾ ಮತ್ತು ಎ.ಅದಿತ್ಯ ಇಬ್ಬರೂ ಸಹ 493 ಅಂಕಗಳಿಸಿದ್ದಾರೆ.

    10ನೇ ತರಗತಿ ಲಿತಾಂಶದಲ್ಲಿ ಇದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎಂ.ಸುಚಿತ್ರಾ ಮತ್ತು ಸತ್ಕೃತಿ 500 ಅಂಕಗಳಿಗೆ 494 ಅಂಕಗಳಿಸಿದ್ದಾರೆ. ಇಂದಿರಾನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆ ಶೇ.100 ಲಿತಾಂಶ ಪಡೆದಿದ್ದು, ಇದೇ ಶಾಲೆಯ ವಿದ್ಯಾರ್ಥಿನಿ ಮಾಯಾ ರಾಜೇಶ್ ಶೇ.99.2 ಅಂಕಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts