More

  ಸಿನಿಮಾಗಾಗಿ 15 ಮನೆ ಮಾರಿ ಬಾಡಿಗೆ ನಿವಾಸದಲ್ಲಿ ವಾಸ; ದ್ವಾರಕೀಶ್ ಬದುಕಿನ ದುರಂತ ಕಥೆ ಇದು…​

  ಬೆಂಗಳೂರು: ನಿನಿಮಾ ಒಂದು ಮಾಯಾಲೋಕವಾಗಿದೆ. ಈ ಸಿನಿಮಾ ಇಂಡಸ್ಟ್ರೀಗೆ ಒಮ್ಮೆ ಎಂಟ್ರಿ ಆದರೆ ಎಲ್ಲೂ ಸಿನಿಮಾವೇ ಆಗಿರುತ್ತದೆ. ಹೀಗೆ ಸಿನಿಮಾದಿಂದಲ್ಲೇ ಎಲ್ಲವನ್ನೂ ಗಳಿಸಿಕೊಂಡು, ಸಿನಿಮಾಗಾಗಿಯೇ ಎಲ್ಲವನ್ನೂ ಕಳೆದುಕೊಂಡವರು ಇದ್ದಾರೆ. ಇದೇ ಸಾಲಿನಲ್ಲಿ ಬರುವವರು ನಟ, ನಿರ್ಮಾಪಕ ದ್ವಾರಕೀಶ್​. ಸಾಲು.. ಸಾಲು ಹಿಟ್​ ಸಿನಿಮಾಗಳನ್ನು ನೀಡಿದ್ದ ಕರ್ನಾಟಕದ ಕುಳ್ಳ ದ್ವಾರಕೀಶ್​ ಅವರು ಚಿತ್ರಗಳು ಸೋತಾಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ….

  ದ್ವಾರಕೀಶ್​​ ಹೆಸರು ಹೇಳುತ್ತಿದ್ದಂತೆ ನಮ್ಮ ಮುಖದಲ್ಲಿ ನಮಗೆ ಗೊತ್ತಿಲ್ಲದೆ ನಗು ಮೂಡುತ್ತದೆ. ಇದಕ್ಕೆ ಕಾರಣ ದ್ವಾರಕೀಶ್​​ ಅವರು ಹಾಸ್ಯ ಕಲಾವಿದನಾಗಿ ಪರಿಚಯವಾಗಿದ್ದರು. ನಂತರ ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ನಟ, ನಿರ್ಮಾಪಕ, ನಿರ್ದೇಶಕನಾಗಿ ಮಿಂಚಿದ್ದರು. ಕನ್ನಡ, ಹಿಂದಿ, ತಮಿಳು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಆದರೆ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದ ಕೊಡುಗೆ ಮಾತ್ರ ಅಪಾರವಾಗಿದೆ. ಸಣ್ಣ, ಪುಟ್ಟ ನಟರನ್ನು ಹಾಕಿ ಕೊಂಡು ಸಿನಿಮಾ ಮಾಡಿ ದೊಡ್ಡ ಯಶಸ್ಸು ಗಳಿಸುತ್ತಿರುತ್ತಾರೆ. ನಂತ್ರ ವಿಷ್ಣುವರ್ಧನ್​​ ಅವರ ಪರಿಚಯವಾಗುತ್ತದೆ ಅವರ ಜತೆ ಮಾಡಿರುವ ಎಲ್ಲಾ ಸಿನಿಮಾಗಳು ಹಿಟ್​ ಎನ್ನುವಷ್ಟರ ಮಟ್ಟಿಗೆ ಈ ಜೋಡಿ ಹೆಸರು ಮಾಡುತ್ತದೆ.

  ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು. ಹೀಗೆ ವಿಷ್ಟು ದ್ವಾರಕೀಶ್ ಕಾಂಬಿನೇಷನ್ನಲ್ಲಿ ಸಾಕಷ್ಟು ಚಿತ್ರಗಳು ಮೂಡಿಬಂದವು. ಅದ್ರಲ್ಲಿ ಹಲವು ಚಿತ್ರಗಳು ಸೆನ್ಸೇಷನ್ ಕ್ರಿಯೇಟ್ ಮಾಡಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್. ಸಿನಿಮಾದಿಂದಲೇ ಅಪರವಾದ ಕೀರ್ತಿ, ಹೆಸರು, ಹಣ ಎಲ್ಲವನ್ನು ಸಂಪಾದನೆ ಮಾಡಿದ್ದ ನಟ ಕಷ್ಟಗಳನ್ನು ಅನುಭವಿಸಿದ್ದಾರೆ.

  ಆರಂಭದಲ್ಲಿ ಹಿಟ್​​ ಸಿನಿಮಾಗಳನ್ನು ನೀಡಿ ಸೋಲು ಕಾಣದೆ ಇದ್ದ ದ್ವಾರಕೀಶ್​​ ಅವರಿಗೆ ಕೆಲವು ಚಿತ್ರಗಳು ಮಾತ್ರ ಕೈ ಹಿಡಿಯಲಿಲ್ಲ. ಆದರೆ ಹೊಸ ಹೊಸ ಪ್ರಯೋಗ ಮಾಡ್ತಾರೆ ಆದ್ರೆ ಯಾಕೋ ದ್ವಾರಕೀಶ್​​ ಅವರು ಕೈ ಸುಟ್ಟುಕೊಳ್ಳುತ್ತಾರೆ. ಆಪ್ತರಕ್ಷಕ ಸಿನಿಮಾ ಮಾಡಿದ್ದ ದ್ವಾರಕೀಶ್​​ ಅವರು ಕಮ್​ಬ್ಯಾಕ್​ ಮಾಡ್ತಾರೆ. ನಂತರ ಸುದೀಪ್​ ಅವರನ್ನು ಮುಖ್ಯ ಭೂಮಿಕೆಯಲ್ಲಿ ಹಾಕಿಕೊಂಡು ವಿಷ್ಣುವರ್ಧನ ಸಿನಿಮಾ ಮಾಡ್ತಾರೆ ಈ ಸಿನಿಮಾ ಕೂಡಾ ಬಾಕ್ಸ್​​ ಆಫೀಸ್​​ನಲ್ಲಿ ಸೌಂಡ್​​ ಮಾಡುತ್ತದೆ. ಈ ಸಿನಿಮಾಗಳಿಂದ ಯಶಸ್ಸು ಕಂಡಿದ್ದ ದ್ವಾರಕೀಶ್​ ಅವರು ಮತ್ತೆ ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಾರೆ. ಅದುವೆ ಪ್ರಿಯಾಮಣಿ ಅಭಿನಯದ ಚಾರುಲತಾ ಸಿನಿಮಾ ದೊಡ್ಡ ಪೆಟ್ಟನ್ನು ದ್ವಾರಕೀಶ್​ ಅವರಿಗೆ ಕೊಡುತ್ತದೆ. ಈ ಸಿನಿಮಾದಿಂದ ಸಾಕಷ್ಟು ಸಾಲಕ್ಕೆ ಒಳಗಾಗುತ್ತಾರೆ.

  ನಂತರ ಆಟಗಾರ, ಚೌಕ, ಅಮ್ಮ ಐ ಲವ್​ಯೂ ಸಿನಿಮಾ ಮಾಡುತ್ತಾರೆ ಒಳ್ಳೆಯ ರೆಸ್ಪಾನ್ಸ್​ ಬರುತ್ತದೆ, ಒಳ್ಳೆಯ ರಿವಿವ್ಯೂ ಬರುತ್ತದೆ ಆದರೆ ಸಿನಿಮಾ ನಿರೀಕ್ಷೆಯಷ್ಟು ಹಣ ಮಾತ್ರ ಗಳಿಕೆ ಮಾಡುವುದಿಲ್ಲ. ನಂತರ ಈ ಎಲ್ಲಾ ಸಿನಿಮಾಗಳಿಂದ ಸೋತಿದ್ದ ದ್ವಾರಕೀಶ್​​ ಅವರು ಮತ್ತೆ ಸಾಲಸೋಲಮಾಡಿ ಆಯುಷ್ಮಾನ್ ಭವ ಸಿನಿಮಾ ಮಾಡುತ್ತಾರೆ ಆದರೆ ಇದೂ ಕೂಡಾ ಸಿನಿಮಾ ಸೋತು ಹೋಗುತ್ತದೆ.

  ದ್ವಾರಕೀಶ್​​ ಅವರ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಆಪ್ತಮಿತ್ರ ಸಿನಿಮಾದಿಂದ ಗಳಿಸಿದ್ದ ಹಣ, ಕಮ್​ಬ್ಯಾಕ್​​ ಮಾಡಿದ್ದ ರೀತಿ ಎಲ್ಲವನ್ನೂ ಕೂಡಾ ವೆಸ್ಟ್​​ ಎನ್ನುವಷ್ಟರ ಮಟ್ಟಿಗೆ ಆಗುತ್ತದೆ. ಹೊಸ ಹೊಸ ಪ್ರಯೋಗ ಮಾಡಲು ಸಿನಿಮಾಗಾಗಿ ತಾವು ಪ್ರೀತಿಯಿಂದ ಕಟ್ಟಿದ್ದ ಮನೆಗಳ ಮಾರಾಟವನ್ನು ಮಾಡಲು ಶುರು ಮಾಡುತ್ತಾರೆ. ಪ್ಯಾಲೆಸ್​ ಬಳಿ, ಎನ್​ಆರ್​ ಕಾಲೋನಿ, ಇಂದ್ರಾನಗರ, ಎಚ್​ಎಸ್​ಆರ್​ ಬಳಿ ಇರುವ ಮನೆ ಮಾರಾಟ ಮಾಡುತ್ತಾರೆ. ಸರಿಸುಮಾರು 15 ಮನೆಗಳನ್ನು ಹಾಗೂ ಗಾಡಿಗಳನ್ನು ಮಾರಾಟ ಮಾಡುತ್ತಾರೆ. ನಂತರ ಬಾಡಿಗೆ ಮನೆಯಲ್ಲಿ ವಾಸ ಆಗಿರುತ್ತಾರೆ. ಹೀಗೆ ಸಿನಿಮಾ ಮಾಡುತ್ತೀರುವಾಗ ಆಪ್ತಮಿತ್ರ ಸಿನಿಮಾ ಇವರ ಕೈ ಹಿಡಿಯುತ್ತದೆ. ನಂತರ  ಸಿನಿಮಾದಿಂದ ಬಂದ ಹಣದಿಂದ  ಎಚ್​ಎಸ್ಆರ್​ ಲೆಔಟ್​​ನಲ್ಲಿ ಮನೆ ಖರೀದಿ ಮಾಡುತ್ತಾರೆ. ಆದರೆ ಈ ಹಿಂದೆ ಮಾಡಿದ್ದ ಸಾಲಗಳಿಗಾಗಿ ಈ ಮನೆಯನ್ನು ರಿಷನ್​ ಶೆಟ್ಟಿ ಅವರಿಗೆ ಮಾರಾಟ ಮಾಡಿದ್ದಾರೆ.

  2021ರಲ್ಲಿ ದ್ವಾರಕೀಶ್ ಮನೆಯನ್ನು ರಿಷಬ್ ಶೆಟ್ಟಿ ಖರೀದಿ ಮಾಡಿದ್ದರು. ಅವರು ಬರೋಬ್ಬರಿ 10 ಕೋಟಿ ರೂಪಾಯಿ ಕೊಟ್ಟು ಇದನ್ನು ಖರೀದಿ ಮಾಡಿದ್ದರು. ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಲ್ಲಿ ದ್ವಾರಕೀಶ್ ಅವರು ಮನೆ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಸರ್ಕಾರ ಈ ಸೈಟ್​ನ ದ್ವಾರಕೀಶ್ ಅವರಿಗೆ ನೀಡಿತ್ತು. ಮನೆ ತುಂಬಾನೇ ದೊಡ್ಡಾಗಿತ್ತು. ಇರೋ ಮೂರು ಜನಕ್ಕೆ ಇಷ್ಟು ದೊಡ್ಡ ಮನೆ ಏಕೆ ಎಂದು ಅವರು ಇದನ್ನು ಮಾರಾಟ ಮಾಡಿದ್ದರು. ಜೊತೆಗೆ ಈ ಮನೆ ನಿರ್ಮಾಣ ಮಾಡುವಾಗ ಲೋನ್ ಮಾಡಲಾಗಿತ್ತು. ಇತರ ಸಾಲಗಳು ಕೂಡ ಇತ್ತು. ಹೀಗಾಗಿ ಅವರು ಮನೆ ಮಾರಿದ್ದರು.

  ಆದರೆ ನಂತರ ಕೊನೆಯ ದಿನಗಳಲ್ಲಿ ತಮ್ಮ ಮಗನ ಜತೆ ಎಲೆಕ್ಟ್ರಾನ್​ ಸಿಟಿ ಬಳಿ ಇರುವ ಸ್ಮೈಲ್​ ಗ್ರಿಸ್​ ವಿಲ್ಲಾದಲ್ಲಿ ವಾಸವಾಗಿದ್ದರು. ಮನೆ, ಆಸ್ತಿ, ವಾಹನಗಳೆಲ್ಲವನ್ನು ಸಿನಿಮಾಗಾಗಿಯೆ ಮಾರಾಟ ಮಾಡುತ್ತಾರೆ.  ಸೂಪರ್​ಹಿಟ್​​ ಸಿನಿಮಾ ಮಾಡಿದ್ದ ದ್ವಾರಕೀಶ್​​ ಅವರು ನಂತ್ರ ಕೈ ಸುಟ್ಟು ಕೊಂಡಿದ್ದುರು. ಇಷ್ಟು ಜನರಿಗೆ ಸಿನಿಮಾ ಇಂಡಸ್ಟ್ರೀಯಲ್ಲಿ ಜೀವನ ಕಟ್ಟಿಕೊಳ್ಳಲು ಕಾರಣವಾಗಿದ್ದವರು, ಘಟಾನುಘಟಿಗಳ ಜತೆ ಸಿನಿಮಾ ಮಾಡಿದ್ದ ದ್ವಾರಕೀಶ್​​ ಅವರು ಸಾಲದ ಸುಳಿಯಲ್ಲಿ ಸಿಕ್ಕಿದ್ದರು.

  2ನೇ ಮದ್ವೆಗೆ ದ್ವಾರಕೀಶ್​​​ ಮೊದಲ ಪತ್ನಿಯಿಂದ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಹೆಂಡ್ತಿ, ಮಕ್ಕಳ ಸಮ್ಮುಖದಲ್ಲೇ ನಡೆದಿತ್ತು ಮತ್ತೊಂದು ಮದುವೆ

  ದ್ವಾರಕೀಶ್​ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ರಾ ವಿಷ್ಣು? ಕೊನೆಗೆ ಆಪ್ತಮಿತ್ರನಿಗೆ ಆಪ್ತರಕ್ಷಕನಾದ ರೋಚಕ ಕಥೆ ಇದು….

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts