More

    ಚಾಮರಾಜ ಕ್ಷೇತ್ರದಲ್ಲಿ ಮತದಾನ ನೀರಸ

    ಮೈಸೂರು: ಕಳೆದ ವಿಧಾನಸಭಾ ಚುನಾವಣೆ ಸೇರಿದಂತೆ ಪ್ರತಿ ಚುನಾವಣೆಯಲ್ಲಿ ಬಿರುಸಿನ ಮತದಾನ ಕಂಡುಬರುತ್ತಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಮತದಾನ ತುಸು ನೀರಸವಾಗಿ ಸಾಗಿತು.

    ಬೆಳಗ್ಗೆ 11 ಗಂಟೆ ಅವಧಿಯಲ್ಲಿ ಕ್ಷೇತ್ರದಲ್ಲಿ ಕೇವಲ ಶೇ.22.6 ರಷ್ಟು ಮತದಾನವಾಗಿತ್ತು. ಈ ವೇಳೆಗೆ ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲಿ ಶೇ.23.37, ನರಸಿಂಹರಾಜದಲ್ಲಿ 23.93 ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 24.96 ರಷ್ಟು ಮತದಾನವಾಗಿತ್ತು.

    ಬೆಳಗ್ಗೆ 7ಕ್ಕೆ ಶುರುವಾದ ಮತದಾನವು 9 ಗಂಟೆ ಹೊತ್ತಿಗೆ ಇಲ್ಲಿ ಶೇ.9.9ರಷ್ಟಾಗಿತ್ತು. ಆದರೆ, ಕೃಷ್ಣರಾಜ(ಶೇ.11.07), ನರಸಿಂಹರಾಜ(ಶೇ.10.84), ಚಾಮುಂಡೇಶ್ವರಿ ಕ್ಷೇತ್ರ(ಶೇ.10.98) ತುಸು ಹೆಚ್ಚು ಮತದಾನವಾಗಿತ್ತು ಎನ್ನುವುದು ಗಮನಾರ್ಹ.

    11 ಗಂಟೆ ಸುಮಾರಿಗೂ ಇಲ್ಲಿ ಶೇ.22.6 ರಷ್ಟು ಮತದಾನವಾಗಿತ್ತು. ಆಗಲೂ ಚಾಮರಾಜ ಕ್ಷೇತ್ರದ ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಿಗಿಂತ ಹಿಂದಿತ್ತು.
    ಮಧ್ಯಾಹ್ನ 1 ಗಂಟೆ ಹೊತ್ತಿಗೂ ಚಾಮರಾಜದಲ್ಲಿ ಶೇ.37.2 ರಷ್ಟು ಮತದಾನವಾಗಿತ್ತು. ಆ ವೇಳೆಯೂ ಕೃಷ್ಣರಾಜ(ಶೇ.37.43), ನರಸಿಂಹರಾಜ(ಶೇ.38.88), ಚಾಮುಂಡೇಶ್ವರಿ ಕ್ಷೇತ್ರ(ಶೇ.42.42) ತುಸು ಹೆಚ್ಚಿನ ಮತದಾನವಾಗಿತ್ತು. ಈ ಪ್ರಮಾಣ 3 ಗಂಟೆ ವೇಳೆಗೆ ಚಾಮರಾಜದಲ್ಲಿ(ಶೇ.47), ಕೃಷ್ಣರಾಜ(ಶೇ.47.4), ನರಸಿಂಹರಾಜ(ಶೇ.50.47), ಚಾಮುಂಡೇಶ್ವರಿ ಕ್ಷೇತ್ರ(ಶೇ.55.56) ಮತದಾನವಾಗಿತ್ತು.
    ಸಂಜೆ 5 ಗಂಟೆ ಹೊತ್ತಿಗೂ ಚಾಮರಾಜದಲ್ಲಿ ಶೇ.53.03 ರಷ್ಟು ಮತದಾನವಾಗಿತ್ತು. ಆ ವೇಳೆಯೂ ಕೃಷ್ಣರಾಜ(ಶೇ.57.49), ನರಸಿಂಹರಾಜ(ಶೇ.61.71), ಚಾಮುಂಡೇಶ್ವರಿ ಕ್ಷೇತ್ರದಲ್ಲಿ(ಶೇ.68.75) ಹೆಚ್ಚಿನ ಮತದಾನವಾಗಿತ್ತು.

    ರಣಬಿಸಿಲಿನ ಕಾರಣ ಚಾಮರಾಜ ಕ್ಷೇತ್ರ ಬಹುತೇಕ ಮತದಾನ ಬಿರುಸಿನಿಂದ ನಡೆಯಲು ಸಾಧ್ಯವಾಗಲಿಲ್ಲ. ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಯುವಜನರು, ಮಧ್ಯವಯಸ್ಕರು ಕಂಡು ಬಂದರು. ಆದರೆ, ಬಿಸಿಲಿನ ಕಾರಣ ವೃದ್ಧರು ಹೆಚ್ಚಾಗಿ ಮತಗಟ್ಟೆಗಳಲ್ಲಿ ಈ ಸಮಯದಲ್ಲಿ ಕಂಡು ಬರಲಿಲ್ಲ. ಕ್ಷೇತ್ರದಲ್ಲಿ ಕೆಲ ಸಣ್ಣಪುಟ್ಟ ಗೊಂದಲ ಬಿಟ್ಟರೆ ಎಲ್ಲೆಡೆ ಶಾಂತಿಯುತ ಮತದಾನವಾಗಿದೆ.

    3 ಗಂಟೆಯ ನಂತರ ಸರಸ್ವತಿಪುರಂನ ಟಿಟಿಎಲ್ ಶಾಲೆಯ ಮತಗಟ್ಟೆ, ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ, ಮಾತೃಮಂಡಳಿ ಶಾಲೆ, ವಿವಿ ಮೊಹಲ್ಲಾದ ನಿರ್ಮಲ ಶಾಲೆ, ಕುಂಬಾರಕೊಪ್ಪಲಿನ ಶಾಲೆ ಸೇರಿದಂತೆ ಇನ್ನಿತರ ಕಡೆ ಕೊಂಚ ಚುರುಕಿನಿಂದ ಮತದಾನ ನಡೆಯಿತು. ವೃದ್ಧರು, ಅಂಗವಿಕಲರು ವ್ಹೀಲ್ ಚೇರ್ ಬಳಕೆ ಮಾಡಿದರು. ಕುಡಿಯುವ ನೀರು ಸಹಿತ ಇತ್ಯಾದಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts