More

    ದ್ವಾರಕೀಶ್​ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ರಾ ವಿಷ್ಣು? ಕೊನೆಗೆ ಆಪ್ತಮಿತ್ರನಿಗೆ ಆಪ್ತರಕ್ಷಕನಾದ ರೋಚಕ ಕಥೆ ಇದು….

    ಬೆಂಗಳೂರು: ಸ್ಯಾಂಡಲ್​ವುಡ್​ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​​ ಅವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಚಲನಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾಗಿದೆ. ಕೆಲವು ನಟ- ನಟಿಯರಿಗೆ ಸಿನಿಮಾರಂಗದಲ್ಲಿ ಜೀವನ ರೂಪಿಸಿಕೊಳ್ಳಲು ಆಧಾರವಾಗಿ ಅವಕಾಶಗಳನ್ನು ಕೊಟ್ಟು ಕೈ ಹಿಡಿದಿದ್ದೆ ಕನ್ನಡ ಚಿತ್ರರಂಗದಲ್ಲಿನ ಕರ್ನಾಟಕದ ಕುಳ್ಳ. ಒಂದು ಕಾಲದಲ್ಲಿ ಹಿಟ್​​ ಸಿನಿಮಾಗಳನ್ನು ನೀಡಿದ್ದ ಈ ನಟ ಕೂಡಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದರು.

    ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಇಬ್ಬರೂ ಅತ್ಯಾಪ್ತ ಸ್ನೇಹಿತರು. ಆದರೆ, ಇವರಿಬ್ಬರು ಸೇರಿ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಕಾಂಬಿನೇಷನ್‌ನ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದ ಈ ಜೋಡಿಯ ಮಧ್ಯೆ ಒಂದು ಸಣ್ಣ ವಿಚಾರಕ್ಕೆ ಬಿರುಕು ಉಂಟಾಗಿತ್ತು.
    ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಚೊಚ್ಚಲ ಸಿನಿಮಾ ಕಳ್ಳ ಕುಳ್ಳ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನ ಶುರುವಾಗಿತ್ತು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜತೆ ಸಾಲುಸಾಲು ಸಿನಿಮಾ ಮಾಡಿ ಸೂಪರ್​ ಹಿಟ್​​ ಮಾಡಿದ್ದರು. 1975 ರಲ್ಲಿ ತೆರೆಕಂಡ ಕಳ್ಳ ಕುಳ್ಳ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ ಕಳ್ಳ ಕುಳ್ಳ ಜೋಡಿ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು. ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು. ಹೀಗೆ ವಿಷ್ಟು ದ್ವಾರಕೀಶ್ ಕಾಂಬಿನೇಷನ್ನಲ್ಲಿ ಸಾಕಷ್ಟು ಚಿತ್ರಗಳು ಮೂಡಿಬಂದವು. ಅದ್ರಲ್ಲಿ ಹಲವು ಚಿತ್ರಗಳು ಸೆನ್ಸೇಷನ್ ಕ್ರಿಯೇಟ್ ಮಾಡಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ನೀ ಬರೆದ ಕಾದಂಬರಿ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ ಈ ವೇಳೆ ಇವರಿಬ್ಬರ ಮಧ್ಯೆ ದೊಡ್ಡ ಬಿರುಕುಂಟಾಯ್ತು.

    ವಿಷ್ಣುವರ್ಷನ್ ಕಾಲ್ಶೀಟ್ ಕೊಡಿ ಅಂತ ನಿರ್ಮಾಪಕರು ಕೇಳಲು ಶುರು ಮಾಡಿದ್ದರು. ವಿಷ್ಣು ಬೇರೆ ನಿರ್ಮಾಪಕರಿಗೆ ಕಾಲ್ಶೀಟ್ ಕೊಡಲು ಶುರು ಮಾಡ್ತಾರೆ. ಇದ್ರಿಂದ ದ್ವಾರಕೀಶ್ ಕೊಂಚ ಕೋಪಗೊಳ್ತಾರೆ. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಅಂತ ಅಪಾರ್ಥ ಮಾಡಿಕೊಂಡು ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆಂದು ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ ಹೀಗೆ ಅನೇಕ ಸಿನಿಮಾಗಳನ್ನು ಮಾಡ್ತಾರೆ. ಆದ್ರೆ, ಅವುಗಳಲ್ಲಿ ಗೆದ್ದದ್ದು ಮೂರು ಮತ್ತೊಂದು ಮಾತ್ರ. ಇದ್ರಿಂದ ದ್ವಾರಕೀಶ್ ಆರ್ಥಿಕವಾಗಿ ಕುಸಿಯುತ್ತಾರೆ.
    ಆದರೆ ಈ ವಿಚಾರ ತಿಳಿದ ವಿಷ್ಣುವರ್ಧನ್​ ಅವರು ಮತ್ತೆ ದ್ವಾರಕೀಶ್ ಅವರ ಕೈ ಹಿಡಿದ್ರು ಮತ್ತೆ ಕಾಲ್ಶೀಟ್ ಕೊಟ್ಟರು. ಬೇರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದು ಆಪ್ತಮಿತ್ರ ಸಿನೆಮಾ ಮೂಲಕ ಮತ್ತೆ ತೆರೆ ಮೇಲೆ ಬರುತ್ತಾರೆ. ವಿಷ್ಣು ಇಲ್ಲದೆ ಮಾಡಿದ ಹಲವು ಸಿನಿಮಾಗಳು ನೆಲಕಚ್ಚಿ ಆಸ್ತಿಯನ್ನೆಲ್ಲ ಮಾರಿಕೊಂಡಿದ್ದ ದ್ವಾರಕೀಶ್ ಅವ್ರಿಗೆ ಆಪ್ತಮಿತ್ರ ತಂದುಕೊಟ್ಟ ಸಂಪತ್ತು, ಹೆಸರು ಅಷ್ಟಿಷ್ಟಲ್ಲ. ಆಪ್ತಮಿತ್ರ ಬಳಿಕ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವ್ರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿ ಆಯ್ತು. ದ್ವಾರಕೀಶ್ 5 ವರ್ಷಗಳ ಕಾಲ ವಿಷ್ಣುವಿಂದ ದೂರವಿದ್ದೆನಲ್ಲಾ ಅಂತ ಪಶ್ಚಾತಾಪ ಪಟ್ಟಿದ್ದೂ ಇದೆ.

    ಯಾಕಂದ್ರೆ ಆಪ್ತಮಿತ್ರನಿಂದ ದೂರ ಆದಾಗ ಆಗುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು. ದ್ವಾರಕೀಶ್ ನಿರ್ಮಾಣ ಮಾಡಿದ 53 ಸಿನಿಮಾಗಳ ಪೈಕಿ 14 ಸಿನಿಮಾಗಳಲ್ಲಿ ವಿಷ್ಣು ನಟಿಸಿದ್ದಾರೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಈ ಆಪ್ತಮಿತ್ರರಿಗೆ ಸಕ್ಸಸ್ ತಂದು ಕೊಟ್ಟಿವೆ.

    2ನೇ ಮದ್ವೆಗೆ ದ್ವಾರಕೀಶ್​​​ ಮೊದಲ ಪತ್ನಿಯಿಂದ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಹೆಂಡ್ತಿ, ಮಕ್ಕಳ ಸಮ್ಮುಖದಲ್ಲೇ ನಡೆದಿತ್ತು ಮತ್ತೊಂದು ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts