More

  ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ; ಅಗಲಿದ ಗೆಳೆಯನನ್ನು ನೆನದು ಕಂಬನಿ ಮಿಡಿದ ರಜನಿಕಾಂತ್

  ಚೆನ್ನೈ: ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ನಟ ದ್ವಾರಕೀಶ್​ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಲಾಗಿದೆ. ದ್ವಾರಕೀಶ್​​ ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಪರಭಾಷೆಗಳಲ್ಲೂ ಖ್ಯಾತಿ ಹೊಂದಿದ್ದ ನಟ ದ್ವಾರಕೀಶ್​ ಸೂಪರ್​ಸ್ಟಾರ್​ ರಜನಿಕಾಂತ್​ ಅವರೊಂದಿಗೆ ಸಿನಿಮಾ ಮಾಡಿದ್ದರು.

  ನೆಚ್ಚಿನ ಗೆಳೆಯನ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ರಜನಿಕಾಂತ್​, ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. 1983ರಲ್ಲಿ ರಜನಿಕಾಂತ್​-ಶ್ರೀದೇವಿ ನಟಿಸಿದ್ದ ಅಡುತ ವಾರಿಸು ಸಿನಿಮಾವನ್ನು ದ್ವಾರಕೀಶ್​ ನಿರ್ಮಾಣ ಮಾಡಿದ್ದರು.

  ಇದನ್ನೂ ಓದಿ: ಪತ್ನಿ ನಿಧನರಾದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್​

  ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀವ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ ದೊಡ್ಡ ನಿರ್ಮಾಪಕ, ನಿರ್ದೇಶಕನಾಗಿ ಬೆಳೆದು ನಿಂತ ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ನನ್ನ ಸಂತಾಪಗಳು ಎಂದು ನಟ ರಜನಿಕಾಂತ್​ ಬರೆದುಕೊಂಡಿದ್ಧಾರೆ.

  ಬುಧವಾರ (ಏಪ್ರಿಲ್​ 17) ಬೆಳಗ್ಗೆ 7 ರಿಂದ 11 ಗಂಟೆಯಿಂದ ದ್ವಾರಕೀಶ್​ ಅವರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ಧಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts