More

    ಪ್ರಧಾನಿ ಮೋದಿ ಯುವಕರು ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ: ರಾಹುಲ್​ ಗಾಂಧಿ

    ಭೋಪಾಲ್: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರಾ ಮಧ್ಯಪ್ರದೇಶದ ಶಾಜಾಪುರದಿಂದ ಮಕ್ಸಿ ಮೂಲಕ ಉಜ್ಜಯಿನಿಯತ್ತ ತೆರಳುತ್ತಿದ್ದು, ದಾರಿ ಮಧ್ಯೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇದು ಕೇಲವಲ ಯಾತ್ರೆಯಲ್ಲ ಬಿಜೆಪಿ ವಿರುದ್ಧದ ಸಿದ್ಧಾಂತದ ಹೋರಾಟ ಎಂದು ಹೇಳಿದ್ದಾರೆ.

    ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ್ ಜೋಡೋ ನ್ಯಾಯ್​ ಯಾತ್ರೆಯನ್ನು ಮಾಡಲಾಗುತ್ತಿಲ್ಲ. ಇದು ಆರ್​ಎಸ್​ಎಸ್​ ಹಾಗೂ ಬಿಜೆಪಿಯ ದ್ವೇಷಪೂರ್ಣ ಸಿದ್ಧಾಂತದ ವಿರುದ್ಧದ ಹೋರಾಟ. ನಾವು ತಡವಾಗಿ ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ಬಳಿಕ ದೇಶವನ್ನು ಎಕ್ಸ್​ರೇ ಮಾಡುತ್ತೇನೆ. ಆಗ ಯಾರ ಬಳಿ ಎಷ್ಟು ಹಣವಿದೆ ಎಂಬುದು ತಿಳಿಯುತ್ತದೆ.

    ಇದನ್ನೂ ಓದಿ: ಮಹಿಳೆಯ ಪರ್ಸ್​ನಿಂದ ಹಣ ಕದ್ದು ಪರಾರಿಯಾದ ಬಾಕ್ಸರ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ಗೆ ಮತ್ತೊಮ್ಮೆ ಮುಖಭಂಗ

    ಜನರು ಸದಾ ಮೊಬೈಲ್​ ಫೋನ್​ ಬಳಸುತ್ತಾ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಾರೆ. ಅವರಿಗೆ ಯುವಕರು ದಿನವಿಡೀ ಮೊಬೈಲ್ ಫೋನ್‌ಗಳಲ್ಲಿ ನಿರತರಾಗಬೇಕು, ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ. ಮುಂದಿನ ದಿನಗಳಲ್ಲಿ ಮೊಬೈಲ್​ ಫೋನ್​ಗಳು ಮೇಡ್​ ಇನ್​ ಮಧ್ಯಪ್ರದೇಶ ಎಂಬ ಟ್ಯಾಗ್​ನೊಂದಿಗೆ ತಯಾರಾಗಬೇಕು ಇದು ನಮ್ಮ ಪಕ್ಷ ಬಯಸುತ್ತದೆ.

    ಇತ್ತ ರಾಹುಲ್​ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಹುಲ್​ ಗಾಂಧಿ ಈ ರೀತಿಯ ಯಾತ್ರೆಗಳನ್ನು ಮಾಡುತ್ತ ಜನರ ಹಾಗೂ ತಮ್ಮ ಸಮಯವನ್ನು ಹಾಳು ಮಾಡುವ ಬದಲು ತಮ್ಮ ಪಕ್ಷದೊಳಗೆ ತಲೆದೂರಿರುವ ಅನೇಕ ಸಮಸ್ಯೆಗಳತ್ತ ಗಮನ ಹರಿಸಿದರೆ ಏನಾದರೂ ಪ್ರಯೋಜನವಾಗುತ್ತದೆ. ರಾಮಮಂದಿರದ ಉದ್ಘಾಟನೆಯ ಆಹ್ವಾನ ನೀಡಿದ್ದರು ಸಹ ರಾಹುಲ್​ ಗಾಂಧಿ ಅದನ್ನು ತಿರಸ್ಕರಿಸಿದ ಕಾರಣ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್​ ಯಾದವ್​ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts