10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

Telegram F
Published on

ಬೆಂಗಳೂರು: ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅತ್ಯಾಧುನಿಕ ಹಾಗೂ ಅತ್ಯುತ್ತಮ ಎನಿಸಿಕೊಂಡಿರುವ ಟೆಲಿಗ್ರಾಂ ತನ್ನ ಬಳಕೆದಾರರಿಗೆ ಹೊಸದೊಂದು ಕೊಡುಗೆ ಆರಂಭಿಸಿದ್ದು, ಇದರಿಂದಾಗಿ ಹತ್ತು ಸಾವಿರ ಮಂದಿಗೆ ಉಚಿತವಾಗಿ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಸಿಗಲಿದೆ.

ಈ ಕುರಿತು ಟೆಲಿಗ್ರಾಂ ಸಂಸ್ಥಾಪಕ-ಸಿಇಒ ಡು ರೋವ್ ತಮ್ಮ ಚಾನೆಲ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟೆಲಿಗ್ರಾಂ ಚಾನೆಲ್​ಗಳಿಗೆಂದೇ ಅವರು 'ಗಿವ್​ಎವೇ' ಎಂಬ ಹೊಸ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ.

ಟೆಲಿಗ್ರಾಮ್​ನ ಎಲ್ಲ ಚಾನೆಲ್​ಗೂ ಈ ಗಿವ್​ಎವೇ ಸೌಲಭ್ಯ ಘೋಷಣೆ ಮಾಡಿದ್ದು, ಚಾನೆಲ್​ನವರು ತಮ್ಮ ಸಬ್​ಸ್ಕ್ರೈಬರ್ಸ್​ಗೆ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಉಚಿತವಾಗಿ ನೀಡಬಹುದು. ಅದಲ್ಲದೆಯೂ ಬೇರೆ ಇತರ ಕೊಡುಗೆಗಳನ್ನೂ ನೀಡುವಂಥ ವ್ಯವಸ್ಥೆಯೂ ಇದರಲ್ಲಿದೆ.

ಟೆಲಿಗ್ರಾಂ ಚಾನೆಲ್ ಹೊಂದಿರುವವರು ತಮ್ಮ ಅದೃಷ್ಟವಂತ ಸಬ್​ಸ್ಕ್ರೈಬರ್ಸ್​ಗೆ ಗಿವ್​ಎವೇ ಆಗಿ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ನೀಡಬಹುದು. ಈ ಮೂಲಕ ತಮ್ಮ ಚಾನೆಲ್​ಗೆ ಹೆಚ್ಚು ಮಂದಿ ಸಬ್​ಸ್ಕ್ರೈಬರ್​ಗಳನ್ನು ಸೆಳೆಯಬಹುದು. ಆದರೆ ಇದಕ್ಕೆ ಚಾನೆಲ್​ನವರೇ ಮುಂಚಿತವಾಗಿ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಮೊತ್ತ ಪಾವತಿಸಿರಬೇಕಾಗುತ್ತದೆ.

ಡು ರೋವ್ ಕೂಡ ತಮ್ಮ ಚಾನೆಲ್​ನಲ್ಲಿ ಈ ಗಿವ್​ಎವೇ ಘೋಷಣೆ ಮಾಡಿದ್ದು, ಅವರು ತಮ್ಮ ಚಾನೆಲ್​ನ ಅದೃಷ್ಟವಂತ 10 ಸಾವಿರ ಸಬ್​​ಸ್ಕ್ರೈಬರ್ಸ್​ಗೆ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ತಾವು ಈಗಾಗಲೇ 2 ಲಕ್ಷ ಡಾಲರ್ ಟನ್​ಕಾಯಿನ್ ಮೂಲಕ ಟೆಲಿಗ್ರಾಮ್​ಗೆ ಪಾವತಿ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಡು ರೋವ್ ಅವರ ಚಾನೆಲ್ ( https://t.me/durov/236 ) ​ಗೆ ಸಬ್​ಸ್ಕ್ರೈಬ್ ಮಾಡಿಕೊಂಡಿರುವ ಬಳಕೆದಾರರು ಈ ಉಚಿತ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಪಡೆಯವ ಅವಕಾಶ ಹೊಂದಿರುತ್ತಾರೆ. ಈಗಾಗಲೇ ಸಬ್​ಸ್ಕ್ರೈಬ್ ಆಗಿರದವರು ಸಬ್​ಸ್ಕ್ರೈಬ್ ಆಗುವ ಮೂಲಕ ಈ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು.

ನ. 13ರಂದು ರಾತ್ರಿ 9.30ಕ್ಕೆ ಡು ರೋವ್ ಈ ಹತ್ತು ಸಾವಿರ ಅದೃಷ್ಟವಂತರಿಗೆ ಫ್ರೀ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ನೀಡಲಿದ್ದಾರೆ. ಅಂಥವರು 6 ತಿಂಗಳ ಕಾಲ ಈ ಉಚಿತ ಸಬ್​ಸ್ಕ್ರಿಪ್ಷನ್ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net