More

    ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

    ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್​ ಖರೀದಿ ಮಾಡಿದ ಬಳಿಕ ಅದರಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಲ್ಲದೆ, ಕೊನೆಗೆ ಅದರ ಹೆಸರನ್ನು ‘ಎಕ್ಸ್’ ಎಂದು ಬದಲಾಯಿಸಿಬಿಟ್ಟರು. ಈ ಮಧ್ಯೆ ದುಡ್ಡು ಕೊಟ್ಟರೆ ಸಾಕು ಯಾರೂ ಬೇಕಾದರೂ ಬ್ಲೂ ಟಿಕ್​ ಪಡೆಯಬಹುದು ಎಂದು ಅದನ್ನು ಖರೀದಿಗಿಟ್ಟರು. ಅರ್ಥಾತ್, ಸಬ್​ಸ್ಕ್ರಿಪ್ಷನ್ ಇದ್ದವರಿಗಷ್ಟೇ ಬ್ಲೂ ಟಿಕ್ ಮತ್ತು ಇತರ ಹೆಚ್ಚುವರಿ ಸೌಲಭ್ಯ ಎಂದು ನಿಯಮ ಮಾಡಿದರು.

    ಹೀಗೆ ಒಂದಾದ ಮೇಲೊಂದರಂತೆ ಎಕ್ಸ್​ನಲ್ಲಿ ಹಲವು ಬದಲಾವಣೆ-ಸುಧಾರಣೆಗಳನ್ನು ಮಾಡುತ್ತ ಬಂದಿರುವ ಎಲಾನ್ ಮಸ್ಕ್, ಹಲವು ಕಮರ್ಷಿಯಲ್ ಪ್ಲ್ಯಾನ್​ಗಳನ್ನು ಮಾಡುತ್ತಿದ್ದಾರೆ. ಅಂದರೆ, ಈಗಿರುವ ಮಾಮೂಲಿ ಸಬ್​ಸ್ಕ್ರಿಪ್ಷನ್​ನ ದರದ ಅರ್ಧಕ್ಕಿಂತಲೂ ಕಡಿಮೆ ದರದಲ್ಲಿ ಸಬ್​ಸ್ಕ್ರಿಪ್ಷನ್ ಆಯ್ಕೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ಎಲಾನ್ ಮಸ್ಕ್ ಬಚ್ಚಿಟ್ಟಿದ್ದ ‘ಆ ಮೂರನೇ ಮಗು’ವಿನ ವಿಷಯ ಕೊನೆಗೂ ಬಹಿರಂಗ!

    ಈ ಮೂಲಕ ಹೆಚ್ಚು ಮಂದಿ ಚಂದಾದಾರರನ್ನು ಹೊಂದುವ ಹಾಗೂ ಹೆಚ್ಚು ಆದಾಯ ಮಾಡಿಕೊಳ್ಳುವ ಗುರಿ ಹೊಂದಿರುವ ಎಲಾನ್ ಮಸ್ಕ್​ ಸಬ್​ಸ್ಕ್ರಿಪ್ಷನ್ ಸಂಬಂಧ ಹೆಚ್ಚುವರಿಯಾಗಿ ಎರಡು ಪ್ಲ್ಯಾನ್​ಗಳನ್ನು ಪರಿಚಯಿಸಿದ್ದಾರೆ. ಅಂದರೆ ಈಗಾಗಲೇ ಇರುವ ಪ್ರೀಮಿಯಂ ಪ್ಲ್ಯಾನ್ ಜತೆಗೆ ಬೇಸಿಕ್ ಮತ್ತು ಪ್ರೀಮಿಯಂ ಪ್ಲಸ್ ಎಂಬ ಎರಡು ಸಬ್​ಸ್ಕ್ರಿಪ್ಷನ್ ಪ್ಲ್ಯಾನ್ ತಂದಿದ್ದಾರೆ.

    ಇದನ್ನೂ ಓದಿ: ಮಕ್ಕಳಾದರೆ ದಂಡ ಹಾಕಬಾರದು; ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಬೇಕು: ಎಲಾನ್ ಮಸ್ಕ್​

    ಎಕ್ಸ್​ನ ಎಂದಿನ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​ ತಿಂಗಳಿಗೆ 900 ರೂ. ಇದ್ದರೆ, ಎಲಾನ್ ಮಸ್ಕ್​ ಪರಿಚಯಿಸಿರುವ ಹೊಸ ಬೇಸಿಕ್ ಸಬ್​ಸ್ಕ್ರಿಪ್ಷನ್ ತಿಂಗಳಿಗೆ 390 ರೂಪಾಯಿ. ಹಾಗೇ ಪ್ರೀಮಿಯಂ ಪ್ಲಸ್​ ತಿಂಗಳಿಗೆ 2,150 ರೂ. ಆಗಿದ್ದು, ಈ ಮೂರೂ ಪ್ಲ್ಯಾನ್​ಗಳಲ್ಲಿ ಪ್ಲ್ಯಾನ್​ಗೆ ತಕ್ಕಂತೆ ಸೌಲಭ್ಯಗಳಿವೆ.

    ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್? ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್? ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

    ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಇಲ್ಲಿ ಮನೆ ಮಾಲೀಕರೂ ಶಾರ್ಟ್​ಲಿಸ್ಟ್ ಮಾಡ್ತಾರೆ, ಆಫರ್ ಲೆಟರೂ ಕೊಡ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts