More

    ಇಲ್ಲಿ ಮನೆ ಮಾಲೀಕರೂ ಶಾರ್ಟ್​ಲಿಸ್ಟ್ ಮಾಡ್ತಾರೆ, ಆಫರ್ ಲೆಟರೂ ಕೊಡ್ತಾರೆ!

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಿಚಾರವಾಗಿ ಆಗಾಗ ವಿಶೇಷವಾದ ಪ್ರಕರಣಗಳು ಬೆಳಕಿಗೆ ಬಂದಿದ್ದಿದೆ. ಇದೀಗ ಅಂಥದ್ದೇ ಒಂದು ವಿಶೇಷ ಸಂಗತಿ ಸೋಷಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದಿದೆ.

    ಸಾಮಾನ್ಯವಾಗಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ರೆಸ್ಯೂಮ್ ಇತ್ಯಾದಿ ವಿವರ ನೋಡಿ ಶಾರ್ಟ್ ಲಿಸ್ಟ್ ಮಾಡುವುದು ಸರ್ವೇಸಾಮಾನ್ಯ. ಬಳಿಕ ಕೊನೆಯಲ್ಲಿ ತಮಗೆ ಸೂಕ್ತ ಕಂಡವರಿಗೆ ಆಫರ್ ಲೆಟರ್ ಕೊಟ್ಟು ಉದ್ಯೋಗಕ್ಕೆ ಸೇರಿಕೊಳ್ಳಲು ಆಹ್ವಾನ ಕೊಡುವುದು ಕೂಡ ಅಷ್ಟೇ ಸಹಜ. ಇಂಥ ಒಂದು ಪ್ರಕ್ರಿಯೆ ಬಾಡಿಗೆ ಮನೆ ವಿಚಾರದಲ್ಲೂ ನಡೆದರೆ ಹೇಗಿರುತ್ತದೆ?

    ಇದನ್ನೂ ಓದಿ: ಹೋಟೆಲ್​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200 ತಿಗಣೆ ಕಡಿತ!; ರೂಮ್ ಬಾಡಿಗೆ 17 ಸಾವಿರ ರೂಪಾಯಿ!

    ಛೇ.. ಬಾಡಿಗೆಗೆ ಮನೆ ಕೊಡಲು ಯಾರು ಶಾರ್ಟ್ ಲಿಸ್ಟ್ ಮಾಡ್ತಾರೆ, ಯಾರು ಆಫರ್ ಲೆಟರ್ ಎಲ್ಲ ಕೊಡ್ತಾರೆ ಎಂಬ ಪ್ರಶ್ನೆ ಮೂಡಿದರೂ, ಇಂಥದ್ದೊಂದು ಪ್ರಕರಣ ನಿಜವಾಗಿಯೂ ನಡೆದಿದೆ. ಯುವತಿಯೊಬ್ಬರಿಗೆ ಫ್ಲ್ಯಾಟ್ ಮಾಲೀಕರೊಬ್ಬರು ಶಾರ್ಟ್​ಲಿಸ್ಟ್ ಮಾಡಿ ಆಫರ್ ಲೆಟರ್ ಕೊಟ್ಟಿರುವುದನ್ನು ಆಕೆ ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನ ಈ ಅಪಾರ್ಟ್​ಮೆಂಟ್​​ನಲ್ಲಿ ನಾಯಿಯನ್ನು ಸಾಕಲು 10 ಸಾವಿರ ರೂ. ಕೊಡಬೇಕಂತೆ!

    ಡಿಂಪಲ್ಡ್​ಜಲೇಬಿ ಎಂಬ ಯೂಸರ್​ನೇಮ್​ನ ಈ ಯುವತಿ ಫ್ಲ್ಯಾಟ್ ಮಾಲೀಕರು ಕಳಿಸಿದ್ದ ಆಫರ್ ಲೆಟರ್​ (ಆಫರ್ ಮೆಸೇಜ್​) ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದಾರೆ. ‘ಆ ದಿನ ನಿಮ್ಮಿಬ್ಬರನ್ನೂ ಭೇಟಿಯಾಗಲು ಸಂತೋಷವಾಯಿತು. ನಮ್ಮ ಸಭೆಯ ಸಮಯದಲ್ಲಿ ನಾನು ಹೇಳಿದಂತೆ, ಆಸ್ತಿಯಲ್ಲಿ ತಮ್ಮ ಆಸಕ್ತಿ ವ್ಯಕ್ತಪಡಿಸಿದವರನ್ನು ನಾನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ನಾನು ಇನ್ನೂ ಎಲ್ಲರೊಂದಿಗೆ ಭೇಟಿಯಾಗುವ ಅವಕಾಶ ಹೊಂದಿಲ್ಲದಿದ್ದರೂ, ಅವರಲ್ಲಿ ಯಾರು ಉತ್ತಮವಾಗಿ ಇಷ್ಟವಾಗಬಲ್ಲರು ಮತ್ತು ಆವರಣವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಕುರಿತು ಯೋಚನೆ ಮಾಡಿ ಯೋಜನೆ ಹಾಕಿಕೊಂಡಿದ್ದೇನೆ. ನನ್ನ ಶಾರ್ಟ್​ಲಿಸ್ಟ್​ನಲ್ಲಿ ನಿಮ್ಮಿಬ್ಬರಿಗೂ ಮೊದಲ ಆಫರ್ ನೀಡುತ್ತಿದ್ದೇನೆ’ ಎಂಬುದಾಗಿ ಕಳಿಸಿದ್ದ ಮೆಸೇಜ್ ಈಕೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಮನೆ ಮಾಲೀಕರೊಂದಿಗೆ ಸಂದರ್ಶನದ ನಂತರ ನಾವು ಆಯ್ಕೆಯಾದಾಗ ಕ್ಷಣ ಎಂಬ ಕ್ಯಾಪ್ಷನ್​ನೊಂದಿಗೆ ಆಕೆ ಈ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದಲ್ಲದೆ, ಇಂಥದ್ದನ್ನು ನಿರೀಕ್ಷಿಸಿರಲಿಲ್ಲ ಎನ್ನುವ ಜತೆಗೆ, ನಾವು ಆ ಮನೆಯನ್ನು ತಿರಸ್ಕರಿಸಿದೆವು ಎಂಬುದಾಗಿಯೂ ಹೇಳಿಕೊಂಡಿದ್ದಾರೆ.

    ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿದ ಪೊಲೀಸರು: ಕಾರಣ ಇದೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts